Basavaraj Bommai: ಸಿದ್ದರಾಮಯ್ಯನವರನ್ನ ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿಲ್ವಾ..?ಡಿ.ಕೆ.ಶಿವಕುಮಾರ್ ಗೆ ತಿರುಗೇಟು ಕೊಟ್ಟ ಸಿಎಂ
ಬೆಂಗಳೂರು,ಏಪ್ರಿಲ್22: ರಾಜ್ಯ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಚುನಾವಣಾ ಪ್ರಚಾರದ ಭರಾಟೆಯಲ್ಲಿರುವ ರಾಜಕೀಯ ಪಕ್ಷಗಳ ನಾಯಕರಿಗೆ 2023 ರ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಆರೋಪ-ಪ್ರತ್ಯಾರೋಪ ಜೋರಾಗಿದೆ.
ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಯಡಿಯೂರಪ್ಪನವರನ್ನ ಮುಗಿಸ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದು, ಸಿದ್ದರಾಮಯ್ಯನವರನ್ನ ಹೇಗೆ ಮುಗಿಸಿದ್ದಾರೆ ಅಂತ ಗೊತ್ತಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಕಳೆದ ಬಾರಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರನ್ನ ಚಾಮುಂಡೇಶ್ವರಿಯಲ್ಲಿ ಮುಗಿಸಿದ್ರು ಈ ಬಾರಿ ವರಣಾದಲ್ಲಿ ಮುಗಿಸಲು ಏನು ಹುನ್ನಾರ ಮಾಡಿದ್ದಾರೆ ಅನ್ನೋದು ಜಗತ್ತಿಗೆ ಗೊತ್ತಿದೆ. ಡಿ ಕೆ ಶಿವಕುಮಾರ್ ಅವರ ಈ ರೀತಿ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.
ಲಿಂಗಾಯತ ಡ್ಯಾಮ್ ಒಡೆದು ಹರಿದು ಕಾಂಗ್ರೆಸ್ ಬರ್ತಿದೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ. ಮೊದಲು ಅದನ್ನ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದ ಅವರು, 2013 ರಲ್ಲಿ ಲಿಂಗಾಯತ ವಿಭಜನೆ ಆಗಿಲ್ಲ, ಅದು ರಾಜಕೀಯ ಪಕ್ಷವಾಯ್ತು ಅಷ್ಟೇ. ಲಿಂಗಾಯತ ಮತದಾರರು ಯಾವಗಲು ಪ್ರಬದ್ದರಾಗಿದ್ದಾರೆ..
ಡಿ ಕೆ ಶಿವಕುಮಾರ್ ಹೇಳಿಕೆ ನಂತರ ಲಿಂಗಾಯತರು ಬಹಳ ಜಾಗೃತಿರಾಗಿ ಮತಷ್ಟು ಗಟ್ಟಿಯಾಗಿದ್ದಾರೆ. ಗಟ್ಟಿ ಮಾಡುವ ಕೆಲಸವನ್ನ ಡಿ ಕೆ ಶಿವಕುಮಾರ್ ಮಾಡುತ್ತಿದ್ದಾರೆ ಎಂದರು.
ಸವದತ್ತಿ ಸೇರಿದಂತೆ ಬಿಜೆಪಿ ನಾಮಪತ್ರ ಸರಿ ಇಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಚುನಾವಣಾ ಅಧಿಕಾರಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ. ಯಾವುದೇ ಪಕ್ಷ ಏನು ಮಾಡೋಕೆ ಆಗಲ್ಲ. ಎಲ್ಲಾ ಪ್ರೋಸೆಡಿಂಗ್ ಆಗಿದೆ ವಿಡಿಯೋ ಕವರೇಜ್ ಆಗಿದೆ, ಯಾವ ಪಕ್ಷವೂ ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

ನಟ ಚಿಕ್ಕ ಸುದೀಪ್ ಪ್ರಚಾರ ವಿಚಾರವಾಗಿ ಮಾತನಾಡಿ, ಸುದೀಪ್ ಮತ್ತೆ ಪ್ರಚಾರ ಮಾಡ್ತಾರೆ, ಸುದೀಪ್ ಪ್ರಚಾರ ಒಂದೆರಡು ದಿನದಲ್ಲಿ ಪೈನಲ್ ಆಗಲಿದೆ ಎಂದ ಅವರು, ನಾಳೆಯಿಂದ (ಭಾನುವಾರ) ಪ್ರಚಾರಕ್ಕೆ ತೆರಳುತ್ತೇನೆ. ಯಲಹಂಕದಿಂದ ರೋಡ್ ಶೋ ಆರಂಭ ಮಾಡುತ್ತಿದ್ದೇನೆ. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ,ಅರಸಿಕೇರೆ ನಂತರ ಬೆಳಗಾವಿ ಭಾಗ, ಕಲಬುರಗಿ ಭಾಗ ಹಾಗೂ ಮೈಸೂರು ಭಾಗಳಲ್ಲೂ ಚುನಾವಣಾ ಯಾತ್ರೆ ನಡೆಸಲಿದ್ದೇನೆ. ಎಲ್ಲಾ ಕಡೆ ರೋಡ್ ಶೋಗಳನ್ನ ನಡೆಸಲಿದ್ದೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಯಡಿಯೂರಪ್ಪ ಮುಗಿಸಲು ಪಿತೂರಿ ನಡೆಸುತ್ತಿರುವವರ ಜೊತೆ ಶೋಭಕ್ಕ ಸೇರಿ ಏನು ಸಂಚು ರೂಪಿಸುತ್ತಿದ್ದಾರೆ ಎಂಬುದು ಜಗಜ್ಜಾಹೀರವಾಗಿದೆ. ಯಾರು ಯಾರನ್ನು ಮುಗಿಸಲು ಯತ್ನಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್, ಸವದಿ ಅವರು ಹೇಳಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications