ರಾಜ್ಯದ 34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದವಿ ಭಾಗ್ಯ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 11 : ಇದೇ ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ ದೊರೆತಿದೆ. 34 ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದವಿ ನೀಡಲು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ ಸಿ) ಒಪ್ಪಿಗೆ ಸೂಚಿಸಿದೆ.

ರಜನೀಶ್ ಗೋಯಲ್ ದಂಪತಿ ಸೇರಿ 6 ಐಎಎಸ್ ಅಧಿಕಾರಿಗಳ ವರ್ಗಾವಣೆ

ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಪದವಿ ನೀಡುವಂತೆ ರಾಜ್ಯ ಸರ್ಕಾರ 56 ಹೆಸರುಗಳಿರುವ ಪಟ್ಟಿಯನ್ನು ನೀಡಿತ್ತು. ಈ ಪಟ್ಟಿಯನ್ನು ಪರಿಶೀಲಿಸಿದ ಯುಪಿಎಸ್ ಸಿ ಸಮಿತಿ, ಅಂತಿಮವಾಗಿ ನಾಲ್ವರು ಸಚಿವರುಗಳ ಆಪ್ತ ಕಾರ್ಯದರ್ಶಿಗಳು ಸೇರಿದಂತೆ 34 ಅಧಿಕಾರಿಗಳಿಗೆ ಐಎಎಸ್ ಪದವಿ ನೀಡಿದೆ.

Karnataka's 34 KAS officers promoted to IAS

ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಕಾರ್ಯದರ್ಶಿಗಳು ಐಎಎಸ್ ಪದವಿ ಪಡೆದುಕೊಂಡಿದ್ದಾರೆ. ನಗರಾಭಿವೃದ್ಧಿ ಸಚಿವ ಜಾರ್ಜ್ ಆಪ್ತ ಕಾರ್ಯದರ್ಶಿ ಡಾ. ಶಿವಶಂಕರ್, ರೋಷನ್ ಬೇಗ್ ಆಪ್ತ ಕಾರ್ಯದರ್ಶಿ ಗೋಪಾಲಕೃಷ್ಣ, ಎಂ.ಬಿ.ಪಾಟೀಲ್ ಆಪ್ತ ಕಾರ್ಯದರ್ಶಿ ವೈ.ಎಸ್.ಪಾಟೀಲ್, ತನ್ವೀರ್ ಸೇಠ್ ಆಪ್ತ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ 34 ಅಧಿಕಾರಿಗಳು ಐಎಎಸ್ ಪದವಿ ಪಡೆದಿದ್ದಾರೆ.

ಎಸಿಬಿಯಿಂದ ಕಿರುಕುಳಕ್ಕೆ ಒಳಗಾದ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಅವರಿಗೂ ಕೂಡ ಐಎಎಸ್ ಭಾಗ್ಯ ದೊರೆತಿದೆ. ಇದೇ ಮೊದಲ ಬಾರಿಗೆ 34 ಕನ್ನಡಿಗರಿಗೆ ಐಎಎಸ್ ಪದವಿ ಭಾಗ್ಯ ಸಿಕ್ಕಿದ್ದು, ಈ ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಯುಪಿಎಸ್ ಸಿ ಸಮಿತಿ ಐಎಎಸ್ ಕೊಡಲು ಒಪ್ಪಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka state, which was facing acute shortage of IAS officers, is now flooded with IAS qualified officers.The Union Public Service Commission (UPSC) has promoted 34 KAS officers to IAS.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ