Karnataka Rain: ಏಪ್ರಿಲ್ 12ರಿಂದ ರಾಜ್ಯದ ಈ ಭಾಗಗಳಲ್ಲಿ ಮಾತ್ರ ಭಾರೀ ಮಳೆ ಮುನ್ಸೂಚನೆ-ಈ ಭವಿಷ್ಯವಾದ್ರೂ ನಿಜವಾಗಲಿದ್ಯಾ?
Karnataka Rain: ಈಗಾಗಲೇ 2023ರಲ್ಲಿ ಮಳೆಯಿಲ್ಲದೆ ರಾಜ್ಯದ ಬಹುತೇಕ ಭಾಗಗಳಲ್ಲಿ ಭೀಕರ ಬರ ನಿರ್ಮಾಣವಾಗಿದೆ. ಇನ್ನು ಇದೀಗ 2024ರ ಏಪ್ರಿಲ್ ಆರಂಭವಾರೂ ಮಳೆಯಿಲ್ಲ. ಮತ್ತೊಂದೆಡೆ ರಣ ಬಿಸಿಲು ಜನರನ್ನು ಮನೆಯಿಂದ ಹೊರಗಡೆ ಕಾಲಿಡದಂತೆ ಮಾಡಿದೆ. ಇದರ ನಡುವೆಯೂ ಏಪ್ರಿಲ್ 2ನೇ ವಾರದಲ್ಲಿ ಹಲವೆಡೆ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಲೆಕ್ಕಾಚಾರದ ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ಒಂದು ಬಾರಿಯಾದರೂ ಮಳೆ ಆಗಬೇಕು. ಆದರೆ ಇದೆಲ್ಲ ಉಲ್ಟಾ ಆಗಿದ್ದು, ಮಾರ್ಚ್ ಕಳೆದು ಏಪ್ರಿಲ್ ಆರಂಭವಾದರೂ ಮಳೆಯಿಲ್ಲ. ಎಲ್ಲೋ ಒಂದೊಂದು ಜಿಲ್ಲೆಯಲ್ಲಿ ಮಾತ್ರ ಆಗಾಗ ಜಿನುಗು ಮಳೆಯಾಗುತ್ತಿದೆ ಅಷ್ಟೆ. ಇನ್ನು ಹವಾಮಾನ ಇಲಾಖೆಯ ಇಂದಿನ ವರದಿ ಪ್ರಕಾರ ಏಪ್ರಿಲ್ 12ರಿಂದ ಕರಾವಳಿ, ಮಲೆನಾಡು ಭಾಗಗಳಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಿನ್ನೆ (ಏಪ್ರಿಲ್ 03) ಸಂಜೆ ಮಳೆಯಾಗಿದ್ದು, ಸ್ವಲ್ಪ ಮಟ್ಟಿಗೆ ಈ ಜಿಲ್ಲೆಗಳ ಜನರಿಗೆ ಅಂತಸ ಮೂಡಿಸಿದಂತಾಗಿದೆ. ಇನ್ನು ಬಹುತೇಕ ಜಿಲ್ಲೆಗಳಲ್ಲಿ ತಾಪಾಮಾನದ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದೆ. ಅದರಲ್ಲೂ ಬಳ್ಳಾ, ರಾಯಚೂರು, ಕಲಬುರಗಿ, ಕೋಲಾರ ಜಿಲ್ಲೆಗಳಲ್ಲಂತೂ ರಣ ಭೀಕರ ಬಿಸಿಲಿನಿಂದ ಜನರು ಮನೆಯಿಂದ ಹೊರಗಡೆ ಬರುವುದೇ ಕಷ್ಟವಾಗಿದೆ. ಅಲ್ಲದೆ ಭಾರೀ ಸೆಖೆ ಹಿನ್ನೆಲೆ ಮನೆಯ ಒಳಗೂ ಇರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಬಿಸಿಲಿನ ಬೇಗೆಯಿಂದ ಬೆಂದಿದ್ದ ಕರಾವಳಿ, ಮಲೆನಾಡು ಭಾಗಗಳ ಜನರಿಗೆ ಹವಾಮಾನ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಏಪ್ರಿಲ್ 12ರಿಂದ ಮಳೆಯಾದರೆ, ಮಲೆನಾಡಿನಲ್ಲಿ ಒಣಗುತ್ತಿರುವ ಕಾಫಿಗಿಡಗಳಿಗೆ ಜೀವ ಬಂದಂತಾಗುತ್ತದೆ. ಮತ್ತೊಂದೆಡೆ ಬರವನ್ನು ಹೋಗಲಾಡಿಸಿ ರೈತರ ಮುಖದಲ್ಲಿ ಸಂತಸ ಮೂಡಿದಂತಾಗಲಿದೆ.












Click it and Unblock the Notifications