Narendra Modi: ಕರ್ನಾಟಕದಲ್ಲಿ ಬಿಜೆಪಿಗೆ ಮೋದಿಯೇ ಆದಿ-ಅಂತ್ಯ! ಚುನಾವಣೆಗೆ ಟ್ವಿಸ್ಟ್ ಕೊಡಲು 'ನಮೋ' ಅಸ್ತ್ರ!
ಬೆಂಗಳೂರು,ಏಪ್ರಿಲ್27: ಕರ್ನಾಟಕ ವಿಧಾನಸಭಾ ಚುನಾವಣೆ ತೀವ್ರ ಪೈಪೋಟಿಯ ಕಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಳಿಯಲ್ಲಿಯೇ ಇಲ್ಲಿ ಅಧಿಕಾರ ಪಡೆಯಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದಂತಿದೆ. ಮೇ 10ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 15-20 ಸಮಾವೇಶ ಹಾಗೂ ರ್‍ಯಾಲಿ
ಗೆ ಬಿಜೆಪಿ ರಾಜ್ಯ ಘಟಕ ಸಜ್ಜು ನಡೆಸಿದೆ.
ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಪ್ರತಿಷ್ಠೆ ಹಾಗೂ ಭವಿಷ್ಯದ ಪ್ರಶ್ನೆಯಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಕೊನೆಯ ಹಂತದ ಪ್ರಚಾರದಲ್ಲಿ ಅಲೆಯನ್ನು ಸಂಪೂರ್ಣವಾಗಿ ತಮ್ಮ ಪರವಾಗಿ ಮಾಡಿಕೊಳ್ಳುವ ನಿರೀಕ್ಷೆಯಲ್ಲಿವೆ.

ಈ ಬಾರಿ ಕಾಂಗ್ರೆಸ್ ಗೆಲ್ಲುವ ಭರವಸೆಯಲ್ಲಿದ್ದರೆ, ಬಿಜೆಪಿ ಈಗಾಗಲೇ ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರವನ್ನು ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಆಧರಿಸಿದೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಿರ್ಧರಿಸಿದೆ.
ಬಿಜೆಪಿ ಸರಳ ಬಹುಮತಕ್ಕಾಗಿ ಈಗಾಗಲೇ ಹಲವು ತಂತ್ರಗಾರಿಕೆಯನ್ನ ಆರಂಭಿಸಿದ್ದು, 113 ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಇನ್ನೂ ರಾಜ್ಯದಲ್ಲಿ ಆಡಳಿತರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ಪ್ರಧಾನಿ ಮೋದಿ ಅವರ ವರ್ಚಸ್ಸಿನ ಮೂಲಕ ಸರ್ಕಾರವನ್ನ ರಚಿಸಿಕೊಳ್ಳಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಬಿಜೆಪಿಯು ಆಡಳಿತ ನಡೆಸುತ್ತಿರುವ ದಕ್ಷಿಣದಲ್ಲಿ ಏಕೈಕ ರಾಜ್ಯವನ್ನು ಉಳಿಸಿಕೊಳ್ಳ ಬೇಕಾದರೆ, ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲು ಮೋದಿಯವರ ವರ್ಚಸ್ಸು, ಉಪಸ್ಥಿತಿ, ಜನಪ್ರಿಯತೆ ಮತ್ತು ಮನವೊಲಿಸುವ ಕೌಶಲ್ಯಗಳು ಬೇಕಾಗುತ್ತವೆ ಎಂದು ಸೋಫಾಲೊಜಿಸ್ಟ್ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.

ಅದಕ್ಕಾಗಿಯೇ ಮೋದಿಯವರ ಕೊನೆಯ ಹಂತದ ಪ್ರಚಾರ ಬಿಜೆಪಿಗೆ ಮಹತ್ವದ್ದಾಗಿದೆ ಎಂದು ಶಾಸ್ತ್ರಿ ಅವರು ಹೇಳಿದ್ದು, ಇದೀಗ ಬಹಳ ಸಮಯದಿಂದ ಬಿಜೆಪಿಯು ರಾಜ್ಯ ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿಯ ಮೇಲೆ ಅವಲಂಬಿತವಾಗಿದೆ ಎನ್ನಲಾಗಿದೆ.
ಮೋದಿ ಅವರು ಆರು ದಿನಗಳಲ್ಲಿ ಸುಮಾರು 15 ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದ್ದು, ಏಪ್ರಿಲ್ 28 ಮತ್ತು 29 ಮತ್ತು ಮೇ 3, 4, 6 ಮತ್ತು 7 ರಂದು ಪ್ರಚಾರ ನಡೆಸಲಿದ್ದಾರೆ. 12 ರಿಂದ 15 ರ್ಯಾಲಿಗಳು, ಸಾರ್ವಜನಿಕ ಸಭೆಗಳನ್ನ ನಡೆಸಲಿದ್ದಾರೆ.
ಇನ್ನೂ ಮೋದಿ ಅವರು ಬೆಳಗಾವಿಯಿಂದ ಪ್ರಚಾರ ಆರಂಭಿಸಲಿದ್ದಾರೆ. ಚಿಕ್ಕೋಡಿ, ಕಿತ್ತೂರು ಮತ್ತು ಬೆಳಗಾವಿಯ ಕುಡಚಿ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ, ಇದು ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆಯಾಗಿದೆ. ಉತ್ತರ ಕನ್ನಡಕ್ಕೂ ಭೇಟಿ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪ್ರಧಾನಿ ಆಗಮನದಿಂದ ಬಿಜೆಪಿಗೆ ಅನುಕೂಲವಾಗುವ ವಾತಾವರಣ ನಿರ್ಮಾಣವಾಗಿದ್ದು, ಮೋದಿ ಕಾರ್ಯಕ್ರಮದ ಬಗ್ಗೆ ಬಿಜೆಪಿ ಉತ್ಸುಕವಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿದರು. ಇನ್ನೂ ಈ ಹಿಂದೆ 2018 ರಲ್ಲಿ ಮೋದಿ ಅವರು ಕೊನೆಯ ಹಂತದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದರು, ಆದರೆ ಅವರು ಬಿಜೆಪಿಯ ಭವಿಷ್ಯವನ್ನು ಗಮನಾರ್ಹವಾಗಿ ಸುಧಾರಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications