Power Tariff: ಕರ್ನಾಟಕದ ಜನರಿಗೆ ವಿದ್ಯುತ್ ದರ ಏರಿಕೆ ಶಾಕ್? ಏಪ್ರಿಲ್ 1ರಿಂದ ಹೆಚ್ಚಳಕ್ಕೆ ಎಸ್ಕಾಂಗಳ ಪ್ರಸ್ತಾವನೆ
ಬೆಂಗಳೂರು: ರಾಜ್ಯ ಸರ್ಕಾರವು ನಿರಂತರವಾಗಿ ಜನರಿಗೆ ದರ ಏರಿಕೆ ಶಾಕ್ ಕೊಡುತ್ತಲೇ ಬಂದಿದೆ. ಇದೀಗ ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 1ರಿಂದ ವಿದ್ಯುತ್ ದರ ಏರಿಕೆ ಜಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ನಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಾದ ಐದು ಎಸ್ಕಾಂಗಳು ಈ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂ) ಸಲ್ಲಿಸಿರುವ ದರ ಹೆಚ್ಚಳ ಪ್ರಸ್ತಾವನೆ ಪ್ರಕಾರ, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ವಿದ್ಯುತ್ ಬೆಲೆ ಸರಾಸರಿ 12ರಿಂದ 15 ಪೈಸೆ ಹೆಚ್ಚಳವಾಗಬೇಕು. ಆದರೆ ಈ ಬಗ್ಗೆ ಸರ್ಕಾರವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕವು ವಿದ್ಯುತ್ ದರ ಪರಿಷ್ಕರಿಸಲು ನಿರ್ಧರಿಸಿದೆ. ಒಟ್ಟಾರೆ ಮುಂದಿನ ಆರ್ಥಿಕ ವರ್ಷ 2026-27 ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ಇದು ಈವರೆಗೆ ವಿವಿಧ ವಸ್ತುಗಳ ದರ ಹೆಚ್ಚಳ ಕಂಡಿದ್ದ ಜನರಿಗೆ ಮತ್ತೊಂದು ಬರೆ ಬೀಳಲಿದೆ.

ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಜೆಸ್ಕಾಂ, ಚೆಸ್ಕಾಂ, ಹೆಸ್ಕಾಂ ಹಾಗೂ ಮೆಸ್ಕಾಂ ಸೇರಿ ಐದು ನಿಗಮಗಳು ಸರ್ಕಾರ ಹಾಗೂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ದರ ಪರಿಷ್ಕರಣೆ ಕುರಿತು ಮನವಿ ಸಲ್ಲಿಸಿವೆ. ಬೆಸ್ಕಾಂ 98 ಪೈಸೆ, ಜೆಸ್ಕಾಂ 99 ಪೈಸೆ, ಚೆಸ್ಕಾಂ 97 ಪೈಸೆ, ಹೆಸ್ಕಾಂ 96 ಪೈಸೆ ಮತ್ತು ಮೆಸ್ಕಾಂ 91 ಪೈಸೆ ಏರಿಕೆ ಮಾಡಬೇಕೆಂದು ಸರ್ಕಾರದ ಮುಂದೆ ಮನವಿ ಮಾಡಿಕೊಂಡಿವೆ.
ಅಂದಾಜು 4,500 ಕೋಟಿ ರೂ. ನಷ್ಟ
ರಾಜ್ಯ ಈ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಅಂದಾಜು 4,500 ಕೋಟಿ ರೂ. ನಷ್ಟದಲ್ಲಿವೆ. 2024-25ನೇ ಸಾಲಿನಲ್ಲಿ ಬೆಸ್ಕಾಂ ಮಾತ್ರವೇ 2,800 ಕೋಟಿ ರೂ.ಗಿಂತ ಹೆಚ್ಚು ನಷ್ಟ ಎದುರಿಸಿದೆ. ಸಂಗ್ರಹವಾಗು ಆದಾಯ ಮತ್ತು ನಿರ್ವಹಣಾ ವೆಚ್ಚದ ಮಧ್ಯ ಅಂತರ ಹೆಚ್ಚಿದೆ. ಅದೆಲ್ಲ ಸರಿದೂಗಿಸಿ ನಷ್ಟ ಅನುಭವಿಸಲಾಗಿದೆ. ಆದ್ದರಿಂದ ದರ ಹೆಚ್ಚಿಸುವ ಮೂಲಕ ಇವುಗಳ ನಡುವಿನ ಅಂತರ ಕಡಿಮೆ ಮಾಡಬೇಕೆಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ.
ಮೂಲಗಳ ಪ್ರಕಾರ, 64 ಪೈಸೆ ದರ ಏರಿಕೆಗೆ ಕೋರಿದ್ದು, ಒಂದು ವೇಳೆ ಹೆಚ್ಚಾದರೆ 67ರಿಂದ 99 ಪೈಸೆಗಳವರೆಗೆ ವಿದ್ಯುತ್ ದರ ಹೆಚ್ಚಾಗಬಹುದೆಂದು ಹೇಳಲಾಗುತ್ತದೆ. ಇನ್ನೂ ಈ ಬೆಸಿಗೆ ವೇಳೆ ವಿದ್ಯುತ್ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈಗಾಗಲೇ ಜನವರಿ ಫೆಬ್ರವರಿಯಲ್ಲಿ ಹೆಚ್ಚಿನ ಬಳಕೆ ದಾಖಲಾಗಿದೆ. ಗೃಹಬಳಕೆ, ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಲ್ಲೂ ವಿದ್ಯುತ್ ದರ ಏರಿಕೆ ಆಗುವ ಸಾಧ್ಯತೆ ಇದೆ. ಇನ್ನೂ ಫಿಕ್ಸ್ಡ್ ಚಾರ್ಜ್ನಲ್ಲಿ 10 ರಿಂದ 20 ರೂ.ವರೆಗೆ ಏರಿಕೆ ಸಂಭವವಿದೆ.
ಪ್ರತಿ ಯೂನಿಟ್ಗೆ ಎಷ್ಟೆಷ್ಟು ಏರಿಕೆಗೆ ಕೋರಿವೆ.
1. ಬೆಸ್ಕಾಂ: 98 ಪೈಸೆ
2. ಜೆಸ್ಕಾಂ: 99 ಪೈಸೆ
3. ಚೆಸ್ಕಾಂ: 97 ಪೈಸೆ
4. ಹೆಸ್ಕಾಂ: 96 ಪೈಸೆ
5. ಮೆಸ್ಕಾಂ: 91 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿವೆ.
ಸಾರ್ವಜನಿಕರ ಆಕ್ಷೇಪಣೆಗೆ ಆಹ್ವಾನ
ಐದು ಎಸ್ಕಾಂಗಳು ಕಾರ್ಯ ನಿರ್ವಹಣಾ ವರದಿ ಹಾಗೂ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿವೆ. ಸಾರ್ವಜನಿಕರ ಅಹವಾಲು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಇನ್ನೂ ಫೆಬ್ರವರಿ 27ರವರೆಗೆ ರಾಜ್ಯದ ವಿವಿಧೆಡೆ ಸಾರ್ವಜನಿಕ ವಿಚಾರಣೆ ಸಭೆಗಳನ್ನು ಮಾಡಲಿದ್ದು, ಅಲ್ಲಿಯು ತಮ್ಮ ಅಭಿಪ್ರಾಯಗಳನ್ನು ದಾಖಲಿಸುವಂತೆ ಕೋರಲಾಗಿದೆ.

-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ












Click it and Unblock the Notifications