ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್
ಬೆಂಗಳೂರು, ಮಾ. 11: ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 12, ಗುರುವಾರ ಆರಂಭವಾಗಲಿದ್ದು ಮಾ. 27ಕ್ಕೆ ಕೊನೆಗೊಳ್ಳಲಿದೆ. ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ.
ರಾಜ್ಯದಲ್ಲಿ ಒಟ್ಟು 1,017 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.6, 10, 939 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 82,067 ಪುನರಾವರ್ತಿತ ವಿದ್ಯಾರ್ಥಿಗಳು, 4,96,900 ಹೊಸ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ.[ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ]
5,546 ಸಿಬ್ಬಂದಿಯನ್ನು ಪರೀಕ್ಷೆಗಾಗಿ ನಿಯೋಜನೆ ಮಾಡಲಾಗುತ್ತದೆ. ಇವರಲ್ಲಿ 1,017 ಅಧೀಕ್ಷಕರು, 1,017 ಸಹ ಮುಖ್ಯ ಅಧೀಕ್ಷಕರು, 2,657 ಜಾಗೃತದಳದ ಸದಸ್ಯರು, 855 ತಾಲೂಕು ಮತ್ತು ಜಿಲ್ಲಾ ವಿಶೇಷ ಜಾಗೃತದಳದ ಸದಸ್ಯರು ಸೇರಿದ್ದಾರೆ. ಮಾರ್ಚ್ 12 ರಂದು ಬಿಸಿನಸ್ ಸ್ಟಡೀಸ್ ಮತ್ತು ಕೆಮೆಸ್ಟ್ರಿ ಪರೀಕ್ಷೆಗಳು ನಡೆಯಲಿವೆ.[ಆನ್ ಲೈನ್ ನಲ್ಲಿ ಸಿಇಟಿ ಅರ್ಜಿ ತುಂಬುವುದು ಹೇಗೆ?]
ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಅಲ್ಲದೇ ಸುತ್ತ ಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿದೆ ಎಂದು ಪಿಯು ಪರೀಕ್ಷಾ ಮಂಡಳಿ ನಿರ್ದೇಶಕಿ ಸುಷಮಾ ಗೋಡಬೋಲೆ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಕುರಿತ ಗೊಂದಲಗಳನ್ನು ಬಗೆಹರಿಸಲು ಪಿಯು ಮಂಡಳಿ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆಗಳು 080-23468740/ 8741
ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳು...
* ಪರೀಕ್ಷೆಗೆ ಹೊರಡುವ ಮುನ್ನ ಪ್ರವೇಶ ಪತ್ರ, ಪೆನ್ ಮುಂತಾದ ಅಗತ್ಯವಿರುವ ವಸ್ತುಗಳನ್ನು ಮರೆಯದಿರಿ
* ಒತ್ತಡಕ್ಕೆ ಒಳಗಾಗದೆ ಪ್ರಶ್ನೆಗಳನ್ನು ಸರಿಯಾಗಿ ಓದಿಕೊಂಡು ಉತ್ತರಿಸಿ
* ವಿಶ್ವಕಪ್ ಕ್ರಿಕೆಟ್ ನಿಂದ ದೂರವಿರಿ. ಮುಗಿದ ಪರೀಕ್ಷೆಗಳ ಬಗ್ಗೆ ಹೆಚ್ಚು ಯೋಚಿಸದೆ ಮುಂದಿನ ವಿಷಯಕ್ಕೆ ಸಜ್ಜಾಗಿ
* ಪರೀಕ್ಷಾ ಕೇಂದ್ರಗಳಿಗೆ ಅರ್ಧಗಂಟೆ ಮೊದಲು ಹಾಜರಾಗಿ ಒನ್ ಇಂಡಿಯಾ ಕನ್ನಡ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.