ಕರ್ನಾಟಕದಲ್ಲಿ ಶಾಂತಿ ಇರುವುದಕ್ಕೇ ಕಂಪನಿಗಳಿಂದ ₹10 ಲಕ್ಷ ಕೋಟಿ ಹೂಡಿಕೆ: ಗೃಹ ಸಚಿವ

ರಾಜ್ಯ ಅಭಿವೃದ್ಧಿ ಆಗಬೇಕಾದರೆ ಸಮಾಜ ಶಾಂತಿಯಿಂದ ಇರಬೇಕು. ನಾಗರಿಕ ಸಮಾಜ ಶಾಂತಿಯಿಂದ ಇರಬೇಕು. ಇತ್ತೀಚೆಗೆ ನಾವು ಗಮನಿಸಿದಾಗ, ಗ್ಲೋಬಲ್ ಇನ್‌ವೆಸ್ಟರ್ಸ್ ಮೀಟ್‌ನಲ್ಲಿ ಕರ್ನಾಟಕದಲ್ಲಿ 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡುತ್ತೇವೆ ಎಂದು ಪ್ರಪಂಚದಾದ್ಯಂತ ನೂರಾರು ಕಂಪನಿಗಳು ಬಂದಿದ್ದವು. ಕರ್ನಾಟಕದ‌ ಮಟ್ಟಿಗೆ 10 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಬರುತ್ತದೆ ಎಂದರೆ ರಾಜ್ಯದಲ್ಲಿ ಶಾಂತಿ ಇದೆ, ನೆಮ್ಮದಿ, ತೃಪ್ತಿ ಇದೆ ಎಂದರ್ಥ. ಇಲ್ಲಿ ಯಾವುದೇ ತೊಂದರೆಯಾಗಲ್ಲ ಎಂಬುದನ್ನು ಗಮನಿಸಿಯೇ ಬಂಡವಾಳ ಹೂಡುತ್ತಾರೆ.‌ ಇದಕ್ಕೆ ನಮ್ಮ ಪೊಲೀಸ್ ಇಲಾಖೆಯೂ ಕಾರಣ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ರಾಜ್ಯ ಗೃಹ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನ ಹಾಗೂ ಕೇಂದ್ರ ಗೃಹ ಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಲವು ಒಡಂಬಡಿಕೆಗಳಿಗೆ ಸಹಿ ಹಾಕಿದರು. ಅದಕ್ಕೆ ಮೂಲ ಕಾರಣ, ಯಾವುದೇ ಒಂದು ಕಂಪನಿ ರಾಜ್ಯದಲ್ಲಿ ಅಥವಾ ರಾಷ್ಟ್ರದಲ್ಲಿ ಬಂಡವಾಳ ಹೂಡಬೇಕಾದರೆ ಆ ರಾಜ್ಯದ ಸಮಾಜವನ್ನು ನೋಡುತ್ತಾರೆ. ರಾಜಕೀಯ ಇಚ್ಛಾಶಕ್ತಿ, ಆ ಸಮಾಜದಲ್ಲಿ ಶಾಂತಿ ಇದೆಯಾ? ಎಂಬುದನ್ನು ಕಂಪನಿಗಳು ನೋಡುತ್ತವೆ ಎಂದಿದ್ದಾರೆ.

karnataka-peace-attracted-10-lakh-crore-investments-home-minister-g-parameshwara

ರಾಜ್ಯವನ್ನು ಶಾಂತಿಯಿಂದ ಇಡುವುದರಲ್ಲಿ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಶೇಷವಾಗಿ ಜನಸಮುದಾಯದ ನಿರೀಕ್ಷೆಯಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ. ಕರ್ನಾಟಕವನ್ನು ಶಾಂತಿ, ನೆಮ್ಮದಿಯಿಂದ ಇಡಲು ಕಾನ್‌ಸ್ಟೇಬಲ್‌ನಿಂದ ಡಿಜಿಪಿವರೆಗೆ ಶ್ರಮ ಹಾಕುತ್ತಿದ್ದಾರೆ. ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಪ್ರಶಸ್ತಿ ಎಂಬುದು‌ ಬರೀ ಪದಕವಲ್ಲ. ಅದರ ಹಿಂದೆ ಶ್ರಮ, ಪ್ರಾಮಾಣಿಕತೆ, ಸಮಾಜದ ಸೇವೆ ಮತ್ತು ಮುಂದಿನ ಪೀಳಿಗೆಗೆ ಆದರ್ಶವಿದೆ. ಕರ್ನಾಟಕ ಪೊಲೀಸ್ ಇಡೀ ರಾಷ್ಟ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದೆ. ಪೊಲೀಸ್ ಇಲಾಖೆಯನ್ನು ನಡೆಸುವುದಕ್ಕೆ ನನಗೆ ಬಹಳ ಹೆಮ್ಮೆಯಿದೆ.
ಪೊಲೀಸ್ ಕಾನ್‌ಸ್ಟೇಬಲ್‌ಗೂ ಪ್ರಶಸ್ತಿ ಸಿಕ್ಕಿದೆ. ರಾಜ್ಯ ಪೊಲೀಸ್ ಇಲಾಖೆ ಆಧುನೀಕರಣಗೊಳ್ಳುತ್ತಿದೆ.‌ ಆಧುನೀಕರಣ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದಿದ್ದಾರೆ.

45ಕ್ಕೂ ಹೆಚ್ಚು ಸೈಬರ್‌ ಪೊಲೀಸ್ ಠಾಣೆ

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸೈಬರ್ ಅಪರಾಧಗಳು ಬಹಳ ಹೆಚ್ಚಾಗುತ್ತಿವೆ. ಸೈಬರ್ ಅಪರಾಧಗಳನ್ನು ಮಟ್ಟ ಹಾಕದೇ ಹೋದರೆ ಜನರಿಗೆ ಕೋಟ್ಯಂತರ ರೂ.‌ ನಷ್ಟ ಉಂಟಾಗುತ್ತದೆ. ಅದಕ್ಕಾಗಿಯೇ ದೇಶದಲ್ಲೆ ಮೊದಲ ಬಾರಿಗೆ ರಾಜ್ಯದಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಯಿತು. ಇಂದು ಸೈಬರ್ ಅಪರಾಧಗಳಿಗಾಗಿಯೇ 45ಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಯಾವುದೇ ಪೊಲೀಸ್ ಠಾಣೆಯಲ್ಲಿಯೂ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು ಎಂಬ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಮಾಜವನ್ನು ಹಾಳು ಮಾಡುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಧಾರ್ಮಿಕವಾಗಿ, ರಾಜಕೀಯವಾಗಿ ಬೇರೆ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕೆಡಿಸುವಂತದ್ದನ್ನು ಗಮನಿಸುತ್ತಿದ್ದೇವೆ. ಕರ್ನಾಟಕ ಪೊಲೀಸ್ ಪ್ರತಿಯೊಂದು ಸಂದರ್ಭದಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ತನಿಖೆ, ಅಪರಾಧ, ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ರಾಜ್ಯ ಪೊಲೀಸ್ ಯಶಸ್ವಿಯಾಗಿದೆ. ಇಂತಹ ಸೂಕ್ಷ್ಮ ಇಲಾಖೆ ಸ್ವಾಭಾವಿಕವಾಗಿ ಹಲವು ಟೀಕೆ ಟಿಪ್ಪಣಿಗಳಿಗೆ ಗುರಿಯಾಗುತ್ತದೆ. ಟೀಕೆಗಳನ್ನು ಮೀರಿ ಇಲಾಖೆಯ ಸಿಬ್ಬಂದಿ ಕೆಲಸ‌ ಮಾಡುತ್ತಿದ್ದಾರೆ ಎಂದು ಬೆನ್ನುತಟ್ಟಿದ್ದಾರೆ.‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+