SSLC ಫಲಿತಾಂಶ: ಬೇಡದ ವಿಷಯಕ್ಕೆ ಕಲಬುರಗಿ ಪ್ರಥಮ

Written By:
Subscribe to Oneindia Kannada

ಬೆಂಗಳೂರು, ಮೇ 16 : 2016ನೇ ಸಾಲಿನ ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಉತ್ತಮ ಫಲಿತಾಂಶ ಪಡೆದ ಜಿಲ್ಲೆ, ಅತಿ ಕಡಿಮೆ ಫಲಿತಾಂಶ ಪಡೆದ ಜಿಲ್ಲೆ ಎಲ್ಲ ಸುದ್ದಿಗಳನ್ನು ನೀವು ಕೇಳಿರುತ್ತೀರಿ.

ಪರೀಕ್ಷೆ ವೇಳೆ ನಕಲು ಚತುರರು ಕಡಿಮೆ ಇರಲ್ಲ. ಈ ಬಾರಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ ಕಾರಣ ನಕಲು ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಜತೆಗೆ ನಕಲು ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದರು.[2016ರ ಎಸ್‌ಎಸ್ಎಲ್‌ಸಿ ಫಲಿತಾಂಶದ ಮುಖ್ಯಾಂಶಗಳು]

copy

ಕಲಬುರಗಿ ಜಿಲ್ಲೆಗೆ ನಕಲು ಚತುರರು ಅಗ್ರ ಸ್ಥಾನ ಸಿಗುವಂತೆ ಮಾಡಿ ಕುಖ್ಯಾತಿ ತಂದುಕೊಟ್ಟಿದ್ದಾರೆ. 18 ಜಿಲ್ಲೆಗಳಲ್ಲಿ 76 ಚತುರರು ನಕಲು ಮಾಡಲು ಹೋಗಿ ಪರೀಕ್ಷಾ ಕೋಣೆಯಿಂದ ಹೊರಬಿದ್ದಿದ್ದಾರೆ. ಪಟ್ಟಿ ನೋಡಿಕೊಂಡು ಬನ್ನಿ ....[SSLC ರಿಸಲ್ಟ್ : ಬೆಂಗಳೂರು ಗ್ರಾಮಾಂತರ ಫಸ್ಟ್, ಬಳ್ಳಾರಿ ಲಾಸ್ಟ್]

1. ಕಲಬುರಗಿ-17 ವಿದ್ಯಾರ್ಥಿಗಳು
2. ಯಾದಗಿರಿ-12 ವಿದ್ಯಾರ್ಥಿಗಳು
3. ವಿಜಯಪುರ-9 ವಿದ್ಯಾರ್ಥಿಗಳು
4. ತುಮಕೂರು-7 ವಿದ್ಯಾರ್ಥಿಗಳು
5. ಗದಗ, ಚಿಕ್ಕೋಡಿ-7 ವಿದ್ಯಾರ್ಥಿಗಳು
6. ಕೊಪ್ಪಳ, ರಾಯಚೂರು-4 ವಿದ್ಯಾರ್ಥಿಗಳು
7. ಕೋಲಾರ -3 ವಿದ್ಯಾರ್ಥಿಗಳು
8. ಮಂಡ್ಯ, ಬಳ್ಳಾರಿ- 2 ವಿದ್ಯಾರ್ಥಿಗಳು
9. ಬಾಗಲಕೋಟೆ, ಬೆಳಗಾವಿ, ಧಾರವಾಡ, ಬೆಂಗಳೂರು ದಕ್ಷಿಣ- ತಲಾ ಒಬ್ಬರು ವಿದ್ಯಾರ್ಥಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Secondary education Examination Board (KSEEB) announced SSLC board examination 2016 results on Monday, May 16. Here is the list of who are trying to copy in examination.
Please Wait while comments are loading...