Karnataka Rain: ರಾಜ್ಯದಲ್ಲಿ ನವೆಂಬರ್‌ 29 ಮಳೆ; ಎಲ್ಲೆಲ್ಲಿ ಅಬ್ಬರಿಸಲಿದ್ದಾನೆ ವರುಣದೇವ? ಹವಾಮಾನ ಇಲಾಖೆ ಹೇಳಿದ್ದೇನು?

ಬೆಂಗಳೂರು, ನವೆಂಬರ್‌ 23: ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನವೆಂಬರ್ 29ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ಬೆಂಗಳೂರಿನ ಹಲವು ಭಾಗಗಳಲ್ಲಿ ಬುಧವಾರ ಮಳೆಯಾಗಿದ್ದು, ಇಂದು ಸಹ ವರುಣನ ಆಗಮನವಾಗಲಿದೆ. ಅಲ್ಲದೇ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

karnataka-rain

ಇಂದಿನಿಂದ ರಾಜ್ಯದ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಇನ್ನೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಬುಧವಾರ ಸಂಜೆ ಹೊತ್ತಿಗೆ ಶುರುವಾದ ಮಳೆ, ರಾತ್ರಿಯವರೆಗೂ ಮಳೆಯಾಗಿದ್ದು,ಜಯನಗರ, ಕೆಆರ್.ಪುರ, ವೈಟ್ ಫೀಲ್ಡ್, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಶಿವಾಜಿನಗರ, ಅಂಜನಾಪುರ, ವಸಂತ ನಗರ, ಪೀಣ್ಯ, ಸಿವಿ ರಾಮನ್ ನಗರ, ಬಸವನಗುಡಿ, ಕೊತ್ನೂರು, ಮಾರತ್ತಹಳ್ಳಿ, ಹೂಡಿ, ಮಹದೇವಪುರ, ಕೋರಮಂಗಲ, ಹೂಡಿ, ಮಹದೇವಪುರ, ವರ್ತೂರು, ಕಲ್ಯಾಣ ನಗರ, ಬನಶಂಕರಿ, ಕುಮಾರ ಸ್ವಾಮಿ ಬಡಾವಣೆ, ಬಿಇಎಲ್, ಉತ್ತರಹಳ್ಳಿ, ಕೆಂಗೇರಿ, ನಾಗರಭಾವಿ, ವಿಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆಯಾಗಿದೆ.

ನವೆಂಬರ್‌ 23ರಂದು ಕೊಡಗು ಮತ್ತು ಮೈಸೂರು ಜಿಲ್ಲೆಗೆ ನವೆಂಬರ್‌ 24 ಮತ್ತು ನವೆಂಬರ್‌ 25 ರಂದು ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ನೀಡಿದೆ. ನವೆಂಬರ್‌ 24ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ಘೋಷಿಸಲಾಗಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆ!

ಇನ್ನೂ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಂದು ಹಾಗೂ ನಾಳೆ ತಮಿಳುನಾಡು, ಕೇರಳದ ಮಾಹೆ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗದ್ದು, ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ ಆಂಧ್ರ ಪ್ರದೇಶ, ಓಡಿಶಾದ ಕರಾವಳಿ, ಗೋವಾ, ಮಹಾರಾಷ್ಟ್ರದ ದಕ್ಷಿಣ ಮಧ್ಯ ಭಾಗ, ಛತ್ತೀಸ್​ಗಢದಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಗಳಿವೆ.

ನವೆಂಬರ್ 27 ರಿಂದ 28 ರವರೆಗೆ ಭಾರತದ ವಾಯುವ್ಯ, ಹಿಮಾಲಯ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪೂರ್ವ ಮಾರುತಗಳ ಪರಿಣಾಮ ವಾಯುವ್ಯ ಮತ್ತು ಪಶ್ಚಿಮ ಭಾರತದ ಮೇಲೆ ಹವಾಮಾನದಲ್ಲಿ ಬದಲಾವಣೆ ಆಗಲಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಭಾರತೀಯ ಹಮಾಮಾನ ಇಲಾಖೆ ಹೇಳಿದೆ.

ನವೆಂಬರ್ 24ರ ಬಳಿಕ ದೆಹಲಿ-ಎನ್​ಸಿಆರ್ ಪ್ರದೇಶದ ಹವಾಮಾನ ಬದಲಾವಣೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ನವೆಂಬರ್​ 24 ರಿಂದ 27ರವರೆಗೆ ಮೋಡ ಕವಿದ ವಾತಾವರಣ ಇರಲಿದೆ. ಇಂದಿನಿಂದ ಮುಂದಿನ ಮೂರು ದಿನ ಮಂಜು ಕಾಣಿಸಿಕೊಳ್ಳಬಹುದು. ನವೆಂಬರ್ 27ರಂದು ದಹೆಲಿಯ ಪಶ್ಚಿಮ ವ್ಯಾಪ್ತಿಯಲ್ಲಿ ಸಣ್ಣ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಭಾರತೀಯ ಹಮಾಮಾನ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+