ಕರ್ನಾಟಕ ರೆಡ್ಡಿ ಜನಸಂಘಕ್ಕೆ ಯುವ ಮುಖಂಡನಿಗೆ ಮಣೆ!
ಕರ್ನಾಟಕ ರೆಡ್ಡಿ ಜನಸಂಘಕ್ಕೆ ಇನ್ನೇನು 2 ವರ್ಷದಲ್ಲಿ ಶತಮಾನೋತ್ಸವ ಸಂಭ್ರಮ ಕೂಡ ಆಗಮಿಸಲಿದೆ. ಹೀಗಿದ್ದಾಗ ಕರ್ನಾಟಕ ರೆಡ್ಡಿ ಜನಸಂಘದ ಸದಸ್ಯರು ಹೊಸ ನಿರ್ದೇಶಕರನ್ನ ಆಯ್ಕೆ ಮಾಡಿದ್ದಾರೆ. ಈ ಮೂಲಕ ಯುವ ಮುಖಂಡನಿಗೆ ಇದೀಗ ಮಣೆ ಹಾಕಿದ್ದಾರೆ ರಾಜ್ಯ ರೆಡ್ಡಿ ಜನಸಂಘದ ಸದಸ್ಯರು. ಇದೀಗ ಕರ್ನಾಟಕ ರೆಡ್ಡಿ ಜನಸಂಘಕ್ಕೆ ನೂತನವಾಗಿ ಆಯ್ಕೆ ಆಗಿರುವ ನಿರ್ದೇಶಕ ಕೆ. ಮುರಳೀಧರ ರೆಡ್ಡಿ ಸಂಘದ ಮುಖಂಡರನ್ನು ಸನ್ಮಾನಿಸಿದ್ದಾರೆ.
ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರನ್ನು ಭೇಟಿ ಮಾಡಿದ ಕರ್ನಾಟಕ ರೆಡ್ಡಿ ಜನಸಂಘದ ನೂತನ ನಿರ್ದೇಶಕ ಕೆ.ಮುರಳೀಧರ ರೆಡ್ಡಿ ಅವರು, ಶಾಸಕ ಸತೀಶ್ ರೆಡ್ಡಿ ಅವರಿಗೆ ಸನ್ಮಾನ ಮಾಡಿದರು. ಹಾಗೇ ಇದೇ ವೇಳೆ ಕರ್ನಾಟಕ ರೆಡ್ಡಿ ಜನಸಂಘದ ಅಭಿವೃದ್ಧಿಗೆ ತಮ್ಮಲ್ಲಿರುವ ಹೊಸ ಹೊಸ ಯೋಜನೆಗಳ ಕುರಿತು ಕೂಡ ಮಾತನಾಡಿದರು. ಜತೆಗೆ ಯುವಕನಾಗಿ ತಮಗೆ ಅವಕಾಶ ನೀಡಿರುವ ಕರ್ನಾಟಕ ರೆಡ್ಡಿ ಜನಸಂಘದ ಸದಸ್ಯರಿಗೆ ಕೂಡ ಧನ್ಯವಾದ ತಿಳಿಸಿದರು. ಇದೇ ವೇಳೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕ & ಇತರರಿಗೆ ಅಭಿನಂದಿಸಿದರು.

ಯುವಜನರ ಅಭಿವೃದ್ದಿಗೆ ಬದ್ದ
ಹಾಗೇ ಇದೇ ವೇಳೆ ತಮಗೆ ಸಿಕ್ಕಿರುವ ಜವಾಬ್ದಾರಿ ಬಗ್ಗೆಯೂ ಕರ್ನಾಟಕ ರೆಡ್ಡಿ ಜನಸಂಘದ ನೂತನ ನಿರ್ದೇಶಕ ಕೆ. ಮುರಳೀಧರ ರೆಡ್ಡಿ ಮಾತನಾಡಿದರು. ಇದು ದೊಡ್ಡ ಜವಾಬ್ದಾರಿ, ಹೀಗಾಗಿ ನಾನು ಇದನ್ನು ನಿಷ್ಠೆಯಿಂದ ನಡೆಸಿಕೊಂಡು ಹೋಗುತ್ತೇನೆ. ಹಾಗೇ ರಾಜ್ಯ ರೆಡ್ಡಿ ಜನ ಸಂಘ ಸಮುದಾಯದ ಅಭಿವೃದ್ದಿಗೆ ಮತ್ತು ಯುವಜನರ ಅಭಿವೃದ್ದಿಗೆ ಒತ್ತು ನೀಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು. ಹಾಗೇ ಯುವಕನಾಗಿದ್ದರೂ ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿರುವ ಬಗ್ಗೆ ಕೂಡ ಅವರು ಸಂತಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಂಘದಲ್ಲಿ ಯುವಕರ ಪಾತ್ರ ಕೂಡ ಬಹು ಮುಖ್ಯ ಆದ್ದರಿಂದ ಹಿರಿಯರ ಸಲಹೆ ಸಹಕಾರ ಜೊತೆ ಜೊತೆಗೆ, ಸಂಘದ ಯುವ ಜನತೆಗೆ ಸಂಘಟನೆಯಲ್ಲಿ ಹೆಚ್ಚಾಗಿ ಅವಕಾಶ ದೊರೆಯುವಂತೆ ಮಾಡುತ್ತೇನೆ ಎಂದು ಕರ್ನಾಟಕ ರೆಡ್ಡಿ ಜನಸಂಘದ ನೂತನ ನಿರ್ದೇಶಕ ಕೆ. ಮುರಳೀಧರ ರೆಡ್ಡಿ ತಿಳಿಸಿದರು. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಸನ್ಮಾನದ ವೇಳೆ ರೆಡ್ಡಿ ಜನಸಂಘದ ಮುಖಂಡರು ಕೂಡ ಹಾಜರಿದ್ದರು.
ರೆಡ್ಡಿ ಜನಸಂಘದ ಮುಖಂಡರು ಹಾಜರ್
ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರನ್ನು ಸನ್ಮಾನಿಸಿದ ವೇಳೆ ರೆಡ್ಡಿ ಜನಸಂಘ ಮುಖಂಡರಾದ ದಾಮೋದರ ರೆಡ್ಡಿ, ಕೆ. ವಾಸುದೇವ ರೆಡ್ಡಿ, ಶ್ರೀನಿವಾಸ ರೆಡ್ಡಿ, ಬಾಬುರೆಡ್ಡಿ ಬೊಮ್ಮನಹಳ್ಳಿ ಇದ್ದರು. ಹಾಗೇ ಸಂಘದ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಇದೇ ಸಮಯದಲ್ಲಿ ಮುಖಂಡರು ಚರ್ಚೆಯನ್ನು ಕೂಡ ನಡೆಸಿದರು.












Click it and Unblock the Notifications