ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕರ್ನಾಟಕದಲ್ಲಿ 5 ಹೊಸ ಓಮಿಕ್ರಾನ್ ಪ್ರಕರಣ ಪತ್ತೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29; ಕರ್ನಾಟಕದಲ್ಲಿ 5 ಹೊಸ ಕೋವಿಡ್ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿಯೇ ಮೊದಲ ಓಮಿಕ್ರಾನ್ ಪ್ರಕರಣ ರಾಜ್ಯದಲ್ಲಿ ದಾಖಲಾಗಿತ್ತು.

ಬುಧವಾರ ಟ್ವೀಟ್ ಮೂಲಕ ಆರೋಗ್ಯ ಸಚಿವ ಡಾ. ಸುಧಾಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಎಲ್ಲಾ ಪಾಸಿಟಿವ್ ರೋಗಿಗಳನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ 2ನೇ ಓಮಿಕ್ರಾನ್ ಪ್ರಕರಣ ದಾಖಲು ಮೈಸೂರಿನಲ್ಲಿ 2ನೇ ಓಮಿಕ್ರಾನ್ ಪ್ರಕರಣ ದಾಖಲು

ಓಮಿಕ್ರಾನ್ ಸೋಂಕು ಪತ್ತೆಯಾದ ಎಲ್ಲಾ ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ ಮತ್ತು ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಗೋವಾ; ಪ್ರವಾಸಿಗರಲ್ಲಿ ಆತಂಕ, ಮೊದಲ ಓಮಿಕ್ರಾನ್ ಪ್ರಕರಣ ದಾಖಲುಗೋವಾ; ಪ್ರವಾಸಿಗರಲ್ಲಿ ಆತಂಕ, ಮೊದಲ ಓಮಿಕ್ರಾನ್ ಪ್ರಕರಣ ದಾಖಲು

Karnataka Reports 5 New Cases Of Omicron

ಬೆಂಗಳೂರಲ್ಲಿ 400 ಹೊಸ ಕೋವಿಡ್ ಪ್ರಕರಣ ಪತ್ತೆ ಬೆಂಗಳೂರಲ್ಲಿ 400 ಹೊಸ ಕೋವಿಡ್ ಪ್ರಕರಣ ಪತ್ತೆ

ಸೋಂಕಿತರ ವಿವರಗಳು

* 22 ವರ್ಷದ ಯುವತಿ, ದಾವಣಗೆರೆ (ಅಮೆರಿಕದಿಂದ ಪ್ರಯಾಣ)
* 24 ವರ್ಷದ ಪುರುಷ, ಬೆಂಗಳೂರು (ಕತಾರ್ ಮೂಲಕ ಅಮೆರಿಕದಿಂದ ಆಗಮನ)
* 53 ವರ್ಷದ ಪುರುಷ, ತಮಿಳುನಾಡು (ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ)
* 61 ವರ್ಷದ ಪುರುಷ, ಬೆಂಗಳೂರು (ಘನಾದಿಂದ ದೋಹಾ ಮೂಲಕ ಪ್ರಯಾಣ)
* 41 ವರ್ಷದ ಪುರುಷ, ಮುಂಬೈ (ಮುಂಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮನ)

ಬುಧವಾರ ಪಶ್ಚಿಮ ಬಂಗಾಳದಲ್ಲಿ 5, ಮಹಾರಾಷ್ಟ್ರದಲ್ಲಿ 85, ಪಂಜಾಬ್‌ನಲ್ಲಿ 1 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೇಶದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 700ರ ಗಡಿ ದಾಟಿದೆ.

Recommended Video

ಟೀಂ‌ ಇಂಡಿಯಾಗೆ ಅಂದು‌ ಗೇಲಿ‌ಮಾಡಿದ್ದಕ್ಕೆ ಇಂದು ಮಾನ‌ಕಳೆದುಕೊಂಡ ಮೈಕೆಲ್ ವಾನ್ | Oneindia Kannada

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 566 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿಯೇ 4000 ಹೊಸ ಪ್ರಕರಣ ಪತ್ತೆಯಾಗಿವೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 7771.

English summary
Karnataka health minister Dr. K. Sudhakar said that 5 new Omicron cases reported in state. All positive persons have been isolated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X