Karnataka Railways: ಹಬ್ಬಕ್ಕೆ ತೆರಳುವ ಪ್ರಯಾಣಿಕರೇ ಗಮನಿಸಿ: ವಿವಿಧ ರೈಲುಗಳ ಸಂಚಾರ ರದ್ದು, ಸಮಯ ಬದಲಾವಣೆಯ ಪಟ್ಟಿ

ಬೆಂಗಳೂರು, ಸೆಪ್ಟಂಬರ್ 06: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿನ ಒಂದಷ್ಟು ರೈಲುಗಳು ಸಮಯ ಪರಿಷ್ಕರಣೆಗೊಂಡ, ಬೆಂಗಳೂರಿನಿಂದ ವಿವಿಧೆಡೆಗೆ ತೆರಳುವ ವೀಕ್ಲಿ ಎಕ್ಸ್‌ಪ್ರೆಸ್‌ ರೈಲುಗಳು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಯಾವೆಲ್ಲ ರೈಲುಗಳು ಸಮಯ ಬದಲಾಗಿದೆ, ಸ್ಥಗಿತಗೊಂಡ ರೈಲುಗಳ ಪಟ್ಟಿ ಮಾಹಿತಿ ಇಲ್ಲಿದೆ.

ಇದೇ ಸೆಪ್ಟಂಬರ್ 8ರಿಂದ ಅನ್ವಯವಾಗುವಂತೆ ವಾಯುವ್ಯ ರೈಲ್ವೆಯು ಬಿಕಾನೇರ್ ನಿಂದ ಬೆಂಗಳೂರಿಗೆ ಸಂಪರ್ಕ ಸಾಧಿಸುವ ಯಶವಂತಪುರ-ಬಿಕಾನೇರ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು (ಸಂಖ್ಯೆ 16587/16588) ಸಮಯ ಪರಿಷ್ಕರಣೆ ಮಾಡಲಾಗಿದೆ.

Karnataka Railways Timing Revision of Trains Cancellation of Weekly Express trains Check full list here

ರೈಲಗಳು ಪರಿಷ್ಕೃತ ಸಮಯ ವೇಳಾಪಟ್ಟಿ

* ಯಶವಂತಪುರ-ಬಿಕಾನೇರ್ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16587) 8ನೇ ಸೆಪ್ಟೆಂಬರ್ 2024 ರಿಂದ ಆರಂಭವಾಗಲಿದ್ದು, ಈ ರೈಲು ಹಿಂದಿನ ಸಮಯ 09:00 ಗಂಟೆಗೆ ಬದಲಾಗಿ 09:10 ಗಂಟೆಗೆ ಬಿಕಾನೇರ್ ತಲುಪಲಿದೆ.

* ಬಿಕಾನೇರ್-ಯಶವಂತಪುರ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ (16588) 8ನೇ ಸೆಪ್ಟೆಂಬರ್ 2024 ರಿಂದ ಸಂಜೆ 19:10 ಗಂಟೆಗೆ ಬದಲಾಗಿ 19:00 ಗಂಟೆಗೆ ಬಿಕಾನೇರ್‌ನಿಂದ ಹೊರಡುತ್ತದೆ.

ರದ್ದಾದ ರೈಲುಗಳ ವೇಳಾಪಟ್ಟಿ ವಿವರ

ಬೆಂಗಳೂರಿನ ಯಶವಂಪುರದಲ್ಲಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲುಗಳಿಗೆ ಲೈನ್ ರದ್ದುಗೊಳಿಸಲಾಗಿದೆ. ಇಲ್ಲಿ ನಿಲುಗಡೆ ಆಗುತ್ತಿಲ್ಲ. ಕಾರಣದ ಯಶವಂತಪುರ ಯಾರ್ಡ್‌ನಲ್ಲಿನ 1, 2, 3 ಮತ್ತು 4 ಪಿಟ್‌ಲೈನ್‌ಗಳನ್ನು ಸುಧಾರಣಾ ಕಾರ್ಯ ನಡೆಯುತ್ತಿದೆ. 2024 ರ ನವೆಂಬರ್ 1ರಿಂದ ಮಾರ್ಚ್ 31, 2025 ರವರೆಗೆ ಅಭಿವೃದ್ಧಿ ಕೆಲಸಗಳು ನಡೆಯಲಿವೆ.

ಪ್ಲಾಟ್‌ಫಾಮ್, ಕಾಂಕ್ರೀಟ್ ಕೆಲಸಗಳು, ಎಪಾಕ್ಸಿ ಗ್ರೌಟಿಂಗ್, ಹೊಸ ಹಳಿ ಅಳವಡಿಕೆ, ಟ್ರ್ಯಾಕ್ ಲಿಂಕ್ ಕೆಲಗಳು ನಡೆಯುತ್ತವೆ. ಈ ಸಂಬಂಧ ಯಶವಂತಪುರ ನಿಲುಗಡೆಯನ್ನು ಈ ಕೆಳಗಿನ ರೈಲುಗಳು 2025ರ ಮಾರ್ಚ್ ವರೆಗೆ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

* ಯಶವಂತಪುರ-ಡಾ. MGR ಚೆನ್ನೈ ಸೆಂಟ್ರಲ್ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12291) ನವೆಂಬರ್ 1, 2024 ರಿಂದ ಮಾರ್ಚ್ 28, 2025 ರವರೆಗೆ ರೈಲು ಸಂಚಾರ ರದ್ದುಗೊಳಿಸಲಾಗಿದೆ.

* ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12292) ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಪ್ರತಿ ಶನಿವಾರ 2024ರ ನವೆಂಬರ್ 2 ರಿಂದ ಮಾರ್ಚ್ 29, 2025 ರವರೆಗೆ ಸಂಚಾರ ಸೇವೆ ಸ್ಥಗಿತಗೊಳಿಸಲಾಗಿದೆ.

* ಪ್ರತಿ ಶುಕ್ರವಾರ ಸಂಚರಿಸುತ್ತಿದ್ದ ಯಶವಂತಪುರ-ಪುದುಚೇರಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16573) ನವೆಂಬರ್ 1, 2024 ರಿಂದ ಮಾರ್ಚ್ 28, 2025 ರವರೆಗೆ ಸಂಚಾರ ಸೇವೆ ನಿಲ್ಲಿಸಿದೆ.

* ಪುದುಚೇರಿ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16574) 2024ರ ನವೆಂಬರ್ 2ರಿಂದ ಮಾರ್ಚ್ 29, 2025 ರವರೆಗೆ ಪ್ರತಿ ಶನಿವಾರ ಪುದುಚೇರಿ ನಿಲ್ದಾಣದಿಂದ ಹೊರಡುವ ರೈಲಿನ ಓಟಕ್ಕೆ ಬ್ರೇಕ್ ಬಿದ್ದಿದ್ದು, ಸಂಚಾರ ರದ್ದುಗೊಳಿಸಿದ್ದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಯಶವಂತಪುರ-ಬೀದರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16577) 2024ರ ನವೆಂಬರ್ 2ರಿಂದ ಮಾರ್ಚ್ 29, 2025 ರವರೆಗೆ ಪ್ರತಿ ಶನಿವಾರ ಸೇವೆ ನೀಡುತ್ತದೆ. ಈ ರೈಲಿಗೂ ಯಶವಂತಪುರ ನಿಲ್ದಾಣದಲ್ಲಿ ಅವಕಾಶ ಇಲ್ಲದಾಗಿತ್ತು. ಇದೀಗ ಆ ರೈಲ ಸಂಚಾರ ರದ್ದುಗೊಂಡಿದೆ.

* ಬೀದರ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16578) ಬೀದರ್‌ನಿಂದ ನವೆಂಬರ್ 3, 2024 ರಿಂದ 2025ರ ಮಾರ್ಚ್ 30ರವರೆಗೆ ಪ್ರತಿ ಭಾನುವಾರ ಸಂಚರಿಸುತ್ತದೆ, ಇದರ ಪ್ರಯಾಣ ರದ್ದುಗೊಳಿಸಲಾಗಿದೆ.

* ಯಶವಂತಪುರ-ಪಂಢರಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16541) 2024 ಅಕ್ಟೋಬರ್ 31 ರಿಂದ ಮಾರ್ಚ್ 27, 2025 ರವರೆಗೆ ಪ್ರತಿ ಗುರುವಾರ ಯಶವಂತಪುರದಿಂದ ಹೊರಡಬೇಕಿದ್ದ ಈ ರೈಲು ಸಂಚಾರ ಸೇವೆ ಸ್ಥಗಿತಗೊಳಿಸಲಾಗಿದೆ.

* ಪಂಢರಾಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16542) ನವೆಂಬರ್ 1, 2024 ರಿಂದ ಮಾರ್ಚ್ 28, 2025 ರವರೆಗೆ ಪ್ರತಿ ಶುಕ್ರವಾರ ಹೊರಡುತ್ತಿತ್ತು, ರೈಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+