ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಕನ್ನಡಿಗರ ನೆರವಿಗೆ ಧಾವಿಸಿದ ಪೊಲೀಸರು

By Mahesh
|
Google Oneindia Kannada News

ವಾಸ್ಕೋ, ಜು.16: ಕಳೆದೆರಡು ದಿನಗಳಿಂದ ಸುರಿವ ಮಳೆಯಲ್ಲಿ ನೆಲೆ ಇಲ್ಲದೆ ಬೈನಾ ಕಡಲ ತಟದಲ್ಲಿ ನಿರ್ಗತಿಕರಾಗಿರುವ ಕನ್ನಡಿಗರ ಸ್ಥಿತಿ ಗತಿ ವಿಚಾರಣೆ ಕರ್ನಾಟಕ ಪೊಲೀಸರ ತಂಡವೊಂದನ್ನು ಕಳಿಸಲಾಗಿದೆ ಎಂದು ಕರ್ನಾಟಕದ ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

ಸುರಿವ ಮಳೆ, ಕೊರೆವ ಚಳಿಯಲ್ಲಿ ನಿರ್ಗತಿಕ ಕನ್ನಡಿಗರ ಸ್ಥಿತಿ ಗತಿ ಬಗ್ಗೆ ಸದನದಲ್ಲಿ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಜೆ ಜಾರ್ಜ್, 'ಕರ್ನಾಟಕ ತಂಡ ಈಗಾಗಲೆ ವಾಸ್ಕೋ ಡಿವೈಎಸ್ಪಿ ಲಾರೆನ್ಸ್ ಡಿಸೋಜ ಹಾಗೂ ಪಿಐ ಸಾಗರ್ ಎಕೋಸ್ಕರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಅಲ್ಲಿನ ಕನ್ನಡಿಗರಿಗೆ ನೆಲೆ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಕರ್ನಾಟಕ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೂಚನೆ ಮೇರೆಗೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕಾರವಾರದ ಡಿಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಅವರ ನೇತೃತ್ವದ ತಂಡ ನಿರಾಶ್ರಿತರ ದಯನೀಯ ಸ್ಥಿತಿ ಬಗ್ಗೆ ವಿಸ್ತೃತ ವರದಿ ತಯಾರಿಸಿದ್ದು, ಗೃಹ ಇಲಾಖೆಗೆ ಸಲ್ಲಿಸಲಿದ್ದಾರೆ.

Karnataka sends police team to inquire about demolition

ಡಾ.ರಾಮ ಎಲ್. ಅರಸಿದ್ದಿ, ಸಿಪಿಐ ಮಂಜುನಾಥ ಕವರಿ, ಪಿಎಸ್ಐ ಎಸ್.ಎಂ. ರಾಣೆ ಹಾಗೂ ಐವರು ಸಿಬ್ಬಂದಿ ಇದ್ದ ತಂಡ ಕಳೆದೆರಡು ದಿನಗಳಿಂದ ನಿರಾಶ್ರಿತರ ಕಷ್ಟ ಸುಖ ಗಳನ್ನು ಆಲಿಸಿ ವರದಿ ತಯಾರಿಸಿದ್ದಾರೆ.

ಬೈನಾದ ಕಡಲ ತೀರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಕಾರಣ ನೀಡಿ 65 ಮನೆಗಳನ್ನು ಏಕಾಏಕಿ ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ. ಇನ್ನು 10 ಮನೆಗಳನ್ನು ಭಾಗಶಃ ಕೆಡವಲಾಗಿದೆ. ಯಾವುದೇ ಪುನರ್ವಸತಿ ಒದಗಿಸಿಲ್ಲ. ಸಿಆರ್ಝಡ್ ಹಾಗೂ ಸಮುದ್ರ ಕೊರೆತದ ಕಾರಣ ನೀಡಿ ಈ ಮನೆಗಳನ್ನು ತೆರವುಗೊಳಿಸಿದೆ. ಈ ಬಗ್ಗೆ ವರದಿಯನ್ನು ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಸಲ್ಲಿಸುತ್ತಿದ್ದೇವೆ ಎಂದು ಡಿಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದ್ದಾರೆ.

ಈ ನಡುವೆ ನಿರ್ಗತಿಕರಿಗೆ ಕಾಯಂ ಪುನರ್ವಸತಿಗಾಗಿ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಬೈನಾದಲ್ಲಿ ಪ್ರತಿಭಟನೆ ನಡೆಸಿದೆ. ಗೋವಾ ಸರ್ಕಾರ ಕನ್ನಡಿಗರ ಮೇಲಿನ ದೌರ್ಜನ್ಯ ಮುಂದುವರೆಸಿದರೆ ಬೆಳಗಾವಿ ಜಿಲ್ಲೆಯಿಂದ ಗೋವಾಕ್ಕೆ ಹೋಗುವ ಎಲ್ಲ ರಸ್ತೆ ಬಂದ್ ಮಾಡಲಾಗುವುದು ಎಂದು ಮಂಗಳವಾರ ಕನ್ನಡ ಸಂಘಟನೆಗಳ ಮುಖಂಡರು ಗೋವಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

English summary
A police team from Karnataka visited the Vasco police station on Tuesday afternoon to inquire about the demolition of hutments at Baina beach. According to police sources, "An MLA raised questions in the Karnataka assembly as to how the huts were demolished during the monsoon, which led to a team being sent here."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X