Karnataka rain: ಈ ಜಿಲ್ಲೆಗಳಲ್ಲಿ ಮಳೆಯೋ ಮಳೆ, ಇನ್ನೂ ಎರಡು ದಿನ ಮುಂದುವರೆಯುವ ಮುನ್ಸೂಚನೆ
ಕರ್ನಾಟಕ, ಸೆಪ್ಟೆಂಬರ್, 11: ಜುಲೈ ತಿಂಗಳಿನಲ್ಲಿ ಮಳೆರಾಯ ಕೈಕೊಟ್ಟಿದ್ದು, ಇದೀಗ ಸೆಪ್ಟೆಂಬರ್ ತಿಂಗಲಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ನಿನ್ನೆ (ಭಾನುವಾರ, ಸೆಪ್ಟೆಂಬರ್ 10) ಕರಾವಳಿ, ಮಲೆನಾಡು ಜಿಲ್ಲೆಗಳು ಸೇರಿದಂತೆ ಹಲವಡೆ ಉತ್ತಮ ಮಳೆಯಾಗಿದೆ. ಹಾಗೆಯೇ ಸೆಪ್ಟೆಂಬರ್ 11, 12ರಂದು ಕೂಡ ಹಲವು ಜಿಲ್ಲೆಗಳಿಗೆ ಮಳೆರಾಯ ತಂಪೆರೆಯಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಯಾವ್ಯವ ಜಿಲ್ಲೆಗಳಲ್ಲಿ ಮಳೆಯಾಗಲಿದ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯ ರಾಜಧಾನಿಯಲ್ಲಿ ಆಗಾಗ ಸಾದಾರಣ ಮಳೆಯಾಗುತ್ತಿದ್ದರೆ, ಮಲೆನಾಡು, ಕರಾವಳಿ ಜಿಲ್ಲೆಗಳ ಹಲವೆಡೆ ನಿರಂತರವಾಗಿ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಈ ಭಾಗದಲ್ಲಿ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಕರಾವಳಿಯ ಬಹುತೇಕ ಕಡೆಗಳಲ್ಲಿ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗಾಳಿಯ ಪ್ರಮಾಣ ಹೆಚ್ಚಿರಲಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಇನ್ನೂ ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮಿ ವೇಗದಲ್ಲಿ ಇರಲಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಮುಂದಿನ ಇಪ್ಪತ್ನಾಲ್ಕು ಗಂಟೆಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಇಲ್ಲಿಯೂ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಇನ್ನು ನಗರದದಲ್ಲಿ ಕೆಲವೊಮ್ಮೆ ಬಲವದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯೂ ಇದ್ದು, ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ ಎಂದು ತಿಳಿಸಿದೆ.
ಕರ್ನಾಟಕದ ಚಿರಾಪುಂಜಿ ಅಂತಲೇ ಹೆಸರುವಾಸಿಯಾಗಿರುವ, ಅತೀ ಹೆಚ್ಚು ಮಳೆ ಪಡೆಯುವ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 5 ದಿನಗಳಿಂದಲೂ ಮಳೆ ಸುರಿಯುತ್ತಿದ್ದು, ಇದರಿಂದ ಮಲೆನಾಡಿಗರ ಮುಖದಲ್ಲಿ ಸಂತಸ ಮೂಡಿದಂತಾಗಿದೆ. ಇನ್ನು ಇಲ್ಲಿ ಇಂದು ಬೆಳಗ್ಗೆ7 ಗಂಟೆ ವೇಳೆ 43 ಮಿ.ಮೀಟರ್ ಮಳೆ ಬಿದ್ದಿದೆ. ಹೀಗೆ ಕಳೆದ 5 ದಿನಗಳಿಂದಲೂ 40 ರಿಂದ 50 ಮಿ.ಮೀಟರ್‌ನಷ್ಟು ಮಳೆ ಬೀಳುತ್ತಿದೆ.
ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿ, ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲೂ ಉತ್ತಮ ಮಳೆ ಬಿದ್ದಿದೆ. ಕಳೆದ 5 ದಿನಗಳಿಂದಲೂ ಭಾಗಮಂಡಲದಲ್ಲಿ ಭಾರೀ ಮಳೆ ಸುರಿಸದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಕೊಡಗು ಜಿಲ್ಲೆಯಲ್ಲಿ ಯಾವ್ಯಾ ದಿನ ಎಷ್ಟೆಷ್ಟು ಮಳೆ ಸುರಿದಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಕೊಡಗಿನಲ್ಲಿ ಯಾವ್ಯಾವ ದಿನ ಎಷ್ಟು ಮಳೆ?
1. ಸೆಪ್ಟೆಂಬರ್ 6- 51 ಮಿಲಿ ಮೀಟರ್
2. ಸೆಪ್ಟೆಂಬರ್ 7 -27 ಮಿಲಿ ಮೀಟರ್
3. ಸೆಪ್ಟೆಂಬರ್ 8 - 63 ಮಿಲಿ ಮೀಟರ್
4. ಸೆಪ್ಟೆಂಬರ್ 9 - 38.8 ಮಿಲಿ ಮೀಟರ್
5. ಸೆಪ್ಟೆಂಬರ್ 10 - 48 ಮಿಲಿ ಮೀಟರ್
ಭಾನುವಾರ (ಸೆಪ್ಟೆಂಬರ್ 10) ಕೊಡಗಿನ ಭಾಗಮಂಡಲದಲ್ಲಿ 5 ಸೆ.ಮಿ., ನಾಪೊಕ್ಲು ಭಾಗದಲ್ಲಿ 3 ಸೆಂಟಿ ಮೀಟರ್, ವೀರಾಜಪೇಟೆಯಲ್ಲಿ ಒಂದು ಸೆಂಟಿ ಮೀಟರ್ ಮಳೆ ಬಿದ್ದಿದೆ. ಹಾಗಯೇ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆ ಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ 5 ಸೆ.ಮೀ, ಪಣಂಬೂರು, ಪುತ್ತೂರು ಭಾಗದಲ್ಲಿ 4 ಸೆ.ಮೀ, ಮಂಗಳೂರು, ಬೆಳ್ತಂಗಡಿಯ ಹಲವೆಡೆ ಉತ್ತಮ ಮಳೆ ಸುರಿದಿದೆ.
ಇನ್ನು ಉಡುಪಿ ಜಿಲ್ಲೆಯ ಕಾರ್ಕಳ, ಸಿದ್ದಾಪುರ, ಉಡುಪಿ, ಕೋಟಾ, ಕುಂದಾಪುರ, ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಗೋಕರ್ಣಾ, ಹೊನ್ನಾವರ, ಗೇರುಸೊಪ್ಪಾ, ಕದ್ರಾದಲ್ಲೂ ಭಾರೀ ಮಳೆ ಸುರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಹೆಯೇ ಉತ್ತರ ಒಳನಾಡಿನ ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಗದಗ, ವಿಜಯಪುರ ಜಿಲ್ಲೆಗಳ ಹಲವೆಡೆ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಹೀಗೆ ದಿನದಿಂದ ದಿನಕ್ಕೆ ಮಳೆರಾಯನ ಆರ್ಭಟ ಹೆಚ್ಚುತ್ತಾ ಹೋದಂತೆಲ್ಲ ಬೇಸತ್ತಿದ್ದ ರೈತರ ಬಾಡಿದ ಮುಖದಲ್ಲಿ ಒಂದಷ್ಟು ಕಳೆ ಬಂದಂತಾಗುತ್ತದೆ.












Click it and Unblock the Notifications