Karnataka opinion poll 2023: ಅತಂತ್ರ ಫಲಿತಾಂಶ ನೀಡಿದ ಸಮೀಕ್ಷೆಗಳೆಷ್ಟು? ಅಂಕಿಅಂಶ, ಮಾಹಿತಿ, ವಿವರ

ಬೆಂಗಳೂರು, ಮಾರ್ಚ್‌ 01: ಕರ್ನಾಟಕ ಚುನಾವಣೆಗೆ ( Karnataka Assembly Elections 2023 ) ದಿನಾಂಕ ಪ್ರಕಟವಾದ ನಂತರ ಹಲವು ಸಂಸ್ಥೆಗಳು ಸಮೀಕ್ಷೆಗಳನ್ನು ಪ್ರಕಟಿಸಿವೆ. ಈ ವರೆಗೂ ಹೊರಬಂದಿರುವ ಆರು ಸಮೀಕ್ಷೆಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ( Congress ) ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿವೆ. ಇನ್ನುಳಿದ ಮೂರು ಸರ್ವೇಗಳಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಲಾಗಿದೆ. ಅತಂತ್ರ ಫಲಿತಾಂಶದ ಬಗ್ಗೆ ಹೇಳಿದೆ ಸಮೀಕ್ಷೆಗಳು ಯಾವುವು ಎಂಬುದನ್ನು ತಿಳಿಯಿರಿ.

Zee News-Matrize ಸರ್ವೇ

Zee News-Matrize ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಹೊರಬರಲಿದೆ. ಬಿಜೆಪಿ 96- 106 ಸ್ಥಾನಗಳನ್ನು ಪಡೆಯುತ್ತದೆ ಎಂದು ಅಂದಾಜಿಸಲಾಗಿದೆ ಮತ್ತು ಕಾಂಗ್ರೆಸ್ 88- 98 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಮತ್ತೊಂದೆಡೆ ಜೆಡಿಎಸ್ 23-33 ಸ್ಥಾನಗಳನ್ನು ಗಳಿಸುವ ಅಂದಾಜಿದೆ ಎಂದು ತಿಳಿದುಬಂದಿದೆ.

Karnataka opinion poll 2023: How many polls gave Hung Assembly results? information, details

Zee News-Matrize ಸಮೀಕ್ಷೆಯ ಪ್ರಕಾರ, ಕರ್ನಾಟಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೇಮ್ ಚೇಂಜರ್ ಆಗುತ್ತಾರೆ ಎಂದು ಶೇಕಡಾ 31 ರಷ್ಟು ಜನರು ನಂಬಿದ್ದಾರೆ, ಆದರೆ ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 32 ರಷ್ಟು ಜನರು ಇದನ್ನು ಒಪ್ಪುವುದಿಲ್ಲ.

ಕುತೂಹಲಕಾರಿಯಾಗಿ, ಪ್ರತಿಕ್ರಿಯಿಸಿದವರಲ್ಲಿ ಕೇವಲ 22 ಪ್ರತಿಶತದಷ್ಟು ಜನರು ರಾಹುಲ್ ಗಾಂಧಿಯವರ 'ಭಾರತ್ ಜೋಡೋ ಯಾತ್ರೆ'ಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಭಾವಿಸಿದರೆ, 41 ಪ್ರತಿಶತದಷ್ಟು ಜನರು ಪಾದಯಾತ್ರೆಯು ಕರ್ನಾಟಕದಲ್ಲಿ ಸಹಾಯ ಮಾಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ಶೇ.31ರಷ್ಟು ಮಂದಿ ಬಿಎಸ್ ಯಡಿಯೂರಪ್ಪನವರು ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಾರೆ ಎಂದು ಹೇಳಿದ್ದಾರೆ. ಆದರೆ ಶೇಕಡಾ 21 ರಷ್ಟು ಜನರು ಹಾಗೆ ಭಾವಿಸುವುದಿಲ್ಲ ಎಂದು ತಿಳಿದುಬಂದಿದೆ.

Karnataka opinion poll 2023: How many polls gave Hung Assembly results? information, details
ಪಕ್ಷವಾರು ಮತಗಳ ಹಂಚಿಕೆ
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ
ಶೇ 38.3 ಶೇ 40.4 ಶೇ 16.4 ಶೇ 4.9

ಪಬ್ಲಿಕ್‌ ಟಿವಿ ಕನ್ನಡ ಸರ್ವೇ

ಚುನಾವಣೆಯಲ್ಲಿ ಯಾವ ಆಧಾರದ ಮೇಲೆ ಮತಗಳನ್ನು ಹಾಕಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಮತದಾರರು ಉತ್ತರಿಸಿದ್ದಾರೆ. ಶೇ 27.72 ಪಕ್ಷದ ಆಧಾರದ ಮೇಲೆ ಮತ ನೀಡುವುದಾಗಿ ಹೇಳಿದರೆ, ಅಭ್ಯರ್ಥಿಯನ್ನು ಆಧಾರವಾಗಿಟ್ಟುಕೊಂಡು ಶ 25.38 ರಷ್ಟು ಮತ ಚಲಾಯಿಸಲಿದ್ದಾರೆ. ಜಾತಿ ಶೇ 2.87, ಧರ್ಮ ಶೇ 3.79, ಅಭಿವೃದ್ಧಿ ಶೇ 36.2 ರಷ್ಟು ಜನರು ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡಿದ್ದಾರೆ.

ಬಿಜೆಪಿಗೆ ಮೋದಿ ಆಸರೆ ಆಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಶೇ 53.85 ರಷ್ಟು ಮತದಾರರು ಹೌದು ಎಂದಿದ್ದಾರೆ. ಸಮೂಹ ನಾಯಕತ್ವಕ್ಕೆ ಶೇ 29.02 ರಷ್ಟು ಮತದಾರರು ಹೌದು ಎಂದಿದ್ದಾರೆ.

ಮತದಾರರ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಕೇಳಿದಾಗ, ಬೆಲೆ ಏರಿಕೆ - ಶೇ 27.85, ರಾಜಕೀಯ ಸ್ಥಿರತೆ - ಶೇ 3.34, ಭ್ರಷ್ಟಾಚಾರ - ಶೇ 22.26, ಸ್ಥಳೀಯ ಸಮಸ್ಯೆ/ದುರಾಡಳಿತ - ಶೇ 16.44, ಅಭಿವೃದ್ಧಿ - ಶೇ 30.10 ರಷ್ಟು ಜನರು ಉತ್ತರಿಸಿದ್ದಾರೆ.

ಪಬ್ಲಿಕ್‌ ಕನ್ನಡ ಸರ್ವೇ ಪ್ರಕಾರ, ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಪಕ್ಷಗಳಿಗೆ ಸಿಗಲಿರುವ ಸೀಟುಗಳು ಹೀಗಿವೆ. ಕಾಂಗ್ರೆಸ್‌ : 98-108, ಬಿಜೆಪಿ : 85-95, ಜೆಡಿಎಸ್‌ : 28-33, ಇತರೆ : 00-02

Poll of Poll ಸಮೀಕ್ಷೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ ಎಂದು ಪೋಲ್‌ ಆಫ್‌ ಪೋಲ್‌ ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ ಪಕ್ಷಕ್ಕೆ 100 ರಿಂದ 108 ಸ್ಥಾನಗಳು ಸಿಗಬಹುದು. ಆದ್ದರಿಂದ ಇದು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ. ಇನ್ನು ಆಡಳಿತಾ ರೂಢ ಬಿಜೆಪಿಗೆ 81 ರಂದು 89 ಸ್ಥಾನಗಳು ದೊರೆಯಲಿವೆ ಎಂದು ಹೇಳಲಾಗಿದೆ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ಗೆ 27ರಿಂದ 35 ಸ್ಥಾನಗಳು ಸಿಗಬಹುದು ಎಂದು ಪೋಲ್‌ ಆಫ್‌ ಪೋಲ್‌ ಸರ್ವೇ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+