Karnataka Railways: ರಾಜ್ಯದ ಹತ್ತಾರು ರೈಲ್ವೆ ಯೋಜನೆಗಳಿಗೆ ಭರ್ಜರಿ ಅನುದಾನ, ಯೋಜನೆಗಳ ಹಂಚಿಕೆ ಪಟ್ಟಿ

ಬೆಂಗಳೂರು, ಫೆಬ್ರವರಿ 02: ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆ ಅಭಿವೃದ್ಧಿ ಯೋಜನೆಗಳಿಗೆಂದು ಒಟ್ಟು 2.60 ಲಕ್ಷ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಎಂಟನೇ ಭಾರಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಘೋಷಣೆ ಮಾಡಿದ್ದಾರೆ. ಇದರಲ್ಲಿ ಕರ್ನಾಟಕದ ರೈಲು ಯೋಜನೆಗಳಿಗಾಗಿ ಒಟ್ಟು 7,564 ಕೋಟಿ ರೂಪಾಯಿ ಘೋಷಣೆ ಆಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಆರ್ಥಿಕ ನೆರವು ಸಿಕ್ಕಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು, ಕರ್ನಾಟಕಕ್ಕೆ ಸಿಕ್ಕ ಅನುದಾನ, ಯೋಜನೆಗಳು ಯಾವುದಕ್ಕೆಲ್ಲ ಎಷ್ಟು ಆರ್ಥಿಕ ನೆರವು ಸಿಕ್ಕಿದೆ ಎಂಬುದನ್ನು ವಿವರಿಸಿದರು.

Karnataka Railways Projects got Rs 7564 Crore in Union Budget 2025 V Somanna Reaction

ರೈಲ್ವೆ ರಾಜ್ಯ ಸಚಿವರ ಪ್ರಕಾರ, ಕೇಂದ್ರದಿಂದ ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ಬರೋಬ್ಬರಿ 7,564 ಕೋಟಿ ರೂ.ಘೋಷಿಸಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನ ಸುತ್ತಲೂ ಸಂಪರ್ಕ ಸಾಧಿಸಲಿರುವ 149 ಕಿ.ಮೀ.ಬೆಂಗಳೂರು ಉಪನಗರ ಯೋಜನೆಗೆ (BSRP) 306 ಕೋಟಿ ರೂಪಾಯಿ ನೀಡಲಾಗಿದೆ ಎಂದರು.

ರೈಲು ಮಾರ್ಗ ಯೋಜನೆ: ಎಷ್ಟು ಅನುದಾನ ಹಂಚಿಕೆ

  • ಯಶವಂತಪುರದಿಂದ ಚನ್ನಸಂದ್ರ ಮಾರ್ಗ ಯೋಜನೆ: ₹178.8 ಕೋಟಿ
  • ಕಡೂರು-ಚಿಕ್ಕಮಗಳೂರು-ಸಕಲೇಶಪುರ ಮಾರ್ಗ: ₹78.4 ಕೋಟಿ
  • ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಮಾರ್ಗ: ₹64.05 ಕೋಟಿ
  • ಕಲಬುರಗಿ-ಬೀದರ್ ಮಾರ್ಗದ ಯೋಜನೆ: ₹38.43 ಕೋಟಿ
  • ಹುಬ್ಬಳ್ಳಿ-ಚಿಕ್ಕಜಾಜೂರು ಮಾರ್ಗ ಯೋಜನೆ: ₹27.714 ಕೋಟಿ
  • ಗದಗ-ವಾಡಿ ಮಾರ್ಗದ ಯೋಜನೆ: ₹549.45 ಕೋಟಿ
  • ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಯೋಜನೆ: ₹549.45 ಕೋಟಿ
  • ಬಾಗಲಕೋಟ-ಕುಡಚಿ ಮಾರ್ಗದ ಯೋಜನೆ: ₹428.1 ಕೋಟಿ
  • ಬೈಯಪನಹಳ್ಳಿಯಿಂದ ಹೊಸೂರು ಮಾರ್ಗ: ₹223.5 ಕೋಟಿ
  • ಮುನಿರಾಬಾದ್-ಮಹಬೂಬ್ನರ ಮಾರ್ಗದ ಯೋಜನೆ: ₹214.05 ಕೋಟಿ
  • ತೋರಣಗಲ್ಲು-ರಂಜಿತ್‌ಪುರ ಮಾರ್ಗದ ಯೋಜನೆ: ₹104.47 ಕೋಟಿ
  • ಹೊಟಗಿ-ಕುಡಗಿ-ಗದಗ ಮಾರ್ಗದ ಯೋಜನೆ: ₹401.15 ಕೋಟಿ
  • ಮಾರಿಕುಪ್ಪಂ-ಕುಪ್ಪಂ ಯೋಜನೆ: ₹25.62 ಕೋಟಿ
  • ಧಾರವಾಡ-ಬೆಳಗಾವಿ ರೈಲ್ವೆ ಮಾರ್ಗದ ಯೋಜನೆ: ₹8.54 ಕೋಟಿ
  • ಯಲಹಂಕ-ಪೆನುಕೊಂಡ ರೈಲ್ವೆ ಮಾರ್ಗದ ಯೋಜನೆ: ₹4.47 ಕೋಟಿ
  • ಹಾಸನ-ಬೆಂಗಳೂರು ರೈಲ್ವೆ ಮಾರ್ಗದ ಯೋಜನೆ: ₹15.54 ಕೋಟಿ
  • ರೇಣಿಗುಂಟಾ, ಗೂಟಿ, ವಾಡಿಯಲ್ಲಿ ಬೈಪಾಸ್‌ಗೆ: ₹15.198 ಕೋಟಿ‌
  • ಅರಸೀಕೆರೆ-ತುಮಕೂರು ರೈಲ್ವೆ ಮಾರ್ಗದ ಯೋಜನೆ: ₹13.41 ಕೋಟಿ‌
  • ಕೆಂಗೇರಿ-ರಾಮನಗರ-ಮೈಸೂರು ಮಾರ್ಗದ ಯೋಜನೆ: ₹10.728 ಕೋಟಿ
  • ಕಂಕನಾಡಿ-ಪಣಂಬೂರು ರೈಲ್ವೆ ಮಾರ್ಗದ ಯೋಜನೆ: ₹8.94 ಕೋಟಿ‌
  • ದೌಂಡ್-ಕಲಬುರಗಿ ಡಬ್ಲಿಂಗ್ ಮತ್ತು ಪುಣೆ-ಗುಂತಕಲ್ ವಿದ್ಯುತೀಕರಣಕ್ಕೆ ಒಟ್ಟು 641.37 ಕಿ.ಮೀ. ಮಾರ್ಗದ ಯೋಜನೆ: ₹84.39 ಕೋಟಿ
  • ಹೊಸಪೇಟೆ-ಹುಬ್ಬಳ್ಳಿ-ಲೋಂಡಾ-ತಿನೈಘಾಟ್-ವಾಸ್ಕೋ ಡಿ ಗಾಮಾ (352.28 ಕಿ.ಮೀ) ರೈಲ್ವೆ ಮಾರ್ಗದ ಯೋಜನೆ: ₹413.73 ಕೋಟಿ
  • ಬೆಂಗಳೂರು-ವೈಟ್‌ಫೀಲ್ಡ್-ಕೃಷ್ಣರಾಜಪುರಂ ಚತುಷ್ಪಥ ಪುಣೆ, ಮೀರಜ್-ಲೋಂಡಾ ಮಾರ್ಗದ ರೈಲ್ವೆ ಯೋಜನೆ: ₹357.6 ಕೋಟಿ

ಇತ್ತೀಚೆಗೆ ರೈಲ್ವೆ ಕೋಚ್‌ ಖರೀದಿಗಾಗಿ ಕರ್ನಾಟಕ ಸಚಿವ ಸಂಪುಟ ಕಳೆದ ವರ್ಷ 4,270.30 ಕೋಟಿ ರೂಪಾಯಿ ಒದಗಿಸಲು ಅನುಮೋದನೇ ನೀಡಿತು. ಇದರಲ್ಲಿ ಅರ್ಧ ಹಣ ರೈಲ್ವೆಯಿಂದ ಸಿಗಲಿದೆ. ಸದ್ಯ ಬೆಂಗಳೂರು ಉಪನಗರ ರೈಲು ಯೋಜನೆಗಳನ್ನು ಮುಂದುವರೆಸೆ K-RIDE ಟೆಂಡೆರ್ ಗೆ ಸಿದ್ಧವಾದರೆ ಅಗತ್ಯ ಅನುಮೋದನೆಗೆ ಪಸ್ತಾವನೆ ಸಲ್ಲಿಕೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+