ಯಾವಾಗ ಮೋದಿ ಬೈದ್ರು ಅವಾಗ ಮತ ಜಾಸ್ತಿ ಆಗಿವೆ: ಮೋದಿ ವಿಷ ಸರ್ಪ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು

ಹುಬ್ಬಳ್ಳಿ, ಏಪ್ರಿಲ್ 28: ಪ್ರಧಾನಿ ಮೋದಿ ಅವರನ್ನು ಯಾವಾಗ ಯಾವಾಗ ಬೈದ್ರು ಅವಾಗ ಮೋದಿ ಮತ ಜಾಸ್ತಿ ಆಗಿವೆ. ಮುಖ್ಯಮಂತ್ರಿ ಆದಾಗ ಬೈದರು, ಮೋದಿ ಮೂರು ಬಾರಿ ಮುಖ್ಯಮಂತ್ರಿ ಆದರು. ಪ್ರಧಾನಮಂತ್ರಿಯಾದರು. ಇದೀಗ ವಿಷ ಸರ್ಪ ಎಂಬ ಹೇಳಿಕೆ ಮೂಲಕ ಜನರ ಭಾವನೆ ಕೆರಳುಸತ್ತಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ತಮ್ಮ ನೂರು ವರ್ಷಗಳ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ. ಇನ್ನೂ ಅಧಿಕಾರದ ಮದದಲ್ಲಿದ್ದಾರೆ. ಕಾಂಗ್ರೆಸ್ ನವರ ಮತ ಬ್ಯಾಂಕ್ ಆಗಿದೆ. ಅವರ ಮತ ಬ್ಯಾಂಕ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು. ಅವರ ಕಾಲ ಕೆಳಗೆ ಇದ್ದ ಮತಗಳು ಸರಿದು ಹೋಗಿದೆ ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದರು.

Karnataka Polls: Cm Basavaraj Bommai Fierce Attack Against Congress Leaders

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತಾಡಿರೋದು ಎಲ್ಲಕಿಂತ ಹೆಚ್ಚು ನೋವಾಗಿದೆ. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ್‌ ಖರ್ಗೆ ಅವರು 50 ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ. ಕೊನೆಯ ಹಂತದಲ್ಲಿ ಗೌರವ ಯುತವಾಗಿ ನಡೆದುಕೊಂಡರಿಗೆ ಶೋಭೆ ತರುತ್ತದೆ ಎಂದರು. ಇಲ್ಲದಿದ್ದರೆ ಜನ ಇಷ್ಟು ವರ್ಷ ಇವರು ಏನು ಮಾಡಿದರು ಎಂದು ಕೇಳುತ್ತಾರೆ ಎಂದರು.

ಜನರನ್ನು ಗುಲಾಮರೆಂದು ತಿಳಿದುಕೊಂಡಿದರುವ ಕಾಂಗ್ರೆಸ್, ಮತ ಬ್ಯಾಂಕ್ ಎಂದು ತಿಳಿದುಕೊಂಡು ಏನು ಬೇಕಾದರೂ ಮಾತಾಡಿದರೆ ನಡೆಯುತ್ತದೆ ಎಂಬ ಅಮಲಿನಲ್ಲಿ ಇದ್ದಾರೆ. ಈ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ಸಿದ್ದರಾಮಯ್ಯ ಅವರು ನನ್ನನ್ನು ಗುರಿಯಾಗಿಸುವುದು ಸಹಜ ಎಂದರು.

Karnataka Polls: Cm Basavaraj Bommai Fierce Attack Against Congress Leaders

ಇನ್ನೂ ಎಸ್ಸಿ, ಎಸ್ಟಿ, ಒಬಿಸಿ ಮತಗಳು ಅವರ ಕೈ ತಪ್ಪಿ ಅವರ ಅಣೆಕಟ್ಟು ಒಡೆದಿದೆ ಎಂದ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಇದೀಗ ಡಿಕೆ ಶಿವಕುಮಾರ್ ಗೆ ಪೈಪೋಟಿ ಕೊಡುತ್ತಿದ್ದಾರೆ. ಆ ಮಟ್ಟಕ್ಕೆ ಸಿದ್ದರಾಮಯ್ಯ ಇಳಿದಿದ್ದಾರೆ. ಆಂತರಿಕವಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಜೊತೆ ಪೈಪೋಟಿಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ 8 ಸಾವಿರ ಕೋಟಿ ರೂ.ಗಳ ಭ್ರಷ್ಟಾಚಾರದ ಆರೋಪ ಇದೆ. ಅದಕ್ಕೆ ಉತ್ತರ ಕೊಡಬೇಕಾಗತ್ತೆ ಎಂದು ಹೀಗೆ ಮಾತನಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನವರು ಗ್ಯಾರೆಂಟಿಗಳು ಕೊಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ನಾವು ಅದನ್ನು ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ರಾಹುಲ್ ಗಾಂಧಿಗೆ ಇವರು ಹೇಳುವುದು ಅರ್ಥವಾಗುವುದಿಲ್ಲ. ಅವನು ಘೋಷಣೆ ಮಾಡುತ್ತಾನೆ.

ನಮ್ಮದು ಡಬಲ್ ಎಂಜಿನ್ ಸರ್ಕಾರ, ಕಲ್ಯಾಣ ಕರ್ನಾಟಕದ ಕಲ್ಯಾಣ ಮಾಡುತ್ತೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬಂದು ರಾಜ್ಯವನ್ನು ನಂಬರ್ ಒನ್ ರಾಜ್ಯ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಜನಪರ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅವರು ಎಲ್ಲಿ ಹೋಗಿದ್ದಾರೆ ಎಲ್ಲ ರಾಜ್ಯಗಳಲ್ಲಿ ‌ಬಿಜೆಪಿ ಗೆದ್ದಿದೆ. ಗುಜರಾತ್, ಉತ್ತರ ಪ್ರದೇಶ, ಉತ್ತರಾಖಾಂಡ್ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಹೀಗಾಗಿ ಮೋದಿಯವರ ವಿರುದ್ದ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+