ಕರ್ನಾಟಕದ ರಾಜಕೀಯ ಕ್ಷಿಪ್ರ ಕ್ರಾಂತಿ ಹುಟ್ಟುಹಾಕಿರುವ 5 ಪ್ರಶ್ನೆಗಳು

ಕರ್ನಾಟಕದ ರಾಜಕೀಯ ಸನ್ನಿವೇಶದಲ್ಲಿ ಏಕಾಏಕಿ ನಡೆದ ಬೆಳವಣಿಗೆ 5 ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗಿನ ಅತೃಪ್ತ ಶಾಸಕರು ಶನಿವಾರವೇ ರಾಜೀನಾಮೆಗೆ ಮುಂದಾಗಿದ್ದರ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆ ಮೂಡುತ್ತದೆ. ಆಪರೇಷನ್ ಕಮಲದ ವಿಚಾರವೇ ಬೇರೆ. ಆದರೆ ರಾಮಲಿಂಗಾ ರೆಡ್ಡಿಯಂಥವರು ಸಹ ರಾಜೀನಾಮೆ ನೀಡಲು ಮುಂದಾಗಿದ್ದು ಏಕೆ? ಈ ಬಗೆಗಿನ ಪ್ರಶ್ನೆಗಳು ಹೀಗಿವೆ.

* ಶನಿವಾರವಾದ್ದರಿಂದ ರಾಜೀನಾಮೆಯನ್ನು ಅಂಗೀಕಾರ ಮಾಡಲು ಹೇಗಿದ್ದರೂ ಸ್ಪೀಕರ್ ತಡ ಮಾಡುತ್ತಾರೆ ಎಂಬ ಬಗ್ಗೆ ಮುಂಚೆಯೇ ಲೆಕ್ಕಾಚಾರ ಇತ್ತೆ?

* ಶನಿವಾರದಿಂದ ಕನಿಷ್ಠ ಸೋಮವಾರದ ತನಕ ಸಮಯ ಸಿಗುತ್ತದೆ. ಅಷ್ಟರೊಳಗೆ ಹೈ ಕಮಾಂಡ್ ನ ಜತೆಗೆ ಚೌಕಾಶಿ ಮಾಡಬಹುದು ಎಂಬ ಅಂದಾಜು ಇತ್ತೆ?

Karnataka political crisis raises 5 question

* ಆಪರೇಷನ್ ಕಮಲದ ಆತಂಕ ಇರುವಾಗಲೇ ರಾಜೀನಾಮೆ ನೀಡಿದರೆ ಪರಿಸ್ಥಿತಿ ಗಂಭೀರವಾಗುತ್ತದೆ. ಸಂಧಾನಕ್ಕೆ ಸಲೀಸಾಗುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೇ?

* ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಇವರೆಲ್ಲರಿಗಿಂತ ರಾಮಲಿಂಗಾ ರೆಡ್ಡಿ ಅವರ ಕೈಲಿ ಸರಕಾರ ಉಳಿಸುವ ಮಂತ್ರ ದಂಡ ಇದೆಯಾ?

* ಜೆಡಿಎಸ್- ಕಾಂಗ್ರೆಸ್ ಎರಡೂ ಪಕ್ಷಗಳ ಶಾಸಕರು ಏಕ ಕಾಲಕ್ಕೆ ರಾಜೀನಾಮೆ ಸಲ್ಲಿಸುವುದಕ್ಕೆ ಸಮನ್ವಯಕಾರರಾಗಿ ಕೆಲಸ ಮಾಡಿರುವವರು ಯಾರು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+