Opinion Poll: 6ರ ಪೈಕಿ ತಲಾ ಎರಡರಲ್ಲಿ ಬಿಜೆಪಿ, ಕಾಂಗ್ರೆಸ್ ಮುಂದು! ಎರಡು ಅತಂತ್ರ! ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬೆಂಗಳೂರು,ಏಪ್ರಿಲ್26: ವಿಧಾನಸಭಾ ಚುನಾವಣಾ ರಣಕಣ ಜೋರಾಗಿದೆ. ಈ ಬಾರೀ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಸಮರಾಭ್ಯಾಸ ನಡೆಸುತ್ತಿದ್ದು, ಈ ಬಾರಿಯ 2023ರ ವಿಧಾನಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.
ಈಗಾಗಲೇ ಗೆಲ್ಲುವ ತಂತ್ರಗಾರಿಕೆಯ ಜೊತೆಗೆ ಹಲವು ಸಮೀಕ್ಷೆಗಳನ್ನ ನಡೆಸಿರುವ ರಾಜಕೀಯ ಪಕ್ಷಗಳು ಯಾವ ಕ್ಷೇತ್ರದಲ್ಲಿ ಸೋಲು ಉಂಟಾಗಿದಿಯೋ ಆ ಕ್ಷೇತ್ರದ ಮೇಲೆ ಹೆಚ್ಚಿನ ಒತ್ತುಕೊಡುವ ನಿಟ್ಟಿನಲ್ಲಿ ಮುಂದಾಗಿವೆ. ಇನ್ನೂ ಈ ಬಾರೀ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಜ್ಜಾಗಿರುವ ರಾಜಕೀಯ ಪಕ್ಷಗಳಿಗೆ ನಡುಕ ಉಂಟಾಗಿದ್ದು, ಹಲವು ಸಮೀಕ್ಷೆಯಲ್ಲೂ ಅತಂತ್ರ ಫಲಿತಾಂಶಗಳು ಪ್ರಕಟಗೊಂಡಿವೆ.

ಇನ್ನೂ ರಾಜಕೀಯ ಪಕ್ಷಗಳು ಮಾತ್ರವಲ್ಲದೇ ಹಲವು ಸಂಸ್ಥೆಗಳು ಹಾಗೂ ಪ್ರಾದೇಶಿಕ ಸುದ್ದಿ ನೆಟ್‌ವರ್ಕ್‌ಗಳು ಸಹ ರಾಜ್ಯದ ಜನರ ಅಭಿಪ್ರಾಯವನ್ನ ಸಂಗ್ರಹಿಸಿ ಸಮೀಕ್ಷೆಗಳನ್ನ ಹೊರ ಹಾಕಿವೆ. ಈಗಾಗಲೇ ಸಮೀಕ್ಷೆಗಳಿಂದ ಎಚ್ಚೆತ್ತುಕೊಂಡ ರಾಜಕೀಯ ಪಕ್ಷಗಳು ಹೊಸ ಹೊಸ ತಂತ್ರಗಾರಿಕೆಯನ್ನ ಶುರು ಮಾಡಿವೆ.
ಟಿವಿ9 ಮತ್ತು ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ
ಮಂಗಳವಾರ ಟಿವಿ 9 ಹಾಗೂ ಸಿ-ವೋಟರ್ ಸಮೀಕ್ಷೆ ಪ್ರಕಟಗೊಂಡಿದ್ದು,ಟಿವಿ9 ಮತ್ತು ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ಸದರಿ 2023ರ ಚುನಾವಣೆಯಲ್ಲಿ ಪ್ರಬಲ ವಿರೋಧ ಪಕ್ಷ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಹಿನ್ನೆಡೆಯಾಗಿದೆ.

ಹೌದು, ಟಿವಿ9 ಮತ್ತು ಸಿ-ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 106 ರಿಂದ 116 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಬಿಜೆಪಿ 79 ರಿಂದ 89 ಸ್ಥಾನಗಳನ್ನ ಗೆಲ್ಲಿಲಿದೆ ಎಂದು ಅಂದಾಜಿಸಲಾಗಿದ್ದು, ಇನ್ನೂ ಪ್ರಾದೇಶಿನಕ ಜೆಡಿಎಸ್ 24 ರಿಂದ 34 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸರ್ವೆ ಮೂಲಕ ತಿಳಿದು ಬಂದಿದೆ.
ಪಬ್ಲಿಕ್ ಟಿವಿಯ ಕರ್ನಾಟಕದ ಮೂಡ್ ಆಫ್ ಸರ್ವೇ ಹೇಳಿದ್ದೇನು?
ಪಬ್ಲಿಕ್ ಟಿವಿಯ ಮೂಡ್ ಆಫ್ ಕರ್ನಾಟಕ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 98 ರಿಂದ 108 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದ್ದು, ಇನ್ನೂ ಬಿಜೆಪಿಗೆ 85 ರಿಂದ 95 ಸ್ಥಾನಗಳು ಸಿಕ್ಕರೆ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ 28 ರಿಂದ 33 ಸ್ಥಾನಗಳು ಸಿಗಬಹುದು ಎಂದು ಸರ್ವೆಯಿಂದ ತಿಳಿದು ಬಂದಿದೆ. 2 ಸ್ಥಾನವನ್ನ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲಬಹುದು ಎನ್ನಲಾಗಿದೆ.
ಸುವರ್ಣ ನ್ಯೂಸ್, ಜನ್ ಕೀ ಬಾತ್ ಸಮೀಕ್ಷೆ ಹೇಳಿದ್ದೇನು?
ಸುವರ್ಣ ನ್ಯೂಸ್, ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಬಿಜೆಪಿ ಬಹುಮತದ ತುದಿಗೆ ಬಂದು ನಿಂತಿದೆ. 98 ರಿಂದ 109 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಕಾಂಗ್ರೆಸ್‌ಗಿಂತ ಮುಂದಿದೆ. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ 89 ರಿಂದ 97 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೆಡಿಎಸ್ 25 ರಿಂದ 29 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ನ್ಯೂಸ್‌ಫಸ್ಟ್ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಇನ್ನೂ ನ್ಯೂಸ್‌ಫಸ್ಟ್-ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ ಬಿಜೆಪಿ ಪಕ್ಷವೂ 96 ರಿಂದ 106 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರೆ, ಕಾಂಗ್ರೆಸ್ 84 ರಿಂದ 94 ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ 29 ರಿಂದ 34 ಸ್ಥಾನಗಳನ್ನ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
ವಿಸ್ತಾರ ನ್ಯೂಸ್ ಸಮೀಕ್ಷೆ ಹೇಳಿದ್ದೇನು?
ಇನ್ನೂ ರಾಜ್ಯದ ಜನರ ಅಭಿಪ್ರಾಯವನ್ನ ಸಂಗ್ರಹಿಸಿ ಸಮೀಕ್ಷೆ ನಡೆಸಿದ್ದು ಬಿಜೆಪಿಗೆ 88 ರಿಂದ 93 ಸ್ಥಾನಗಳ ಬಂದರೇ ಕಾಂಗ್ರೆಸ್ 84ರಿಂದ 90 ಸ್ಥಾನಗಳನ್ನ ಗೆಲ್ಲಲ್ಲಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಜೆಡಿಎಸ್ 23 ರಿಂದ 26 ಸ್ಥಾನಗಳನ್ನ ಗೆಲ್ಲಬಹುದು ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಇನ್ನೂ ಸೌತ್ ಫಸ್ಟ್-ಪೀಪಲ್ಸ್ ಚುನಾವಣಾ ಪೂರ್ವ ಸಮೀಕ್ಷೆಯು ಕಾಂಗ್ರೆಸ್‌ಗೆ 95 ರಿಂದ 105 ಸ್ಥಾನಗಳನ್ನ ಪಡೆಯಲಿದ್ದು, ಬಿಜೆಪಿ 90 ರಿಂದ 100 ಸ್ಥಾನಗಳು ಹಾಗೂ ಜೆಡಿಎಸ್ 25 ರಿಂದ 30 ಸ್ಥನಗಳನ್ನ ಪಡೆಯ ಬಹುದು ಎಂದು ತಿಳಿಸಿದೆ.












Click it and Unblock the Notifications