2016ರ ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು

Written By:
Subscribe to Oneindia Kannada

ಬೆಂಗಳೂರು, ಮೇ 16 : ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ 79.16 ಫಲಿತಾಂಶ ಬಂದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮಲ್ಲೇಶ್ವರಂನಲ್ಲಿರುವ ಎಸ್ಎಸ್ಎಲ್‌ಸಿ ಬೋರ್ಡ್‌ನಲ್ಲಿ ಫಲಿತಾಂಶ ಪ್ರಕಟಿಸಿದರು. ಈ ಬಾರಿಯೂ ಬಾಲಕಿಯರದ್ದು ಮತ್ತೆ ಮೇಲುಗೈ.

ಒಟ್ಟು ಫಲಿತಾಂಶ:
ರಾಜ್ಯದಲ್ಲಿ ಈ ಬಾರಿ ಒಟ್ಟು 7,79,753 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 6,17,235 ಜನ ತೇರ್ಗಡೆಯಾಗಿದ್ದು ಶೇ. 79.16 ಫಲಿತಾಂಶ ಸಿಕ್ಕಿದೆ.[SSLC ರಿಸಲ್ಟ್ : ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್]

sslc

ಬಾಲಕ ಮತ್ತು ಬಾಲಕಿಯರು
ರಾಜ್ಯದಲ್ಲಿ 3,99,619 ಜನ ಬಾಲಕರು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ 3,03,088 ತೇರ್ಗಡೆಯಾಗಿ ಶೇ. 75.84 ಫಲಿತಾಂಶ ಪಡೆದುಕೊಂಡಿದ್ದಾರೆ. 3,80,134 ಬಾಲಕಿಯರಲ್ಲಿ 3,14,147 ಬಾಲಕಿಯರು ತೇರ್ಗಡೆಯಾಗಿ ಶೇ. 82.64 ಫಲಿತಾಂಶ ಪಡೆದುಕೊಂಡಿದ್ದಾರೆ.[ಫಲಿತಾಂಶ ಆನ್‌ಲೈನ್‌ನಲ್ಲಿ ಲಭ್ಯ]

ಶೂನ್ಯ ಫಲಿತಾಂಶ:
52 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಮೂರು ಸರ್ಕಾರಿ ಶಾಲೆಗಳು, ಆರು ಅನುದಾನಿತ ಮತ್ತು 43 ಅನುದಾನ ರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಕಲಬುರಗಿ ಜಿಲ್ಲೆ ಕುಖ್ಯಾತಿ ಪಡೆದುಕೊಂಡಿದ್ದು 11 ಶಾಲೆಗಳು ಶೂನ್ಯ ದಾಖಲೆ ಮಾಡಿವೆ.

ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಫಲಿತಾಂಶ:
ಪರೀಕ್ಷೆ ಬರೆದ 2707 ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳಲ್ಲಿ 1647 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪದವಿ ಪೂರ್ವ ಕಾಲೇಜಿನೊಂದಿಗೆ ಇರುವ ಪ್ರೌಢಶಾಲೆಗಳ ಫಲಿತಾಂಶ ಕಡಿಮೆಯಾಗಿದೆ. ಸ್ವತಂತ್ರ ಪ್ರೌಢಶಾಲೆಗಳು ಶೇ. 75.34 ಫಲಿತಾಂಶ ಪಡೆದರೆ, ಪದವಿ ಪೂರ್ವ ಕಾಲೇಜಿನೊಂದಿಗೆ ಇರುವ ಪ್ರೌಢಶಾಲೆಗಳು ಶೇ. 58.43 ಫಲಿತಾಂಶ ಪಡೆದಿವೆ.

ಗ್ರಾಮೀಣ ಭಾಗದವರೇ ಮುಂದೆ
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ. 80.36 ಫಲಿತಾಂಶ ಪಡೆದರೆ, ನಗರ ಭಾಗದವರು ಶೇ. 77.16 ಫಲಿತಾಂಶ ಪಡೆದು ಕೊಂಚ ಹಿಂದಕ್ಕೆ ಬಿದ್ದಿದ್ದಾರೆ.

ವಿಷಯವಾರು ಫಲಿತಾಂಶ:
1. ಪ್ರಥಮ ಭಾಷೆ- ಶೇ. 91.06
2. ದ್ವಿತೀಯ ಭಾಷೆ-ಶೇ.88.79
3. ತೃತೀಯ ಭಾಷೆ-92.79
4. ಗಣಿತ- ಶೇ. 85.46
5. ವಿಜ್ಞಾನ-ಶೇ.85.97
6. ಸಮಾಜ ವಿಜ್ಞಾನ- ಶೇ. 89.70

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Secondary education Examination Board (KSEEB) announced SSLC board examination 2016 results on Monday, May 16. Here goes couple of highlights.
Please Wait while comments are loading...