ಬಿಜೆಪಿಯ ಕೀಳುಮಟ್ಟದ ರಾಜಕಾರಣ: ತಾಕತ್ತಿದ್ದರೆ ತಮಿಳುನಾಡಲ್ಲಿ ಕನ್ನಡ ನಾಡಗೀತೆ ಹಾಕಿಸಲಿ: ಕರವೇ
ಬೆಂಗಳೂರು, ಏಪ್ರಿಲ್ 28: ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಗುರುವಾರ ನಡೆದ ತಮಿಳು ಬಾಂಧವರ ಸಮಾವೇಶದಲ್ಲಿ ತಮಿಳುನಾಡು ಗೀತೆ ಹಾಕಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಖಂಡಿಸಿದೆ. ಬಿಜೆಪಿಗೆ ಈ ಕೀಳುಮಟ್ಟದ ರಾಜಕಾರಣ ಅಗತ್ಯವಿರಲಿಲ್ಲ ಎಂದು ಜರಿದಿದೆ.
ಶಿವಮೊಗ್ಗದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಅವರ ನೇತೃತ್ವದಲ್ಲಿ ಏಪ್ರಿಲ್ 27 (ಗುರುವಾರ)ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತಮಿಳರನ್ನು ಓಲೈಸುವ ದೃಷ್ಟಿಯಿಂದ ತಮಿಳು ನಾಡಗೀತೆ ಹಾಡಿಸಿರುವುದು ಅಕ್ಷಮ್ಯ ಅಪರಾಧ. ಅಣ್ಣಾಮಲೈ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿರುವುದು ಸ್ಪಷ್ಟವಾಗಿದೆ ಎಂದು ಕರವೇ ಹೇಳಿದೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ತಮಿಳರ ಬಗ್ಗೆಯಾಗಲೀ, ತಮಿಳು ನಾಡಗೀತೆ ಬಗ್ಗೆಯಾಗಲೀ ಅಗೌರವವಿಲ್ಲ. ಆದರೆ ನಮ್ಮ ನೆಲದಲ್ಲಿ ತಮಿಳು ನಾಡಗೀತೆ ಹಾಡಿಸುವ ಔಚಿತ್ಯವಾದರೂ ಏನಿತ್ತು? ತಮಿಳರನ್ನು ಓಲೈಸಲು ಬಿಜೆಪಿ ಇಷ್ಟು ಕೆಳಮಟ್ಟಕ್ಕೆ ಇಳಿಯಬೇಕಾಗಿರಲಿಲ್ಲ. ತಾಕತ್ತಿದ್ದರೆ ಇದೇ ಅಣ್ಣಾಮಲೈ ತಮಿಳು ನಾಡಿನಲ್ಲಿ ಕನ್ನಡಿಗರ ಸಮಾವೇಶ ನಡೆಸಿ ಕರ್ನಾಟಕದ ನಾಡಗೀತೆ ಹಾಡಿಸಲಿ ನೋಡೋಣ ಎಂದಿದೆ.
ಸಮಾವೇಶದಲ್ಲಿ ಆಗಿದ್ದೇನು?
ಶಿವಮೊಗ್ಗದ ಸಮಾವೇಶದಲ್ಲಿ ತಮಿಳರ ಓಲೈಕೆಗಾಗಿ ಮೊದಲು ತಮಿಳು ನಾಡಗೀತೆ ಹಾಕಲಾಗಿತ್ತು. ಸಮಾಧಾನದ ವಿಷಯವೆಂದರೆ ತಮಿಳು ನಾಡಗೀತೆ ಪ್ರಸಾರವಾಗುತ್ತಿದ್ದಂತೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸಕಾಲಿಕವಾಗಿ ಮಧ್ಯಪ್ರವೇಶ ಮಾಡಿ ಹಾಡಿನ ಪ್ರಸಾರ ನಿಲ್ಲಿಸಿದ್ದಾರೆ. ಬಳಿಕ ಕರ್ನಾಟಕದ ನಾಡಗೀತೆ ಹಾಡಲು ಕರೆದರೆ ಯಾರೊಬ್ಬರು ಮುಂದೆ ಬರಲಿಲ್ಲ. ಬಿಜೆಪಿಯವರು ನಾಡಗೀತೆಗೆ ಎಷ್ಟು ಗೌರವ ಕೊಡುತ್ತಾರೆಂಬುದು ಇದರಿಂದ ಅರ್ಥವಾಗುತ್ತದೆ ಎಂದು ಕರವೇ ಮುಖ್ಯಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಎಂಬುವವರು ಈ ಚುನಾವಣೆಯಲ್ಲಿ ಕನ್ನಡೇತರನ್ನು ಓಲೈಸಲು ಪಕ್ಷದ ಮುಖಂಡರಿಗೆ ಕರೆ ನೀಡಿರುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಇದಕ್ಕೆ ಪೂರಕವಾಗಿಯೇ ಶಿವಮೊಗ್ಗದಲ್ಲಿ ತಮಿಳರ ಸಮಾವೇಶ ನಡೆಸಲಾಗಿದೆ ಎಂದು ಆಪಾದಿಸಲಾಗಿದೆ.

ಚುನಾವಣೆಯಲ್ಲಿ ಬುದ್ಧಿ ಕಲಿಸಲು ಕರೆವೇ ಕರೆ
ನಿವೃತ್ತ ಐಪಿಎಸ್ ಅಣ್ಣಾಮಲೈ ಅಪ್ಪಟ ಕನ್ನಡಿಗರು ವಾಸಿಸುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ತಮಿಳಿನಲ್ಲಿ ಪ್ರಚಾರ ಭಾಷಣ ಮಾಡಿದ್ದಾರೆ. ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷನಿಗೆ ಕರ್ನಾಟಕದಲ್ಲಿ ಏನು ಕೆಲಸ? ಇಂಥ ಕೀಳುಮಟ್ಟದ ಓಲೈಕೆ ರಾಜಕಾರಣದಿಂದ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಎಂಬುದನ್ನು ಮೊದಲು ಅರಿಯಬೇಕು.
ಚುನಾವಣೆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಬೇರೆ ರಾಜ್ಯಗಳ ರಾಜಕಾರಣಿಗಳು, ಚಿತ್ರನಟರನ್ನು ಕರೆಯಿಸಿ ಬೇರೆ ಬೇರೆ ಭಾಷೆಗಳಲ್ಲಿ ಭಾಷಣ ಮಾಡಿಸಿ ಕನ್ನಡಿಗರನ್ನು ಅಪಮಾನಿಸುತ್ತಿದ್ದಾರೆ. ಇದು ನಾಡದ್ರೋಹದ ಕೆಲಸ. ಇಂಥವರಿಗೆ ಮತದಾನ ಸಂದರ್ಭದಲ್ಲಿ ಕನ್ನಡಿಗರು ಸರಿಯಾದ ಉತ್ತರವನ್ನೇ ನೀಡಬೇಕು. ಬುದ್ಧಿ ಕಲಿಸಬೇಕು ಎಂದು ಕರವೇ ಕರೆ ನೀಡಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications