ಪ್ರಧಾನಿ ಮೆಚ್ಚುಗೆಗೆ ಪಾತ್ರರಾದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ

Subscribe to Oneindia Kannada

ಬೆಂಗಳೂರು, ಜನವರಿ 10: ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಶ್ರೀಮತಿ ರತ್ನಪ್ರಭಾ ನೇಮಕವಾಗಿ ಇನ್ನೂ ಒಂದು ತಿಂಗಳೂ ಪೂರ್ಣಗೊಂಡಿಲ್ಲ. ಹೀಗಿರುವಾಗಲೇ ರತ್ನಪ್ರಭಾ ರಾಜ್ಯದಾದ್ಯಂತ ಹೊಸ ಅಲೆ ಎಬ್ಬಿಸಿದ್ದಾರೆ. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನೂ ಸೆಳೆದಿದ್ದಾರೆ.

27 ವರ್ಷ ಹಿಂದೆ ನಡೆದ ಘಟನೆಯೊಂದನ್ನು ರತ್ನಪ್ರಭಾ ತಮ್ಮ ಟ್ವಿಟ್ಟರ್ ನಲ್ಲಿ ಮೆಲುಕು ಹಾಕಿಕೊಂಡಿದ್ದರು. ಇದು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ.

ಸಂಕ್ರಾಂತಿ ವಿಶೇಷ ಪುಟ

"ರಾಯಚೂರಿನ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ನಾನು ನನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಇದಪ್ನೂರ್ ನ ನರಸಪ್ಪ ಎಂಬಾತ ಶಾಲೆಯೊಂದರ ಬಳಿ ಕುರಿ ಮೇಯುಸುತ್ತಿದ್ದ. ನಾನು ಕಾರು ನಿಲ್ಲಿಸಿ ಶಿಕ್ಷಕರನ್ನು ಕರೆದು ಆತನ ಹೆಸರು ನೋಂದಾಯಿಸಲು ಹೇಳಿದೆ. 27 ವರ್ಷಗಳ ನಂತರ ಆತ ನನ್ನ ಮುಂದೆ ಪೊಲೀಸ್ ಕಾನ್ ಸ್ಟೇಬಲ್ ಆಗಿ ನಿಂತಿದ್ದ," ಎಂದು ತಮ್ಮ ನೆನಪನ್ನು ಸಿಎಸ್ ರತ್ನಪ್ರಭಾ ಹಂಚಿಕೊಂಡಿದ್ದರು.

ಕುರಿ ಕಾಯುತ್ತಿದ್ದವ ಇಂದು ಕಾನೂನು ಕಾಪಾಡುತ್ತಿದ್ದಾನೆ!

Karnataka’s chief secretary Ratna Prabha drew Modi’s attention

ಈ ಪೋಸ್ಟ್ ಗೆ 2,700 ಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯೂ ನೋಡಿದ್ದಾರೆ. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಾ ಈ ಘಟನೆಯನ್ನು ಅವರು ಉಲ್ಲೇಖಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹೆಸರು ಉಲ್ಲೇಖಿಸದೇ ಅವರ ಟ್ವೀಟ್ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka chief secretary, K. Ratna Prabha's tweet about a real life incident which happened 27 years ago, has caught the attention of Prime Minister Narendra Modi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ