ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಪ್ರದೇಶಗಳಲ್ಲಿ ಮತ್ತಷ್ಟು ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ

ಎರಡನೇ ಹಂತದಲ್ಲಿ 100 ಲೈಬ್ರರಿಗಳನ್ನು ಡಿಜಿಟಲ್‌ ಆಗಿ ಪರಿವರ್ತಿಸಲಾಗಿದೆ. ಇದೀಗ ಮೂರನೇ ಹಂತದಲ್ಲಿ ಗ್ರಾಮೀಣ ಪ್ರದೇಶಕ್ಕೆ ಒತ್ತು ನೀಡುವ ಗುರಿಯನ್ನು ಗ್ರಂಥಾಲಯ ಇಲಾಖೆ ಹೊಂದಿದೆ.

|
Google Oneindia Kannada News

ಬೆಂಗಳೂರು, ಜನವರಿ 31: ಡಿಜಿಟಲ್ ಲೈಬ್ರರೀಸ್ ಯೋಜನೆಗೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತವಾಗಿರುವ ಕರ್ನಾಟಕ ಗ್ರಂಥಾಲಯ ಇಲಾಖೆಯು ಗ್ರಾಮೀಣ ಪ್ರದೇಶ ಮತ್ತು ಕೊಳೆಗೇರಿಗಳಲ್ಲಿ 172 ಗ್ರಂಥಾಲಯಗಳನ್ನು 4 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತಿಸಲಿದೆ.

ಮೊದಲ ಹಂತದಲ್ಲಿ ರಾಜ್ಯಾದ್ಯಂತ 272 ಗ್ರಂಥಾಲಯಗಳನ್ನು ಡಿಜಿಟಲ್ ಲೈಬ್ರರಿಗಳನ್ನಾಗಿ ಪರಿವರ್ತಿಸಲಾಗಿದ್ದು, ಎರಡನೇ ಹಂತದಲ್ಲಿ 100 ಲೈಬ್ರರಿಗಳನ್ನು ಪರಿವರ್ತಿಸಲಾಗಿದೆ. ಇದೀಗ ಮೂರನೇ ಹಂತದಲ್ಲಿ ಗ್ರಾಮೀಣ ಪ್ರದೇಶಕ್ಕೆ ಒತ್ತು ನೀಡುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಡಿಎಚ್‌ ವರದಿ ಮಾಡಿದೆ.

ಲಿಂಗಸೂರು ತಾಲೂಕಿನಲ್ಲಿ ದುರಸ್ತಿ ಕಾಣದ ಗ್ರಂಥಾಲಯಗಳು, ವಿದ್ಯಾರ್ಥಿಗಳ ಆಕ್ರೋಶಲಿಂಗಸೂರು ತಾಲೂಕಿನಲ್ಲಿ ದುರಸ್ತಿ ಕಾಣದ ಗ್ರಂಥಾಲಯಗಳು, ವಿದ್ಯಾರ್ಥಿಗಳ ಆಕ್ರೋಶ

2020ರಲ್ಲಿ ಪ್ರಾರಂಭವಾದ ಈ ಯೋಜನೆಯು 2 ವರ್ಷ ಮತ್ತು 10 ತಿಂಗಳುಗಳಲ್ಲಿ 3.21 ಕೋಟಿ ಚಂದಾದಾರರನ್ನು ಆಕರ್ಷಿಸಿದೆ ಮತ್ತು 1.73 ಕೋಟಿ ಇ-ಕಂಟೆಂಟ್ ಅನ್ನು ಯಶಸ್ವಿಯಾಗಿ ಸಂಯೋಜಿಸಿದೆ.

"ಕರ್ನಾಟಕಕ್ಕೆ ನೀಡಲಾದ ಆರಂಭಿಕ ಗುರಿ ಕನಿಷ್ಠ 10 ಲಕ್ಷ ಚಂದಾದಾರರನ್ನು ಮಂಡಳಿಯಲ್ಲಿ ಪಡೆಯುವುದು. ಆದರೆ, ನಮಗೆ ಇದಕ್ಕೂ ಮೀರಿ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನಾವು ಎಲ್ಲಾ ದಾಖಲೆಗಳನ್ನು ಮುರಿದಿದ್ದೇವೆ. ಇದು ಹೆಚ್ಚಿನ ಗ್ರಂಥಾಲಯಗಳನ್ನು ಡಿಜಿಟಲ್‌ಗೆ ಪರಿವರ್ತಿಸಲು ಪ್ರೇರಣೆ ನೀಡಿದೆ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಎಸ್.ಹೊಸಮನಿ ಹೇಳಿದ್ದಾರೆ.

ಇಲಾಖೆಯು https://www.karnatakadigitalpubliclibrary.org/ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ್ದು ಬಳಕೆದಾರರಿಗೆ ವಿಷಯವನ್ನು ದೂರದಿಂದಲೇ ಆಕ್ಸೆಸ್‌ ಮಾಡಲು ಮತ್ತು ಪ್ರವೇಶವನ್ನು ಪಡೆಯಲು ಸಾಧ್ಯವಾಗದವರಿಗೆ ಬೆಂಬಲ ನೀಡಲು, ಗ್ರಂಥಾಲಯಗಳನ್ನು ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳೊಂದಿಗೆ ನವೀಕರಿಸಲಾಗುತ್ತಿದೆ.

ಭಾರತದ ಮೊದಲ ಸಂಪೂರ್ಣ ಗ್ರಂಥಾಲಯ ಕ್ಷೇತ್ರ ಯಾವುದು ಗೊತ್ತಾ?ಭಾರತದ ಮೊದಲ ಸಂಪೂರ್ಣ ಗ್ರಂಥಾಲಯ ಕ್ಷೇತ್ರ ಯಾವುದು ಗೊತ್ತಾ?

"ನಾವು ಕ್ಲೌಡ್‌ನಲ್ಲಿ ಎಲ್ಲಾ ವಿಷಯವನ್ನು ಸಂಗ್ರಹ ಮಾಡುತ್ತೇವೆ. ನಮ್ಮಲ್ಲಿ ಪರಿವರ್ತಿಸಲಾಗುತ್ತಿರುವ ಲೈಬ್ರರಿಗಳು ಲ್ಯಾಪ್‌ಟಾಪ್‌ಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದು, ಸಾಧನಗಳನ್ನು ಖರೀದಿಸಲು ಶಕ್ತರಾಗಿಲ್ಲ. ಇ-ಪುಸ್ತಕಗಳು, ಜರ್ನಲ್‌ಗಳು ಮತ್ತು ವೀಡಿಯೊಗಳ ರೂಪದಲ್ಲಿ ಇರುವ ವಿಷಯವು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಇತರ ಹಲವು ಭಾಷೆಗಳಲ್ಲಿ ಲಭ್ಯವಿದೆ ಎಂದು ಹೊಸಮನಿ ಹೇಳಿದ್ದಾರೆ.

ಡಿಜಿಟಲ್ ರೂಪದಲ್ಲಿ ಬಳಸಲು ಅನುಕೂಲ

ಡಿಜಿಟಲ್ ರೂಪದಲ್ಲಿ ಬಳಸಲು ಅನುಕೂಲ

ಈ ಪ್ರತಿಕ್ರಿಯೆಯು ಲೇಖಕರನ್ನು ಆಕರ್ಷಿಸಿದ್ದು, ಅವರು ಸ್ವಯಂಪ್ರೇರಣೆಯಿಂದ ತಮ್ಮ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಬಳಸಲು ದಾನ ಮಾಡಲು ಮುಂದೆ ಬಂದಿದ್ದಾರೆ. ಗ್ರಂಥಾಲಯದ ಹೊಸ ಆವೃತ್ತಿಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನೇಕರಿಗೆ ಸಹಾಯ ಮಾಡಿದೆ ಎಂದು ಹೊಸಮನಿ ಹೇಳಿದರು.

ಆರ್‌ಡಿಪಿಆರ್ ಅನುದಾನದಿಂದ ಕಾರ್ಯ

ಆರ್‌ಡಿಪಿಆರ್ ಅನುದಾನದಿಂದ ಕಾರ್ಯ

ಡಿಜಿಟಲ್ ಲೈಬ್ರರಿಗಳು ಸಾರ್ವಜನಿಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಹಣವು ಇನ್ನೂ ಮುಖ್ಯವಾದ ವಿಷಯವಾಗಿದೆ. "ಸಾಂಪ್ರದಾಯಿಕ ಗ್ರಂಥಾಲಯಗಳನ್ನು ಡಿಜಿಟಲ್ ಆಗಿ ಪರಿವರ್ತಿಸುವುದು ಬಂಡವಾಳದ ಯೋಜನೆಯಾಗಿದೆ. ಭಾರತ ಸರ್ಕಾರ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯಿಂದ ಮಂಜೂರಾದ ನಿಧಿಯಡಿ ಈಗ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕರ್ನಾಟಕದಾದ್ಯಂತ ಸುಮಾರು 6,890 ಗ್ರಂಥಾಲಯ

ಕರ್ನಾಟಕದಾದ್ಯಂತ ಸುಮಾರು 6,890 ಗ್ರಂಥಾಲಯ

ಅನೇಕ ನಾಗರಿಕ ಸಂಸ್ಥೆಗಳು ಗ್ರಂಥಾಲಯದ ಸೆಸ್ ಪಾವತಿಸಲು ವಿಫಲವಾಗಿವೆ. ಇದು ಇಲಾಖೆಗೆ ಆದಾಯವನ್ನು ಕಡಿಮೆ ಮಾಡಿದೆ. ಹೀಗಾಗಿ ಅವರು ಸರ್ಕಾರದ ಹಣವನ್ನು ಅವಲಂಬಿಸುವಂತೆ ಒತ್ತಾಯಿಸಿದರು. ಪ್ರಸ್ತುತ ಕರ್ನಾಟಕದಾದ್ಯಂತ ಸುಮಾರು 6,890 ಸಾರ್ವಜನಿಕ ಗ್ರಂಥಾಲಯಗಳಿವೆ. ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ಇ-ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸುತ್ತೇವೆ. ಅದು ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ ಲೈಬ್ರರಿ ತೆರೆಯಲು ಸರ್ಕಾರ ಮುಂದಾಗುತ್ತದೆ.

ಮನೆ ಮನೆಗೆ ಡಿಜಿಟಲ್ ಶಕ್ತಿ

ಮನೆ ಮನೆಗೆ ಡಿಜಿಟಲ್ ಶಕ್ತಿ

ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆಯುತ್ತದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ. ಜ್ಞಾನ ನೀಡುವುದು ಮತ್ತು ಪಡೆಯುವುದು ಅತ್ಯಗತ್ಯ. ಜ್ಞಾನ ಮತ್ತು ಧ್ಯಾನ ಇವೆರಡು ಬದುಕಿಗೆ ಸಾರ್ಥಕತೆ ಕೊಡುವ, ಅರ್ಥವನ್ನು ಕೊಡುವ, ಪರೋಪಕಾರ ಮಾಡುವ ಗುಣವನ್ನು ಕೊಡುವ ಪ್ರಮುಖ ಮಾರ್ಗವಾಗಿದೆ ಎಂದು ಹೇಳಿದ್ದರು.

English summary
Encouraged by the positive response to the Digital Libraries project, the Karnataka Library Department will convert 172 libraries in rural areas and slums into digital libraries at a cost of Rs 4 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X