Karnataka Rains: ಕೆಲವೇ ಕ್ಷಣಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಮಳೆರಾಯನ ಆರ್ಭಟ ಕಡಿಮೆಯಾಗಿದ್ದು, ಇದೀಗ ಮತ್ತೆ ಕೆಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ ಇಂದು (ಆಗಸ್ಟ್ 17) ಇನ್ನೂ ಕೆಲವೇ ಕ್ಷಣಗಳಲ್ಲಿ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗಾದರೆ ಎಲ್ಲೆಲ್ಲಿ ಮಳೆ ಬೀಳಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಬೆಳಗಾವಿ ಕೊಡಗು ಜಿಲ್ಲೆಗಳಲ್ಲಿ ಮಳೆರಾಯ ದೊಡ್ಡ ದೊಡ್ಡ ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಇಂದು ಇನ್ನೂ ಕೆಲವೇ ಕ್ಷಣಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ಮತ್ತೊಂದೆಡೆ ರಾಮನಗರ, ಧಾರವಾಡ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಹಲವೆಡೆ, ಕೋಲಾರ, ಕರಬುರಗಿ, ರಾಯಚೂರು, ಮಂಡ್ಯ, ಮೈಸೂರು, ಕೊಡಗು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇನ್ನೂ ಕೆಲವೇ ಕ್ಷಣಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ.
ಭಾರೀ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದರೆ, ಇನ್ನೂ ಕೆಲವೆಡೆ ಡ್ಯಾಂಗಳು ತುಂಬುವ ಹಂತವನ್ನು ತಲುಪಿವೆ. ಒಟ್ಟಿನಲ್ಲಿ ಇದರಿಂದ ಕಳೆದ ಒಂದು ವರ್ಷದಿಂದ ಕತ್ತಲು ಕವಿದಿದ್ದ ರೈತರ ಮುಖದಲ್ಲಿ ಬೆಳಕು ಚೆಲ್ಲಿದಂತಾಗಿದೆ.
ಕಳೆದ ವರ್ಷ ಅಂದರೆ 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ನದಿ, ಕೆರೆ-ಕಟ್ಟೆಗಳು ಜೊತೆಗೆ ಜಲಾಶಯಗಳು ಕೂಡ ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ, ಈ ಬಾರಿ ಅಂದರೆ 2024ರ ಜೂನ್ ಆರಂಭ ಆಗುತ್ತಿದ್ದಂತೆ ಮುಂಗಾರು ಚುರುಕು ಪಡೆದ ಪರಿಣಾಮ ಬಹುತೇಕ ಜಲಾಮೂಲಗಳು ತುಂಬಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇನ್ನು ಕಳೆದ ವರ್ಷ ಮಳೆಯಿಲ್ಲದೆ, ಅನಾವೃಷ್ಟಿಯಿಂದ ಬಹುತೇಕ ಭಾಗಗಳಲ್ಲಿ ರೈತರು ಬೆಳೆದ ಬೆಳೆಗಳೆಲ್ಲವೂ ಸೂರ್ಯನ ಶಾಖಕ್ಕೆ ಸೊರಗಿ ಹೋಗಿದ್ದವು. ಇನ್ನೂ ಈ ಬಾರಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಪರಿಣಾಮ ಕೆಲವೆಡೆ ಅತೀವೃಷ್ಟಿಯಿಂದ ಬೆಳೆಗಳೆಲ್ಲ ನೀರುಪಾಲಾದ ಘಟನೆಗಳು ನಡೆದಿವೆ.
ಇನ್ನು ಹಿರಿಯೂರು ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಈಶ್ವರಗೆರೆಯಲ್ಲಿ 117.6 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ. ಉಳಿದಂತೆ ಸೂಗೂರಿನಲ್ಲಿ 93.4, ಇಕ್ಕನೂರಿನಲ್ಲಿ 45.2, ಹಿರಿಯೂರು 42.6, ಬಬ್ಬೂರಿನಲ್ಲಿ 34 ಮಿಲಿ ಮೀಟರ್ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ 66.56 ಮಿಲಿ ಮೀಟರ್ ಸರಾಸರಿ ಮಳೆ ಸುರಿದಿದೆ.












Click it and Unblock the Notifications