‌ರಾಜ್ಯದಲ್ಲಿ ಸಜ್ಜಾದ ಚುನಾವಣಾ ಅಖಾಡ: ಮೋದಿ, ಯೋಗಿ, ಅಮಿತ್ ಶಾ, ಜೆಪಿ ನಡ್ಡಾ ಪ್ರಚಾರ: ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ

ಬೆಂಗಳೂರು,ಏಪ್ರಿಲ್26: ಕರ್ನಾಟಕ ಚುನಾವಣಾ ಕಣ ರಂಗೇರಿದೆ. ಅಧಿಕಾರದ ಗದ್ದುಗೆ ಏರಲು ಸಜ್ಜಾಗಿರುವ ರಾಜಕೀಯ ಪಕ್ಷಗಳು ಹಲವು ತಂತ್ರ ಹಾಗೂ ಪ್ರತಿತಂತ್ರಗಳನ್ನ ನಡೆಸುತ್ತಾ ಮತಭೇಟೆಗೆ ಮುಂದಾಗಿದ್ದಾರೆ.

ಆಡಳಿತರೂಢ ಬಿಜೆಪಿಗೆ ಹಲವು ಸಮೀಕ್ಷೆಗಳಿಂದ ಅಘಾತ ಉಂಟಾಗಿದ್ದು, ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ತಣತೊಟ್ಟು ಮುನ್ನುಗ್ಗಿದೆ. ಇನ್ನೂ ರಾಜ್ಯದಲ್ಲಿ ಬಿಜೆಪಿ ಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ಹಾಗಾಗಿ ಬಿಜೆಪಿ ಹೈಕಮಾಂಡ್​ ನಾಯಕರನ್ನು ಸಮರ್ಕವಾಗಿ ಬಳಸಿಕೊಳ್ಳುತ್ತಿದೆ.

Karnataka Polls: BJP National Leaders Eyes On Karnataka: Modi, Amith Shah And JP Nadda Tour In A Row

ಇನ್ನು ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಬಿಜೆಪಿ ಕೇಂದ್ರ ನಾಯಕರು ಸಹ ಈ ಬಾರಿ ಕರ್ನಾಟಕದಲ್ಲೂ ಅಧಿಕಾರ ಹಿಡಿಯಬೇಕೆಂದು ಭರ್ಜರಿ ಕಸರತ್ತು ನಡೆಸಿದ್ದಾರೆ. ಇದರಿಂದ ಗುಜರಾತ್ ಶಾಸಕರು ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಘಟಾನುಘಟಿ ನಾಯಕರ ಕರ್ನಾಟಕದತ್ತ ಬರುತ್ತಿದ್ದು, ಎಲ್ಲೆಲ್ಲಿ ಪ್ರಚಾರ ಮಾಡಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ ಕಾರ್ಯಕ್ರಮದ ವಿವರ ಇಲ್ಲಿದೆ

ಏಪ್ರಿಲ್​ 29 ರಂದು ಮೋದಿ ರೋಡ್ ಶೋ: ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ.

ಏಪ್ರಿಲ್​ 30: ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು ಜಿಲ್ಲೆಗಳಲ್ಲಿ ಮೋದಿ ರೋಡ್ ಶೋ ಹಾಗೂ ಬೃಹತ್‌ ಸಮಾವೇಶಕ್ಕೆ ವೇದಿಕೆ ಸಜ್ಜು

  • ಮೇ 2: ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ ಜಿಲ್ಲೆಯಲ್ಲಿ ಭರ್ಜರಿ ಚುನಾವಣಾ ಪ್ರಚಾರ
  • ಮೇ 3: ಮೂಡುಬಿದಿರೆ, ಕಾರವಾರ, ಕಿತ್ತೂರಿನಲ್ಲಿ ಚುನಾವಣಾ ಪ್ರಚಾರ
  • ಮೇ 6: ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಮೋದಿ ಬೃಹತ್‌ ಸಮಾವೇಶ
  • ಮೇ 7: ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರದಲ್ಲಿ ಭರ್ಜರಿ ಚುನಾವಣಾ ಪ್ರಚಾರ

ಅಮಿತ್ ಶಾ ರಾಜ್ಯ ಪ್ರವಾಸದ ವೇಳಾಪಟ್ಟಿ

ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನ ಮರಳಿ ಪಡೆಯಲು ರಾಜ್ಯ ನಾಯಕರಿಗೆ ತಂತ್ರಗಾರಿಕೆಯ ಪಾಠ ಮಾಡಿದ್ದು, ಅಮಿತ್‌ ಶಾ ಅವರು ಸಹ ಒಟ್ಟು 10 ದಿನಗಳ ಕಾಲ ಪ್ರಚಾರ ಮಾಡಲಿದ್ದು, 35 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರಕ್ಕೆ ಸಿದ್ದರಾಗಿದ್ದಾರೆ

  • ಏಪ್ರಿಲ್ 26: ಮಂಡ್ಯ ಮೈಸೂರು
  • ಏಪ್ರಿಲ್ 27: ವಿರಾಜಪೇಟೆ, ಬಂಟ್ವಾಳ, ಕುಂದಾಪುರ, ಮಂಗಳೂರು ನಗರ
  • ಏಪ್ರಿಲ್ 28: ನಂಜನಗೂಡು ಶಿರಹಟ್ಟಿ, ಹಗರಿಬೊಮ್ಮನಹಳ್ಳಿ, ದಾವಣಗೆರೆ ನಗರ
  • ಏಪ್ರಿಲ್ 29: ರಾಣೇಬೆನ್ನೂರು, ಬ್ಯಾಡಗಿ, ಹಳಿಯಾಳ, ಶಿವಮೊಗ್ಗ
  • ಮೇ 01: ಚನ್ನಗಿರಿ, ಚಿಕ್ಕಮಗಳೂರು, ಮಾಗಡಿ, ಬೆಂಗಳೂರು ನಗರ
  • ಮೇ 02: ಶಿಡ್ಲಘಟ್ಟ, ಮಾಲೂರು, ದೊಡ್ಡಬಳ್ಳಾಪುರ, ವರುಣಾ
  • ಮೇ 04: ಕಡೂರು, ಗುಬ್ಬಿ, ನಾಗಮಂಗಲ, ಮೈಸೂರು
  • ಮೇ 06: ಚಿಕ್ಕೋಡಿ, ಸದಲಗ, ಸೌದತ್ತಿ ಯಲ್ಲಮ್ಮ, ರಾಮದುರ್ಗ, ಬಳ್ಳಾರಿ
  • ಮೇ 07: ಬೀದರ್ ನಗರ, ಮಸ್ಕಿ, ಧಾರವಾಡ ನಗರ
Karnataka Polls: BJP National Leaders Eyes On Karnataka: Modi, Amith Shah And JP Nadda Tour In A Row

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರವಾಸದ ವೇಳಾಪಟ್ಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈಗಾಗಲೇ ಕರ್ನಾಟಕದಲ್ಲಿ ತಮ್ಮ ಪ್ರಚಾರ ಆರಂಭಿಸಿದ್ದು, ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಪರಿಣಾಮಕಾರಿಯಾಗಿ ಪ್ರಚಾರಕ್ಕಿಳಿಯಲಿದ್ದಾರೆ. ಏಪ್ರಿಲ್ 26 ಮೇ 7ರ ವರೆಗೆ ಒಟ್ಟು 10 ದಿನಗಳಲ್ಲಿ 32 ಕ್ಷೇತ್ರಗಳಲ್ಲಿ ಪ್ರಚಾರವನ್ನ ಮಾಡಲಿದ್ದಾರೆ.

  • ಏಪ್ರಿಲ್ 26: ಶಿರಸಿ, ಸೊರಬ, ಮೂಡಿಗೆರೆ, ಹಾಸನ
  • ಏಪ್ರಿಲ್ 27: ಕೊಪ್ಪಳ, ಸುರಪುರ, ಸೇಡಂ, ಬೀದರ್ ನಗರ
  • ಏಪ್ರಿಲ್ 29: ಮುದ್ದೇಬಿಹಾಳ, ಕಲಬುರಗಿ, ರೋಣ, ಹರಪನಹಳ್ಳಿ
  • ಮೇ 01: ಸುಳ್ಯಾ, ಕಾಪು, ತೀರ್ಥಹಳ್ಳಿ
  • ಮೇ 03: ಕೆಜಿಎಫ್, ಕೊರಟಗೆರೆ, ಹೊಸದುರ್ಗ, ಹೊನ್ನಾಳಿ
  • ಮೇ 05: ಚಾಮುಂಡೇಶ್ವರಿ, ಎಚ್​ಡಿ ಕೋಟೆ, ರಾಮನಗರ
  • ಮೇ 06: ಸಿರಗುಪ್ಪ, ರಾಯಚೂರು ನಗರ, ರಾಯಚೂರು ಗ್ರಾಮಾಂತರ
  • ಮೇ 7: ಮಳವಳ್ಳಿ, ಮೇಲುಕೋಟೆ, ಮಡಿಕೇರಿವ

ಸಿಎಂ ಯೋಗಿ ಆದಿತ್ಯನಾಥ್ ಎಲ್ಲೆಲ್ಲಿ ಪ್ರಚಾರ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಹ ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದಾರೆ. ಒಟ್ಟು ಮೂರು ದಿನ ರಾಜ್ಯಲ್ಲಿ ಪ್ರವಾಸ ಮಾಡಲಿದ್ದು, 12 ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ.

  • ಏಪ್ರಿಲ್ 26: ದಾವಣಗೆರೆ, ಇಂಡಿ, ಬಸವನಬಾಗೇವಾಡಿ
  • ಏಪ್ರಿಲ್ 30: ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ
  • ಮೇ 03: ಗಂಗಾವತಿ, ಜೇವರ್ಗಿ, ಶಾಹಪೂರ, ಭಟ್ಕಳ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+