ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ದಿನವೇ ದಾಖಲೆ ಮದ್ಯ ಮಾರಾಟ, ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿದ ಮದ್ಯ ವ್ಯಸನಿಗಳು

|
Google Oneindia Kannada News

ಬೆಂಗಳೂರು, ಮೇ 04: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಬರೊಬ್ಬರಿ 40 ದಿನಗಳ ಬಳಿಕ ಆರಂಭವಾದ ಮದ್ಯದ ಅಂಗಡಿಗಳು ಭರ್ಜರಿ ವ್ಯಪಾರವನ್ನೇ ಮಾಡಿವೆ. ಒಂದು ಅಂದಾಜಿನಂತೆ ಮೊದಲ ದಿನವೇ 100 ಕೋಟಿ ರೂ.ಗಳಿಗೂ ಮೀರಿದ ವ್ಯಾಪಾರವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ. ಆದರೆ ಸರ್ಕಾರ ಅಧಿಕೃತ ಲೆಕ್ಕವನ್ನೂ ಕೊಟ್ಟಿದ್ದು ಅಂಕಿ ಅಂಶಗಳು ದಂಗುಬಡಿಸುವಂತಿವೆ.

ಲಾಕ್‌ಡೌನ್‌ ಸಡಿಲಿಕೆಯಾದ ಮೊದಲ ದಿನದ ಮದ್ಯ ಮಾರಾಟದ ಮಾಹಿತಿಯನ್ನು ಬಿಡುಗಡೆ ಮಾಡಿರುವ ಅಬಕಾರಿ ಇಲಾಖೆಯ ವಿವರ ದಂಗು ಬಡಿಸುವಂತಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳ ಕೊನೆಯಲ್ಲಿಯೆ ಮದ್ಯ ಮಾರಾಟ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು.

ಕೆಪಿಸಿಸಿ ಚೆಕ್ ವಿವಾದ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಭೇಟಿ ಮಾಡಿದ ಡಿಕೆಶಿಕೆಪಿಸಿಸಿ ಚೆಕ್ ವಿವಾದ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಭೇಟಿ ಮಾಡಿದ ಡಿಕೆಶಿ

ಮೂರನೇ ಹಂತದ ಲಾಕ್‌ಡೌನ್ ದೇಶದಲ್ಲಿ ಜಾರಿಯಾದ ನಂತರ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿದೆ. ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಆಧರಿಸಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳನ್ನಾಗಿ ವಿಭಾಗಿಸಲಾಗಿದೆ. ಮೂರು ವಲಯಗಳಲ್ಲಿ ಭರ್ಜರಿಯಾಗಿಯೆ ಮದ್ಯ ಮಾರಾಟವಾಗಿದೆ.

ಹಾಟ್‌ಸ್ಪಾಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧ

ಹಾಟ್‌ಸ್ಪಾಟ್‌ಗಳಲ್ಲಿ ಮದ್ಯ ಮಾರಾಟ ನಿಷೇಧ

ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ನಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಸರ್ಕಾರ ನಿಷೇಧ ಹೇರಿದೆ. ಉಳಿದಂತೆ ಕೆಂಪು, ಕಿತ್ತಳೆ ಹಾಗೂ ಹಸಿರು ಹೀಗೆ ಮೂರು ವಲಯಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದೆ. ಸರ್ಕಾರ ಕೊಟ್ಟಿರುವ ಅನುಮತಿಯನ್ನು ಮದ್ಯ ವ್ಯಸನಿಗಳು ಸರಿಯಾಗಿಯೆ ಬಳಕೆ ಮಾಡಿಕೊಂಡಿದ್ದಾರೆ.

 10 ಗಂಟೆ ಮಾತ್ರ ಮದ್ಯ ಮಾರಾಟ

10 ಗಂಟೆ ಮಾತ್ರ ಮದ್ಯ ಮಾರಾಟ

9 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿತ್ತು. ಕೇವಲ 10 ಗಂಟೆಗಳಲ್ಲಿ ಬರೊಬ್ಬರಿ 12.4 ಲಕ್ಷ ಲೀಟರ್‌ ಮದ್ಯ ಮಾರಾಟವಾಗಿದೆ. ಸಿಎಲ್-2 ಮತ್ತು ಸಿಎಲ್-11(ಸಿ) (ಎಂ.ಎಸ್.ಐ.ಎಲ್) ಮಳಿಗೆಗಳಲ್ಲಿ ಮಾತ್ರ ಮದ್ಯಮಾರಾಟಕ್ಕೆ ಅವಕಾಶವಿತ್ತು. ಜೊತೆಗೆ ಎಂ.ಆರ್.ಪಿ (MRP) ದರದಲ್ಲಿ ಮಾತ್ರ ಮದ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಇಲಾಖೆ ಆದೇಶ ಮಾಡಿತ್ತು. ಎಂಆರ್‌ಪಿ ದರ ಆಧರಿಸಿ ಇಂದು ಅಬಕಾರಿ ಇಲಾಖೆ ವರದಿ ಕೊಟ್ಟಿದೆ.

ಸಿನಿಮಾ, ಧಾರಾವಾಹಿ ಶೂಟಿಂಗ್ ಆರಂಭಿಸಲು ತೀರ್ಮಾನಸಿನಿಮಾ, ಧಾರಾವಾಹಿ ಶೂಟಿಂಗ್ ಆರಂಭಿಸಲು ತೀರ್ಮಾನ

ಬರೊಬ್ಬರಿ 45 ಕೋಟಿ ರೂ.ಗಳ ಮದ್ಯ ಮಾರಾಟ

ಬರೊಬ್ಬರಿ 45 ಕೋಟಿ ರೂ.ಗಳ ಮದ್ಯ ಮಾರಾಟ

ಒಂದೂವರೆ ತಿಂಗಳುಗಳ ಬಳಿಕ ಆರಂಭವಾದ ಮದ್ಯದ ವ್ಯಾಪಾರಿಗಳು ಸಖತ್ತಾಗಿಯೆ ವ್ಯಾಪಾರ ಆರಂಭಿಸಿದ್ದಾರೆ. ಇವತ್ತು ಒಂದೇ ದಿನದಲ್ಲಿ ಒಟ್ಟು ಸುಮಾರು 3.9 ಲಕ್ಷ ಲೀಟರ್ ಬೀಯರ್, 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಇವತ್ತು ಮಾರಾಟವಾಗಿರುವ ಒಟ್ಟು 12.4 ಲಕ್ಷ ಲೀಟರ್‌ ಮದ್ಯದ ಮೌಲ್ಯ 45 ಕೋಟಿ ರೂಪಾಯಿಗಳು ಎಂದು ಅಬಕಾರಿ ಇಲಾಖೆ ಆಯುಕ್ತರು ಮಾಹಿತಿ ಕೊಟ್ಟಿದ್ದಾರೆ.

ಆದರೆ ಮೂಲಗಳ ಪ್ರಕಾರ ಬಂದಿರುವ ಮಾಹಿತಿ ದಂಗು ಬಡಿಸುವಂತಿದೆ. ಸುಮಾರು ಒಂದು ನೂರು ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಮದ್ಯ ಇವತ್ತು ಒಂದೇ ದಿನದಲ್ಲಿ ಮಾರಾಟವಾಗಿದೆ ಎಂಬ ಮಾಹಿತಿಯಿದೆ.

ಡಿಪೋಗಳಲ್ಲಿ ಇನ್ನೂ ಸಾಕಷ್ಟು ಸ್ಟಾಕ್‌ ಇದೆ

ಡಿಪೋಗಳಲ್ಲಿ ಇನ್ನೂ ಸಾಕಷ್ಟು ಸ್ಟಾಕ್‌ ಇದೆ

ಎಂ.ಆರ್.ಪಿ. ದರ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದರೆ ಪರಿಶೀಲಿಸಿ ಲೈಸನ್ಸ್ ರದ್ದು ಮಾಡುವುದ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಆಯುಕ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಇದೆ. ಹಾಗೂ ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿಯನ್ನು ನೀಡಲಾಗಿದೆ. ಹೀಗಾಗಿ ಮದ್ಯ ಮಾರಾಟದಲ್ಲಿ ಯಾವುದೆ ಕೊರತೆ ಆಗುವುದಿಲ್ಲ ಎಂದು ಅಬಕಾರಿ ಇಲಾಖೆ ಭರವಸೆ ಕೊಟ್ಟಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರಕ್ಕೂ ಸಾಕಷ್ಟು ಆದಾಯದ ನಿರೀಕ್ಷೆಯಿದೆ. ಇಷ್ಟು ಹಣ ಹರಿದು ಬರುವುದರಿಂದಲೇ ಸರ್ಕಾರ ತರಾತುರಿಯಲ್ಲಿ ಮದ್ಯ ಮಾರಾಟ ಆರಂಭಿಸಿದೆ ಎಂದು ಜನರು ಆರೋಪಿಸಿದ್ದಾರೆ.

English summary
A total of 12.4 lakh liters of liquor were sold at Rs 45 crore, the Commissioner of Excise Department said. Liquor merchants have started trading after a month and a half.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X