Karnataka Rain Alert: ಅ.4–5ರಂದು ಕರ್ನಾಟಕದಲ್ಲಿ ಮಳೆ ಅಬ್ಬರ; ಈ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ ಐಎಂಡಿ!
Karnataka Rain Alert: ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಅಕ್ಟೋಬರ್ 04 ಹಾಗೂ 05ರಂದು ಸಹ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಅಲ್ಪ ಪ್ರಮಾಣದಲ್ಲಿ ಬಿಸಿಲು / ಸೆಖೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ಈ ಬಾರಿ ಬರದ ತೀವ್ರತೆಯು ಭಾರೀ ಹೆಚ್ಚಾಗಿದೆ. ಉತ್ತಮ ಮಳೆ ಆಗದೆ ಇರುವುದು ಭಾರೀ ಸಂಕಷ್ಟಕ್ಕೆ ಕಾರಣವಾಗಿದೆ.
ಕಳೆದ 3 ದಿನಗಳಲ್ಲಿ ಮಳೆಯ ಪ್ರಮಾಣ, ಮೋಡ ಕವಿದ ವಾತಾವರಣ ಮತ್ತು ಸಾಪೇಕ್ಷ ಆರ್ದ್ರತೆ (ಗಾಳಿಯಲ್ಲಿ ತೇವಾಂಶ)ದ ಪ್ರಮಾಣದ ಇಳಿಕ ನೈಋತ್ಯ ಮಾನ್ಸೂನ್‌ನ ಅನುಪಸ್ಥಿತಿ ಹಾಗೂ ಉತ್ತರ ಗುಜಿರಾವ್ ಮತ್ತು ಪಕ್ಕದ ನೈಋುತ್ಯ ರಾಜಸ್ಥಾನದ ಮೇಲೆ ಕೆಳಮಟ್ಟದ ವಾತಾವರಣದಲ್ಲಿ (ount upophetic Invain) ಉಂಟಾಗಿರುವ ಅಂಟಿಸ್ಟ್‌ಕ್ಲೋನಿಕ್ ಸಕ್ಯುಲೇಷನ್ (ಪ್ರತಿ-ಚಂಡಮಾರುತದ ಪರಿಚಲನೆ) ಕಾರಣದಿಂದಾಗಿ ಬೀಸುತ್ತಿರುವ ಒಣ ಉತ್ತರ ದಿಕ್ಕಿನ ಗಾಳಿ - ಇದೆಲ್ಲವುಗಳ ಪರಿಣಾಮವಾಗಿ, ನೈಋತ್ಯ ಮಾನ್ಸೂನ್ ಉತ್ತರ ಭಾರತದ ಉಳಿದ ಭಾಗಗಳು ಸಂಪೂರ್ಣ ಗುಜರಾತ್ ಮತ್ತು ಮಧ್ಯಪ್ರದೇಶ ಹಾಗೂ ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಂದ ಹಿಮ್ಮೆಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈಶಾನ್ಯ ಅಸ್ಸಾಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 15 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವ ಮೇಲ್ಮ ಚಂಡಮಾರುಕದ ಪರಿಚಲನೆ (upper ain cyclonic cication) ಮುಂದುವರಿದಿದೆ ಹಾಗೂ ಸಮುದ್ರ ಮಟ್ಟದಿಂದ 1 ಕಿ.ಮೀ ಎತ್ತರದಲ್ಲಿದ್ದು, ಉತ್ತರ-ದಕ್ಷಿಣ ದಿಕ್ಕಿನ ಟ್ರಲ್ ಕಡಿಮೆ ಒತ್ತಡದ ವಲಯದ ವಿಸ್ತರಣೆ ಆಗಿದೆ.
ಪಶ್ಚಿಮ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಸಮುದ್ರ ಮಟ್ಟದಿಂದ 31 ರಿಂದ 7.4 ಕಿ.ಮೀ ಎತ್ತರದ ನಡುವೆ ಮೇಲ್ಮ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ. ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿದ್ದ ಮೇಲ್ಮ ವಾಯು ಚಂಡಮಾರುತದ ಹರಿಚಲನೆಯು ಈಗ ಸಮುದ್ರ ಮಟ್ಟದಿಂದ 3.1 ಕಿ.ಮೀ. ಎತ್ತರದಲ್ಲಿ ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಬಲ್ಲದ್ವೀಪ ಪ್ರದೇಶದ ಮೇಲೆ ನೆಲೆಗೊಂಡಿದೆ. ಕೊಲೊರಿನ್ ಮತ್ತು ಪಕ್ಕದ ಪ್ರದೇಶದ ಮೇಲೆ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಮೇಲೆ ವಾಯು ಚಂಡಮಾರುತದ ಪರಿಚಲನೆ ಇದೆ.
ಅಲ್ಲದೆ ದಕ್ಷಿಣ ಕರಾವಳಿ ಅಂಧ್ರಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಸಮುದ್ರ ಮಟ್ಟದಿಂದ 5.ಕಿ.ಮೀ ಮತ್ತು 7.4 ಕಿ.ಮೀ ಎತ್ತರದ ನಡುವೆ ಮೇಲ್ಮ ವಾಯು ಚಂಡಮಾರುತದ ಪರಿಚಲನೆ ಇದೆ. ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಕರಾವಳಿಯ ಆಚೆಗಿನ ಆಗ್ನೇಯ ಅರೇಬಿಯನ್ ಸಮುದ್ರದಿಂದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದವರೆಗೆ ಸಮುದ್ರ ಮಟ್ಟದಿಂದ 6 ಕಿ.ಮೀ ಎತ್ತರದಲ್ಲಿ ವ್ಯಾಪಿಸಿದ್ದ ಹಾಗೂ ಕೇರಳ ಕರಾವಳಿಯ ಆಚೆಗಿನ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಮೇಲ್ಮ ವಾಯು ಚಂಡಮಾರುತದ ಪರಿಚಲನೆಯನ್ನು (celinic discussion) ಒಳಗೊಂಡಿದ್ದ ಹವಾಮಾನದ ಹಗ್ಗು ಪ್ರದೇಶವು (sung) ಈಗ ದುರ್ಬಲವಾಗಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ. ಹೀಗಾಗಿ, ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದೆ.
Karnataka Rain Alert: ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್
ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಅಕ್ಟೋಬರ್ 4 ಮತ್ತು 5 ರಂದು ಮಳೆ ಆಗಲಿದೆ. ಅಕ್ಟೋಬರ್ 5ರ ಸೋಮವಾರ ಭಾರೀ ಮಳೆ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ. ಭಾನುವಾರ ಅಲ್ಲಲ್ಲಿ ಚದುರಿದಂತೆ ಮಳೆ ಆಗುವ ಸಾಧ್ಯತೆ ಇದೆ ಎಂದೂ ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.


Click it and Unblock the Notifications
