ಕರ್ನಾಟಕ ಗ್ರಾ.ಪಂ ಚುನಾವಣೆಯಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು, ಸಪ್ಟೆಂಬರ್.04: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ 2020ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ತೀರ್ಮಾನಿಸಿದೆ. ರಾಜ್ಯ ಚುನಾವಣಾ ಆಯೋಗವು ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ.
Recommended Video
ಕೊವಿಡ್-19 ತಡೆಗಟ್ಟುವುದರ ಜೊತೆಗೆ ಸುರಕ್ಷಿತ ರೀತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸುವುದಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಆಗಸ್ಟ್.18ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ನಿಪುಣರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಗಿತ್ತು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿರುವ ಸಲಹೆಗಳನ್ನು ಆಧರಿಸಿ ರಾಜ್ಯ ಚುನಾವಣಾ ಆಯೋಗವು ಚುನಾವಣೆ ಸಂದರ್ಭದಲ್ಲಿ ಅನುಸರಿಸಲು ಪ್ರಮಾಣಿತ ಕಾರ್ಯನಿರ್ವಹಣಾ ಪದ್ಧತಿ(SOP)ಯನ್ನು ರಚಿಸಿದೆ. ಈ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ.

ಕೊರೊನಾವೈರಸ್ ನಿಯಂತ್ರಣಕ್ಕೆ ಸಾಮಾನ್ಯ ಮಾರ್ಗಸೂಚಿ
- ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ
- ಗ್ರಾ.ಪಂ ಚುನಾವಣೆಗೆ ಬಳಸುವ ಕೊಠಡಿ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್ ನಿಂದ ಕೈ ತೊಳೆದುಕೊಳ್ಳುವುದ ಕಡ್ಡಾಯ
- ಪ್ರತಿಹಂತದಲ್ಲಿ ಭೌತಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು
- ಗ್ರಾ.ಪಂ ಚುನಾವಣೆಗೆ ಸಾಧ್ಯವಾದಷ್ಟು ವಿಶಾಲವಾದ ಕೊಠಡಿಗಳನ್ನು ಬಳಸುವುದು

ಚುನಾವಣಾ ಅಗತ್ಯ ದಾಸ್ತಾನು ಕೊಠಡಿ ಹೇಗಿರಬೇಕು?
- ರಾಜ್ಯದಲ್ಲಿ ನಡೆಯಲಿರುವ ಗ್ರಾ.ಪಂ ಚುನಾವಣೆಗೆ ಅಗತ್ಯವಿರುವ ಫಾರಂ ಮತ್ತು ಕವರ್ ಗಳು ಸೇರಿದಂತೆ ಇತರೆ ದಾಸ್ತಾನುಗಳನ್ನು ಡಿಸ್ ಇನ್ಫೆಕ್ಟ್ ಮಾಡಿದ ಕೊಠಡಿಯಲ್ಲಿ ಇರಿಸಬೇಕು. ಈ ಕೊಠಡಿಯಲ್ಲಿ ಗೊತ್ತುಪಡಿಸಿದ ಅಧಿಕಾರಿಗಳಿಗೆ ಮಾತ್ರ ಪ್ರವೇಶವಿದ್ದು, ಕೊವಿಡ್-19 ಮುನ್ನೆಚ್ಚರಿಕೆ ಕ್ರಮವನ್ನು ಅಧಿಕಾರಿಗಳು ಪಾಲಿಸಬೇಕು.
- ಆಯೋಗದ ನಿರ್ದೇಶನದಂತೆ ನೇಮಕವಾದ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಮತ್ತು ಮೀಸಲು ಚುನಾವಣಾಧಿಕಾರಿಗಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಿ ತರಬೇತಿ ನೀಡಲಾಗುವುದು. ಸಾಧ್ಯವಾದಲ್ಲಿ APP/VC/PPT/Vidoe Clips ಮೂಲಕ ತರಬೇತಿ ನೀಡಲಾಗುವುದು.

ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಹೇಗಿರುತ್ತೆ?
ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು 1993ರ ಅಡಿಯಲ್ಲಿ ಚುನಾವಣೆ ನಡೆಸಲಾಗುತ್ತಿದ್ದು, ಈ ಅವಧಿಯಲ್ಲಿ ಚುನಾವಣಾಧಿಕಾರಿಗಳು ಪ್ರಮಾಣಿತ ಕಾರ್ಯನಿರ್ವಹಣಾ ಪದ್ಧತಿ(SOP)ಯನ್ನು ಅನುಸರಿಸಬೇಕಾಗಿರುತ್ತದೆ.
- ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿ ಮತ್ತು ಅಭ್ಯರ್ಥಿಗಳು ಕೈಗಳನ್ನು ಸ್ಯಾನಿಟೈಸ್ ನಿಂದ ತೊಳೆದುಕೊಳ್ಳುವುದಲ್ಲದೇ, ಹ್ಯಾಂಡ್ ಗ್ಲೌಸ್, ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ.
- ನಾಮಪತ್ರ ಸಲ್ಲಿಸಲು ಆಗಮಿಸುವ ಅಭ್ಯರ್ಥಿಗಳಿಗೆ ಟೋಕನ್ ನೀಡಲಿದ್ದು, ನಿಗದಿತ ಸಮಯ ಮುಗಿದ ನಂತರ ನಾಮಪತ್ರ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಒಂದು ಬಾರಿಗೆ ಒಬ್ಬ ಅಭ್ಯರ್ಥಿ ಮತ್ತು ಒಬ್ಬ ಸೂಚಕರಿಗೆ ಮಾತ್ರ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸಿ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ
- ಕೊವಿಡ್-19 ಸೋಂಕು ತಗುಲಿರುವ ವ್ಯಕ್ತಿಯು ನಾಮಪತ್ರ ಸಲ್ಲಿಸಲು ಬಯಸಿದ್ದಲ್ಲಿ ಸೂಚಕರ ಮೂಲಕ ಅವಕಾಶ ಕಲ್ಪಿಸಿ ಕೊಡಲಾಗುವುದು
- ಕ್ಷೇತ್ರವಾರು ಹಾಜರಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ನಾಮಪತ್ರಗಳ ಪರಿಶೀಲನೆ ನಡೆಸಬೇಕು. ಈ ಸಂದರ್ಭದಲ್ಲಿ ಕ್ಷೇತ್ರದ ಅಭ್ಯರ್ಥಿ ಅಥವಾ ಸೂಚಕರಿಗೆ ಮಾತ್ರ ಚುನಾವಣಾಧಿಕಾರಿ ಕಚೇರಿ ಪ್ರವೇಶಿಸಲು ಅನುಮತಿ ಇರುತ್ತದೆ
- ನಾಮಪತ್ರ ವಾಪಸ್ ಪಡೆಯುವ ಸಂದರ್ಭದಲ್ಲಿ ಕೂಡಾ ಅಭ್ಯರ್ಥಿ/ಸೂಚಕ / ಅಭ್ಯರ್ಥಿ ಅಧಿಕೃತಗೊಳಿಸಿರುವ ಏಜೆಂಟ್ ಮೂಲಕ ನಾಮಪತ್ರವನ್ನು ವಾಪಸ್ ಪಡೆಯುವ ಬಗ್ಗೆ ನೋಟಿಸ್ ನೀಡಬಹುದು. ಈ ಸಂದರ್ಭದಲ್ಲಿ ಹ್ಯಾಂಡ್ ಸ್ಯಾನಿಟೈಸ್, ಮುಖಕ್ಕೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಿವುದು ಕಡ್ಡಾಯ
- ಚುನಾವಣಾ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಸಂದರ್ಭದಲ್ಲಿ ಹೆಚ್ಚಿನ ಜನರನ್ನು ಸೇರಿಸದಂತೆ ಎಚ್ಚರಿಕೆ ವಹಿಸುವುದು. ಒಂದು ಚಿಹ್ನೆಯನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕೇಳಿದ್ದಲ್ಲಿ ಲಾಟರಿ ಎತ್ತುವ ಮೂಲಕ ಚಿಹ್ನೆ ವಿತರಣೆ ಮಾಡಲಾಗುವುದು. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದು

ಗ್ರಾ.ಪಂ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಹೇಗಿರಬೇಕು?
- ಗ್ರಾ.ಪಂ ಚುನಾವಣೆಯು ಪಕ್ಷರಹಿತವಾಗಿದ್ದು, ಕ್ಷೇತ್ರದ ವ್ಯಾಪ್ತಿ ಬಹಳ ಚಿಕ್ಕದಾಗಿರುತ್ತದೆ. ಈ ಹಿನ್ನೆಲೆ ಗರಿಷ್ಠ 5 ಜನರೊಂದಿಗೆ ಮಾತ್ರ ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಪ್ರಚಾರ ಮಾಡಬಹುದು. ಈ ವೇಳೆ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ
- ಅಭ್ಯರ್ಥಿಗಳು ನಿಯಮಗಳನುಸಾರ ಮುದ್ರಿಸಿದ ಕರಪತ್ರಗಳನ್ನು ಹಂಚಬಹುದು. ಆದರೆ ಕರಪತ್ರ ಹಂಚುವವರು ಹ್ಯಾಂಡ್ ಸ್ಯಾನಿಟೈಸ್ ಬಳಸಬೇಕು, ಹ್ಯಾಂಡ್ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿರಬೇಕು.
- ಕೊರೊನಾವೈರಸ್ ಹಿನ್ನೆಲೆ ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ ಹಾಗೂ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
- ಕೊವಿಡ್-19 ಸೋಂಕು ಹೊಂದಿರುವ ಅಭ್ಯರ್ಥಿಗಳು ನೇರವಾಗಿ ಜನರ ನಡುವೆ ಮತ್ತು ಸಮುದಾಯದಲ್ಲಿ ಪ್ರಚಾರ ಮಾಡುವಂತಿಲ್ಲ. ಬದಲಿಗೆ ದೃಶ್ಯ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬಹುದು
- ಕೊರೊನಾವೈರಸ್ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ತಮ್ಮ ಕ್ಷೇತ್ರಗಳನ್ನು ನಡೆಸುವುದಕ್ಕೆ ಅವಕಾಶವಿದೆ
ಮತದಾನ ಕೇಂದ್ರದಲ್ಲಿ ಹೇಗಿರಬೇಕು ಸಿದ್ಧತೆ
ಮತದಾನ ಕೇಂದ್ರದಲ್ಲಿ ಸಿದ್ಧತೆಗೆ ಮಾರ್ಗಸೂಚಿ
- ಗರಿಷ್ಟ 1000 ಮತಗಳಿಗೆ ಒಂದು ಮತಗಟ್ಟೆಯನ್ನು ತೆರೆಯುವುದು
- ಮತದಾನಕ್ಕೆ ನಿಗದಿಪಡಿಸಿದ ಹಾಗೂ ಅಕ್ಕಪಕ್ಕದ ಕೊಠಡಿಗಳನ್ನು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಿ ಸಿದ್ಧಗೊಳಿಸಬೇಕು
- ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿ, ಪೊಲಿಂಗ್ ಅಧಿಕಾರಿಗಳು, ಪೊಲಿಂಗ್ ಏಜೆಂಟರು ಕೂರುವ ಸ್ಥಳವನ್ನು ನಿಯಮದಂತೆ ಜೋಡಿಸಿರಬೇಕು.
- ಮತದಾನದ ಗೌಪ್ಯತೆ ಕಾಪಾಡಲು ಕಂದಾಯ ಅಧಿಕಾರಿಗಳ ಮೂಲಕ ಕಾರ್ಡ್ ಬೋರ್ಡ್ ಗಳನ್ನು ಅವವಡಿಸುವುದು
- ಮಸ್ಟರಿಂಗ್ ದಿನ ಸಂಜೆ ಮತದಾನದ ಅಧಿಕಾರಿಗಳು ಉಳಿದುಕೊಳ್ಳುವುದಕ್ಕೆ ಪಕ್ಕದಲ್ಲೇ ಸ್ಯಾನಿಟೈಸ್ ಮಾಡಿದ ಕೊಠಡಿಯನ್ನು ನೀಡುವುದು
- ಮತಕೇಂದ್ರದಿಂದ 200 ಮೀಟರ್ ದೂರದಲ್ಲಿ ಮತದಾರರಿಗೆ ಗುರುತಿನ ಚೀಟಿ ನೀಡುವುದಕ್ಕೆ ಜಾಗವನ್ನು ಗುರುತಿಸುವುದು. ಈ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಭ್ಯರ್ಥಿಗಳು ಮತದಾರರಿಗೆ ಗುರುತಿನ ಚೀಟಿಯನ್ನು ನೀಡಬಹುದು

ಚುನಾವಣೆ ಮಸ್ಟರಿಂಗ್ ಕಾರ್ಯ ನಡುವುದು ಹೇಗೆ?
- ಮತದಾನದ ಮಸ್ಟರಿಂಗ್ ಕಾರ್ಯವನ್ನು ಮುಂಚಿತವಾಗಿ ಮಾಡುವುದರಿಂದ ಎಲ್ಲ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಲಾಗಿರುತ್ತದೆ. ಮತಗಟ್ಟೆ ಅಧಿಕಾರಿಗಳನ್ನು ಸಂಬಂಧಿಸಿದ ಮತಗಟ್ಟೆಗೆ ತಲುಪಿಸಲು ರೂಟ್ ಮ್ಯಾಪ್ ಸಿದ್ಧಪಡಿಸುವುದು.
- ಮಸ್ಟರಿಂಗ್ ದಿನ ಎಲ್ಲ ಅಧಿಕಾರಿಗಳು ಒಂದೇ ಕಡೆಗೆ ಸೇರುವುದನ್ನು ತಪ್ಪಿಸಲು ತಾಲೂಕು ಕೇಂದ್ರಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯುವುದು.
- ಯಾವ ಮಸ್ಟರಿಂಗ್ ಕೇಂದ್ರಗಳಲ್ಲಿ ಯಾವ ರೂಟ್ ಮತಗಟ್ಟೆಗಳು ಬರುತ್ತವೆ ಎನ್ನುವ ಬಗ್ಗೆ ಲಿಖಿತ ನೋಟಿಸ್ ಪ್ರದರ್ಶಿಸುವುದು
- ಮತಗಟ್ಟೆ ಅಧಿಕಾರಿಗಳು ಯಾವ ಮಸ್ಟರಿಂಗ್ ಕೇಂದ್ರಕ್ಕೆ ತೆರಳಬೇಕು ಎನ್ನುವುದನ್ನು ಮುಂಚಿತವಾಗಿಯೇ ತಿಳಿಸಬೇಕು. ಇದರಿಂದ ಹೆಚ್ಚಿನ ಅಧಿಕಾರಿಗಳು ಒಂದು ಕಡೆಯಲ್ಲಿ ಸೇರುವುದನ್ನು ತಪ್ಪಿಸಬಹುದು
- ಅಗತ್ಯವೆನಿಸಿದಾಗ ಮತಗಟ್ಟೆಯ ಅಧಿಕಾರಿಗಳು ಭೇಟಿಯಾಗಲು ಒಂದು ನಿರ್ದಿಷ್ಟ ಕೊಠಡಿ ಗೊತ್ತುಪಡಿಸುವುದು
- ಮಸ್ಟರಿಂಗ್ ದಿನ ಮಸ್ಟರಿಂಗ್ ಕೇಂದ್ರಕ್ಕೆ ತೆರಳುವ ಪ್ರತಿಯೊಬ್ಬ ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಧರಿಸಬೇಕು
- ಮಸ್ಟರಿಂಗ್ ಕೇಂದ್ರ ಪ್ರವೇಶಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್ ನಡೆಸುವುದು. ಕೊವಿಡ್-19 ಸೋಂಕಿನ ಲಕ್ಷಣ ಇಲ್ಲದ ಅಧಿಕಾರಿಗಳಿಗೆ ಮಾತ್ರ ಪ್ರವೇಶ ನೀಡುವುದು
- ಮತದಾನದ ದಿನ ಒಬ್ಬ ಅಧಿಕಾರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಮತ್ತು ಸ್ಯಾನಿಟೈಸರ್ ಬಾಟಲ್ ನ್ನು ನೀಡುವುದು
- ಮತಗಟ್ಟೆ ಸಾಮಗ್ರಿ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಒಂದು ವಾಹನದಲ್ಲಿ ನಿರ್ದಿಷ್ಟ ಸಿಬ್ಬಂದಿಯನ್ನು ಮಾತ್ರ ಕಳುಹಿಸಿ ಕೊಡುವುದು

ಮತದಾನದ ದಿನ ಪ್ರಕ್ರಿಯೆಗಳು ಹೇಗಿರಬೇಕು?
- ಮತದಾನದ ದಿನ ಪ್ರತಿಯೊಬ್ಬ ಪೊಲಿಂಗ್ ಅಧಿಕಾರಿ ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್ ಗ್ಲೌಸ್ ಧರಿಸಬೇಕು
- ಮತದಾನಕ್ಕೆ ಸಾಲಾಗಿ ನಿಲ್ಲುವ ಮತದಾರರ ನಡುವೆ ಸಾಮಾಜಿಕ ಅಂತರವಿರಬೇಕು. ಮುಖಕ್ಕೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಗಳನ್ನು ಧರಿಸುವುದು ಕಡ್ಡಾಯ
- ಪ್ರತಿಯೊಂದು ಮತಕೇಂದ್ರಗಳಲ್ಲಿ ಮತದಾನಕ್ಕೆ ತೆರಳುವ ಮುನ್ನ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲು ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವುದು
- ಮತಗಟ್ಟೆಯ ಏಜೆಂಟರ್ ಗಳು ನಿಗದಿತ ಸಮಯದಲ್ಲೇ ಮತಗಟ್ಟೆಯಲ್ಲಿ ಹಾಜರಿದ್ದು ಮೀಸಲಿರಿಸಿದ ಆಸನದಲ್ಲಿ ಕುಳಿತಿರಬೇಕು
- ಮತದಾರರು ಮತ್ತು ಮತಗಟ್ಟೆ ಅಧಿಕಾರಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು
- ಮಹಿಳಾ ಮತ್ತು ಪುರುಷ ಮತದಾರರಿಗೆ ಪ್ರತ್ಯೇಕ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸುವುದು
- ಮತದಾರರ ಗುರುತು ಪತ್ತೆ ಬಳಿಕ ಗುರುತಿನ ಚೀಟಿಯನ್ನು ಮತಗಟ್ಟೆಯಲ್ಲೇ ಇರಿಸಿದ ಡಬ್ಬದಲ್ಲಿ ಹಾಕುವಂತೆ ಸೂಚಿಸುವುದು
- ಮತದಾನದ ಬಳಿಕ ಕೈಗಳನ್ನು ಮುಟ್ಟದೇ ಮತಗಟ್ಟೆಯ ಅಧಿಕಾರಿಯು ಮತದಾರರ ಕೈಬೆರಳಿಗೆ ಅಳಿಸಲಾಗದ ಶಾಯಿ ಹಾಕುವುದು
- ಕೊವಿಡ್-19 ಸೋಂಕಿತರು ಮತ ಚಲಾವಣೆಯ ಹಕ್ಕನ್ನು ಹೊಂದಿದ್ದು, ಆಸ್ಪತ್ರೆ ಅಥವಾ ಹೋಮ್ ಕ್ವಾರೆಂಟೈನ್ ನಲ್ಲಿದ್ದರೆ ಅಂಥವರಿಗಾಗಿ ರಾಜ್ಯ ಚುನಾವಣಾ ಆಯೋಗವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ
- ಮತದಾನ ಮುಕ್ತಾಯದ ಬಳಿಕ ಮತಪೆಟ್ಟಿಗೆಯನ್ನು ಸೀಲ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಗದಿತ ವಾಹನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಭದ್ರತಾ ಕೊಠಡಿಗೆ ತೆಗೆದುಕೊಂಡು ಹೋಗುವುದು.

ಮತಎಣಿಕೆ ಸಿದ್ಧತೆ ಮತ್ತು ಮತಎಣಿಕೆ ಕಾರ್ಯ
- ಮತ ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿ ಮತ್ತು ಏಜೆಂಟರಿಗೆ ಮಾತ್ರ ಕುಳಿತುಕೊಳ್ಳುವುದುಕ್ಕೆ ಅವಕಾಶ ಕಲ್ಪಿಸುವುದು
- ಮತ ಎಣಿಕೆ ಕೇಂದ್ರಗಳ ಹೊರಭಾಗದಲ್ಲಿ ಜನರು ಗುಂಪು ಗುಂಪಾಗಿ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ
- ಕೊವಿಡ್-19 ಎಚ್ಚರಿಕೆ ಬಗ್ಗೆ ಎಣಿಕೆ ಕೇಂದ್ರದಲ್ಲಿ ನೋಟಿಸ್ ಅಂಟಿಸಬೇಕು. ನಿಯಮ ಉಲ್ಲಂಘಿಸಿದವರನ್ನು ತಕ್ಷಣ ಎಣಿಕಾ ಕೇಂದ್ರದಿಂದ ಹೊರ ಕಳುಹಿಸುವುದರ ಜೊತೆಗೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವುದು.
- ಬೆಳಗ್ಗೆ 8 ಗಂಟೆಯಿಂದಲೇ ಮತಎಣಿಕೆ ಕಾರ್ಯ ನಡೆಯುವುದರಿಂದ ಸಿಬ್ಬಂದಿಯು ಮುಂಚಿತವಾಗಿ ಹಾಜರಿರಬೇಕು. ಕೊವಿಡ್-19 ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗರೂಕತೆ ವಹಿಸಿರಬೇಕು.
- ಮತಎಣಿಕೆ ಬಳಿಕ ಸೀಲ್ ಮಾಡಲಾದ ಟ್ರಂಕ್ ಗಳನ್ನು ತಾಲೂಕಿನ ಉಪ ಖಜಾನೆ ಅಥವಾ ತಹಶೀಲ್ದಾರ್ ಸುಪರ್ಧಿಯ ಕಚೇರಿಯ ಭದ್ರತಾ ಕೊಠಡಿಯಲ್ಲಿ ಇರಿಸುವುದು
- ಅಂತಿಮವಾಗಿ ವಿಜೇತ ಅಭ್ಯರ್ಥಿಗಳಿಗೆ ದೃಢೀಕರಣ ಪತ್ರ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಹಸ್ತಲಾಘವ ಮಾಡುವಂತಿಲ್ಲ
- ವಿಜೇತ ಅಭ್ಯರ್ಥಿಯು ಗುಂಪುಗಳಲ್ಲಿ ಮತ್ತು ಮೆರವಣಿಗೆಯ ಮೂಲಕ ವಿಜಯೋತ್ಸವವನ್ನು ಆಚರಿಸುವಂತಿಲ್ಲ
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications