ಕರಾವಳಿ ಜನರಿಗೆ ಭರ್ಜರಿ ಬಂಪರ್, 180 ಕೋಟಿ ರೂಪಾಯಿ ವೆಚ್ಚದಲ್ಲಿ ವಾಟರ್ ಮೆಟ್ರೋ! Water Metro
ಕರಾವಳಿ ಜನರಿಗೆ ಭರ್ಜರಿ ಸುದ್ದಿ ಸಿಕ್ಕಿದೆ, ಇಷ್ಟು ದಿನಗಳ ಕಾಲ ರಸ್ತೆ ಮತ್ತು ವಾಯು ಪ್ರಯಾಣದ ಜೊತೆಗೆ ರೈಲು ಮಾರ್ಗದಲ್ಲಿ ಉಡುಗೊರೆ ಪಡೆಯುತ್ತಿದ್ದ ಕರಾವಳಿ ಜನರಿಗೆ ಇದೀಗ ವಾಟರ್ ಮೆಟ್ರೋ ಭಾಗ್ಯ ಕೂಡ ಸಿಗುವುದು ಪಕ್ಕಾ ಆಗಿದೆ. ಕರ್ನಾಟಕ ಸಾಗರ ಮಂಡಳಿ ಅಂದ್ರೆ ಕೆಎಂಬಿ ಮಂಗಳೂರನ್ನು ಉಡುಪಿ ಜಿಲ್ಲೆ ಮರವಂತೆ ಜೊತೆ ಸಂಪರ್ಕಿಸಲು ಮಹತ್ವದ ಯೋಜನೆಗೆ ಮುಂದಾಗಿದೆ. ಈ ಮೂಲಕ ಕರಾವಳಿ ಜನರಿಗೆ ಇನ್ನು ವಾಟರ್ ಮೆಟ್ರೋ ಪ್ರಯಾಣ ಸೇವೆ ಸಿಗುವುದು ಪಕ್ಕಾ ಆಗಿದೆ. ಹಲವಾರು ವರ್ಷಗಳಿಂದ ಇದ್ದ ಬೇಡಿಕೆ ಇದೀಗ ಈಡೇರುತ್ತಿದ್ದು, ಯೋಜನೆ ಇಡೀ ದೇಶದ ಗಮನ ಸೆಳೆಯಲಿದೆ.
ಸುಮಾರು 110 ಕಿಲೋ ಮೀಟರ್ ಉದ್ದದ, ಮಂಗಳೂರು ಟು ಕುಂದಾಪುರ ತಾಲೂಕಿನ ಮರವಂತೆಯ ತನಕ ಪ್ರಸ್ತಾವಿತ ಫೆರ್ರಿ ಕಾರಿಡಾರ್ ನಿರ್ಮಾಣಕ್ಕೆ ಸಕಲ ಸಿದ್ಧತೆ ನಡೆದಿದೆ. ಇನ್ನು ತೀವ್ರ ಜನದಟ್ಟಣೆ ಹಿನ್ನೆಲೆ NH-66 ಗೆ ಪರ್ಯಾಯ ಸಾರಿಗೆ ಮಾರ್ಗ ಸಿಗಲಿದ್ದು, ಜನರ ಕಷ್ಟಕ್ಕೆ ಈ ಮೂಲಕ ಮುಕ್ತಿಯು ಕೂಡ ಸಿಗಲಿದೆ. ಈ ಯೋಜನೆ ಕಾರ್ಯಗತವಾದರೆ ಮತ್ತೊಮ್ಮೆ ರಾಜ್ಯದ ಸಾರಿಗೆ ಅಭಿವೃದ್ಧಿಯ ವಿಚಾರದಲ್ಲಿ ಹೊಸ ಮೈಲಿಗಲ್ಲು ಆಗಲಿದೆ. ಈ ಪ್ರಸ್ತಾವನೆ ಅಡಿ ಹಳೆಯ ಮಂಗಳೂರು ಬಂದರು, ಹೆಜಮಾಡಿ, ಮಲ್ಪೆ, ಕೋಟ ಮತ್ತು ಮರವಂತೆಯಲ್ಲಿ ಐದು ಮಧ್ಯಂತರ ನಿಲ್ದಾಣ ಕೂಡ ಈಗ ಗುರುತಿಸಲಾಗಿದೆ.

ವಿಶೇಷ ಜಲ ಮಾರ್ಗಕ್ಕೆ ಕರಾವಳಿ ಸಿದ್ಧ
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯೋಜನೆ ಜಾರಿಗೆ ಸಿದ್ಧತೆ ನಡೆಸಲಾಗಿದ್ದು, ಆರಂಭದಲ್ಲಿ ಈ ವಿಶೇಷ ಯೋಜನೆಗೆ ಸುಮಾರು 37.8 ಕೋಟಿ ರೂಪಾಯಿ ವೆಚ್ಚವಾಗಲಿದೆ. ಆಯ್ಕೆ ಆಗುವ ನಿರ್ವಾಹಕರಿಗೆ 20 ವರ್ಷಗಳ ಅವಧಿಗೆ ರಿಯಾಯಿತಿ ಸಿಗಲಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆಯೋಜನೆ ಮಾಡಿದ್ದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಕೆಎಂಬಿಯ ಅಧಿಕಾರಿಗಳು ಈ ದೋಣಿ ಸೇವೆ ಮತ್ತು ಇತರ ಕಡಲ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಪೂರ್ಣ ವಿವರ ನೀಡಿದರು.
ವಾಟರ್ ಮೆಟ್ರೋ ಬರೋದು ಗ್ಯಾರಂಟಿ
ಜೊತೆಗೆ ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 180 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಜಲ ಮೆಟ್ರೋ ಯೋಜನೆಗೆ ಸಿದ್ಧತೆ ನಡೆಸಲಾಗಿದೆ. ಮಹತ್ವದ ಯೋಜನೆ ಮಂಗಳೂರು ಮಹಾನಗರ ಪಾಲಿಕೆಯ ಅಡಿಯಲ್ಲಿರುವ ಪ್ರಮುಖ ಜಲಮಾರ್ಗಗಳನ್ನು ಒಳಗೊಳ್ಳಲಿದ್ದು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಮಳವೂರು ಸೇತುವೆಯನ್ನ ಗುರುಪುರ & ನೇತ್ರಾವತಿ ನದಿಗಳು ಮತ್ತು ಹಳೆಯ ಮಂಗಳೂರು ಬಂದರಿನ ಮೂಲಕ ಜಪ್ಪಿನಮೊಗರು ಸೇತುವೆಯೊಂದಿಗೆ ಸಂಪರ್ಕಿಸುತ್ತದೆ. ಈ ಮೂಲಕ ಬಸ್ ಸೇವೆ ಜೊತೆಗೆ ಜಲಮಾರ್ಗದಲ್ಲೂ ಜನರಿಗೆ ಸಾರಿಗೆ ಸೇವೆ ಹೆಚ್ಚು ಸಿಗುವಂತೆ ಮಾಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.












Click it and Unblock the Notifications