ಸರ್ ಎಂವಿ ಕಟ್ಟಿದ ಕೆಆರೆಸ್ ಮತ್ತಿತರ ಅಣೆಕಟ್ಟುಗಳ ನೀರಿನ ಮಟ್ಟ

Posted By: Gururaj
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 15 : ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ವೀಕೆಂಡಿನಲ್ಲಿ ಸುರಿದು ವೀಕ್ ಡೇಗಳಲ್ಲಿ ನಾಲ್ಕೈದು ದಿನ ರಜಾ ಪಡೆದು ಎಲ್ಲೋ ಸುತ್ತಲು ಹೋಗಿದ್ದ ಮಳೆರಾಯ ಗುರುವಾರ ಸಂಜೆ ಮತ್ತೆ ಬೆಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದ. ಕೆಂಗೇರಿ ಬಳಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ಉತ್ತಮ ಮಳೆಯಾಗಿದೆ. ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಕೂಡ ಮಳೆಯಾಗುವ ಸಾಧ್ಯತೆ ಇದೆ.

ಕಲಬುರಗಿಯಲ್ಲಿ ವರುಣನ ಅರ್ಭಟ, ಆಸ್ಪತ್ರೆಗೆ ನುಗ್ಗಿದ ನೀರು

Karnataka rain forecast and water level of dams Sep 15, 2017

ಕಲಬುರಗಿ ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಭಾರೀ ಹಾನಿ ಮಾಡಿದೆ. ಕೇವಲ ಮೂರು ಗಂಟೆಗಳಲ್ಲಿ 111 ಮಿ.ಮೀ.ಮಳೆಯಾಗಿದೆ. ಭಾರೀ ವರ್ಷಧಾರೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳಲ್ಲಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂತಹ ಮನೆಗಳಿಗೆ ಮಹಾನಗರ ಪಾಲಿಕೆಯಿಂದ ಊಟದ ಪ್ಯಾಕೇಟ್‍ಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1795.20
ಸುಪಾ 1849.92 1792.68
ವಾರಾಹಿ 1949.50 1923.72
ಹಾರಂಗಿ 2859.00 2857.04
ಹೇಮಾವತಿ 2922.00 2888.59
ಕೆಆರ್‌ಎಸ್ 124.80 104.03
ಕಬಿನಿ 2284.00 2278.90
ಭದ್ರಾ 2158.00 2136.83
ತುಂಗಭದ್ರಾ 1633.00 1624.84
ಘಟಪ್ರಭಾ 2175.00 2155.55
ಮಲಪ್ರಭಾ 2079.50 2055.65
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1615.00

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Water level in almost all dams in Karnataka has increased considerably. North-East monsoon is active in many parts of Karnataka. Kalaburagi, Bagalkot have received good rain. KRS built by Sir M. Visvesvaraya (Vishweshwaraiah) is still far away from full. It's maximum water level is 124.80 ft.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ