IPS Transfer: 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಜುಲೈ 15: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಬರೋಬ್ಬರಿ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಡಿಐಜಿ ಎಂ ಎನ್ ಅನುಚೇತ್ ದಕ್ಷಿಣ ಕನ್ನಡದ ಕಾನೂನು ಸುವ್ಯವಸ್ಥೆ ಡಿಸಿಪಿ ಜಿತೇಂದ್ರ ಕುಮಾರ್ ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎನ್ನುವ ವಿಪಕ್ಷಗಳ ಆರೋಪ ಹಾಗೂ ಅಧಿಕಾರಿಗಳ ಅಕ್ರಮದ ಬಗ್ಗೆ ವರದಿ ಹೆಚ್ಚಿದ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿಗಳ ವರ್ಗಾವಣೆ
* ಕೇಂದ್ರ ವಿಭಾಗ ಡಿಸಿಪಿ- ಅಕ್ಷಯ್ ಮಚೀಂದ್ರ.
*ಜಂಟಿ ಪೊಲೀಸ್ ಆಯುಕ್ತ ಅಪರಾಧ - ಅಜಯ್ ಹಿಲೋರಿ
* ವೈಟ್ ಫೀಲ್ಡ್ ಡಿಸಿಪಿ - ಪರಶುರಾಮ್
* ಜಂಟಿ ಪೊಲೀಸ್ ಆಯುಕ್ತ ಸಂಚಾರ - ಕಾರ್ತಿಕ್ ರೆಡ್ಡಿ
* ಬೆಂಗಳೂರು ಪಶ್ಚಿಮ ವಿಭಾಗ ಸಂಚಾರ - ಅನುಪ್ ಶೆಟ್ಟಿ
* ಲೋಕಾಯುಕ್ತ. ಎಸ್ಪಿ ಬೆಂಗಳೂರು - ಶಿವಪ್ರಕಾಶ್ ದೇವರಾಜು.
* ಡಿಸಿಪಿ ಉತ್ತರ ಸಂಚಾರ ವಿಭಾಗ - ಜಯಪ್ರಕಾಶ್
* ಡಿಸಿಪಿ ಎಲೆಕ್ಟ್ರಾನಿಕ್ ಸಿಟಿ ವಿಭಾಗ- ಎಂ ನಾರಾಯಣ್
* ಆಗ್ನೇಯ ವಿಭಾಗ ಡಿಸಿಪಿ - ಅನಿತಾ ಬಿ ಹದ್ದನವರ್
* ಸಿಐಡಿ ಎಸ್ಪಿ - ಸೈದಲು ಅಡವಾತ್
* ಡಿಸಿಪಿ ಉತ್ತರ ವಿಭಾಗ - ಬಾಬಾ ಸಾಬ್ ನ್ಯಾಮಗೌಡ
* ವಾಯುವ್ಯ ವಿಭಾಗ ಡಿಸಿಪಿ - ನಾಗೇಶ್
* ಸಿಸಿಬಿ ಡಿಸಿಪಿ - ಶ್ರೀಹರಿ ಬಾಬು.
*ಡಿಸಿಪಿ ಸಿಎಆರ್ ಹೆಡ್ ಕ್ವಾರ್ಟರ್ಸ್ -ಸೌಮ್ಯಲತಾ
* ಎಂ ಎನ್ ಅನುಚ್ಛೇತ್- ಡಿಐಜಿ ನೇಮಕಾತಿ ವಿಭಾಗ
* ವರ್ತಿಕಾ ಕಟೀಯಾರ್ -ಡಿಐಜಿ ಬಳ್ಳಾರಿ ವಲಯ
* ಶಾಂತರಾಜು - ಎಸ್ಪಿ, ಗುಪ್ತಚರ ಇಲಾಖೆ
* ಸಿರಿಗೌರಿ - ಎಸ್ಪಿ ರಾಜ್ಯ ಅಪರಾಧ ದಾಖಲೆ ವಿಭಾಗ.
* ಸುಮನ್ ಡಿ ಪೆನ್ನೆಕರ್ - ಡಿಸಿಪಿ ಇಂಟಲಿಜೆನ್ಸ್
* ಸಿಮಿ ಮರೀಯ ಜಾರ್ಜ್ - ಡಿಸಿಪಿ ದಕ್ಷಿಣ ವಿಭಾಗ ಸಂಚಾರ.
* ಅಮರ್ ನಾಥ್ ವೈ - ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ ಕೆಎಸ್ ಆರ್ ಪಿ.
* ಯಶೋಧ ವಟ್ಟಗೋಡಿ - ಎಸ್ಪಿ ಹಾವೇರಿ.
* ಗುಂಜನ್ ಅರ್ಯಾ - ಎಸ್ಪಿ ಧಾರವಾಡ.
* ಗೋಪಾಲ್ ಎಂ - ಜಂಟಿ ನಿರ್ದೇಶಕ ಎಫ್ ಎಸ್ ಎಲ್ ಬೆಂಗಳೂರು.
* ಸಿದ್ದಾರ್ಥ ಗೋಯಲ್ - ಎಸ್ಪಿ, ಬಾಗಲಕೋಟೆ
* ರೋಹನ್ ಜಗದೀಶ್ - ಎಸ್ಪಿ, ಗದಗ್
* ಶಿವಾಂಶು ರಜಪೂತ - ಎಸ್ಪಿ ,ಕೆಜಿಎಫ್
* ಜಿತೇಂದ್ರ ಕುಮಾರ್ - ಡಿಸಿಪಿ ಕಾನೂನು ಸುವ್ಯವಸ್ಥೆ - ಮಂಗಳೂರು ನಗರ.
* ದೀಪನ್ ಎಮ್ ಎನ್ - ಎಸ್ಪಿ , ಉತ್ತರ ಕನ್ನಡ
* ಜಾನವಿ ಎಸ್ - ಎಸ್ಪಿ , ವಿಜಯನಗರ












Click it and Unblock the Notifications