• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ನೂತನ ಕೈಗಾರಿಕಾ ನೀತಿಯ ಮುಖ್ಯಾಂಶ

|

ಬೆಂಗಳೂರು, ಅ.18 : ಮುಂದಿನ ಐದು ವರ್ಷಗಳಿಗೆ ಅನ್ವಯ ಆಗುವಂತೆ ನೂತನ ಕೈಗಾರಿಕೆ ನೀತಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಕೈಗಾರಿಕಾ ವಲಯದ ಜಮೀನು ಹಂಚಿಕೆಯಲ್ಲಿ ಪರಿಶಿಷ್ಟಜಾತಿ, ವರ್ಗದ ಸಮುದಾಯಕ್ಕೆ ಶೇ.22.5ರಷ್ಟು, ಮಹಿಳೆಯರಿಗೆ ಶೇ.5ರಷ್ಟು ಮೀಸಲು, ಉದ್ದಿಮೆದಾರರಿಗೆ ದುಪ್ಪಟ್ಟು ಸಹಾಯಧನ ನೀಡುವ ಅಂಶಗಳು ಕೈಗಾರಿಕಾ ನೀತಿಯಲ್ಲಿ ಸೇರಿವೆ.

ಶುಕ್ರವಾರ ಸಂಜೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ 'ಕೈಗಾರಿಕಾ ನೀತಿ 2014-19'ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸಚಿವರಾದ ಆರ್‌.ವಿ.ದೇಶಪಾಂಡೆ, ಎಸ್‌.ಆರ್.ಪಾಟೀಲ್‌ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. [ಬೆಂಗಳೂರಿನಲ್ಲಿ ಐಟಿ ಉದ್ಯಮಿಗಳ ಬೃಹತ್ ಸಮಾವೇಶ]

ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಪಟ್ಟಭದ್ರ ಹಿತಾಸಕ್ತಿಗಳು ಸಿದ್ದರಾಮಯ್ಯ ಕೈಗಾರಿಕಾ ವಿರೋಧಿ, ಉದ್ಯಮಿಗಳ ವಿರೋಧಿ ಎಂದು ಅಪಪ್ರಚಾರ ಮಾಡುತ್ತಿವೆ. ಕೈಗಾರಿಕೆಗಳ ಅಭಿವೃದ್ಧಿಯ ಪರವಾಗಿರುವ ರಾಜ್ಯ ಸರ್ಕಾರ ಉದ್ಯಮಿಗಳಿಗೆ ಎಲ್ಲಾ ರೀತಿಯ ನೆರವನ್ನೂ ನೀಡಲು ಸಿದ್ಧವಿದೆ' ಎಂದು ಹೇಳಿದರು.

ಕೈಗಾರಿಕಾ ನೀತಿಯ ಮುಖ್ಯಾಂಶಗಳು

* ಶೇ. 12ರ ಬೆಳವಣಿಗೆಯ 2014-19 ರ ಕೈಗಾರಿಕಾ ನೀತಿ

* 5 ಲಕ್ಷ ಕೋಟಿ ಬಂಡಾವಳ ಹೂಡಿಕೆ ಮತ್ತು 15 ಲಕ್ಷ ಜನರಿಗೆ ಉದ್ಯೋಗ ನೀಡುವ ಗುರಿ

* ಪ್ರತಿ ವರ್ಷ 5000 - 8000 ಎಕರೆ ವಿಸ್ತೀರ್ಣದ 5 ಕೈಗಾರಿಕಾ ವಲಯ ಸ್ಥಾಪನೆ ಮಾಡುವದು

* ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಹೈ-ಕ ವಲಯದಲ್ಲಿ 2 ಕೈಗಾರಿಕಾ ವಲಯ ಸ್ಥಾಪನೆ

* ಕೈಗಾರಿಕೆ ಸ್ಥಾಪನೆ ಮಾಡಲು ವಲಯಗಳಾಗಿ ರಾಜ್ಯವನ್ನು ವಿಭಾಗ ಮಾಡುವುದು

* ವಲಯ 1 ರಲ್ಲಿ 23 ಅತ್ಯಂತ ಹಿಂದುಳಿದ ತಾಲೂಕುಗಳು, ವಲಯ 2 ರಲ್ಲಿ 51 ಅತೀ ಹಿಂದುಳಿದ ತಾಲೂಕುಗಳು * * ವಲಯ 3 ರಲ್ಲಿ 62 ಹಿಂದುಳಿದ ಮತ್ತು 4 ರಲ್ಲಿ 9 ಅಭಿವೃದ್ದಿ ತಾಲೂಕುಗಳು ಸೇರ್ಪಡೆ.

* ಹೈ-ಕ ವಲಯ 1 ರಲ್ಲಿ 20 ಅತ್ಯಂತ ಹಿಂದುಳಿದ ಹಾಗೂ 2 ರಲ್ಲಿ 11 ಅತೀ ಹಿಂದುಳಿದ ತಾಲುಕುಗಳ ಸೇರ್ಪಡೆ

* ಅತೀ ಸಣ್ಣ ಕೈಗಾರಿಕೆಗಳಿಗೆ ಶೇ 20 ರಷ್ಟು ಜಮೀನು

* ಸಣ್ಣ ಕೈಗಾರಿಕೆಗಳಿಗೆ 10 ಲಕ್ಷದಿಂದ 20 ಲಕ್ಷ ಹಾಗೂ ಗರಿಷ್ಠ 20 ಲಕ್ಷದಿಂದ 45 ಲಕ್ಷ ಸಹಾಯಧನ ಏರಿಕೆ.

* ಮಧ್ಯಮ ಕೈಗಾರಿಕೆಗಳಿಗೆ ಕನಿಷ್ಠ 20 ರಿಂದ 30 ಲಕ್ಷ ಹಾಗೂ ಗರಿಷ್ಠ 30 ರಿಂದ 55 ಲಕ್ಷ ಸಹಾಯಧನ ಏರಿಕೆ

* ಎಸ್‍ಸಿ, ಎಸ್‍ಟಿ ವರ್ಗದವರಿಗೆ ಕೆಐಎಡಿಬಿ/ಕೆಎಸ್‌ಡಿಸಿ ಯಲ್ಲಿ ಶೇ 22.50 ರಷ್ಟು ಜಮೀನು ಕಾಯ್ದಿರಿಸುವಿಕೆ.

* ಮಹಿಳೆಯರು, ಅಂಗವಿಕಲರು ಮಾಜಿ ಸೈನಿಕರು, ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಉದ್ದಿಮೆದಾರರಿಗೆ ಶೇ 5 ರಷ್ಟು ಜಮೀನು ಕಾಯ್ದಿರಿಸುವಿಕೆ.

* ಹುಬ್ಬಳ್ಳಿ ಹಾರೋಹಳ್ಳಿಯಲ್ಲಿ ಮಹಿಳಾ ಕೈಗಾರಿಕಾ ವಲಯ ಸ್ಥಾಪನೆ, ಜವಳಿ ಆಭರಣ ಕ್ಷೇತ್ರದಲ್ಲಿ ಕ್ಲಸ್ಟರ್ ಸ್ಥಾಪನೆ

* ಅನಿವಾಸಿ ಕನ್ನಡಿಗರಿಗೆ ಬಂಡವಾಳ ಹೂಡಿಕೆ ಪ್ರೋತ್ಸಾಹಧನ ಕೇಂದ್ರ ಸ್ಥಾಪನೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New industrial policy for Karnataka announced by chief minister Siddaramaiah on Friday. The new industrial policy for the 2014 to 2019 period aims at achieving an industrial growth of 12 per cent per annul by attracting investments of about five lakh core and generating employment for about 15 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more