Karnataka Mini Airport: ರಾಜ್ಯದ 5 ಕಡೆ ಏರ್‌ಸ್ಟ್ರಿಪ್, ಕೇಂದ್ರದಿಂದ ಗುಡ್ ನ್ಯೂಸ್

ಬೆಂಗಳೂರು, ಜನವರಿ 08: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಜಾಗ ಅಂತಿಮವಾಗುವ ಮೊದಲೇ ಕರ್ನಾಟಕ ಮಿನಿ ಏರ್‌ಸ್ಟ್ರಿಪ್ (Mini Airport) ಸ್ಥಾಪಿಸಲು 05 ಕಡೆಗಳಲ್ಲಿ ಜಾಗ ಅಂತಿಮಗೊಂಡಿದೆ. ಉಡಾನ್ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ವೇಗ ಸಿಕ್ಕಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ.

ಏರ್‌ಸ್ಟ್ರಿಪ್: 5 ಕಡೆ ಜಾಗ ಗುರುತು

ಪಾರ್ಲಿಮೆಂಟ್‌ನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದರ ಮಿನಿ ಏರ್‌ಪೋರ್ಟ್ ಪ್ರಶ್ನೆಗೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೆಹೋಲ್ ಮಾಹಿತಿ ನೀಡಿದರು. ರಾಜ್ಯದ ಸರ್ಕಾರದ ಮನವಿ ಮೇರೆಗೆ ಕೇಂದ್ರವು ಸಹಮತಿಸಿದೆ. ರಾಜ್ಯದ ಬಳ್ಳಾರಿ, ಹಾಸನ, ಕೋಲಾರ, ರಾಯಚೂರು ಮತ್ತು ಕುಶಾಲನಗರ ಭಾಗದಲ್ಲಿ ಮಿನಿ ಏರ್‌ಪೋರ್ಟ್‌ಗಳ ಸ್ಥಾಪನೆಗೆ ತಾತ್ಕಾಲಿಕವಾಗಿ ಜಾಗ ಗುರುತಿಸಲಾಗಿದೆ. ಇವು ನಾಗರಿಕ ಪ್ರಯಾಣ ಮಾಡಲು ಅಲ್ಲದೇ ಮಹತ್ವದ ಉದ್ದೇಶಕ್ಕಾಗಿ ನಿರ್ಮಿಸಲಾಗುತ್ತಿದೆ.

Karnataka Mini Airport Project Land Identified in 5 Districts

2023-24ರಲ್ಲಿ ರಾಜ್ಯ ಸರ್ಕಾರ ಏರ್‌ಸ್ಟ್ರಿಪ್ ಯೋಜನೆ ಘೋಷಿಸಿತು. ಅಲ್ಲಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ ಒಪ್ಪಿಗೆ ಪಡೆಯುವುದು, ಜಾಗು ಗುರುತಿಸುವ ಪಕ್ರಿಯೆ ಮುಂದುವರಿದಿದೆ. ಈಗಾಗಲೇ ಇರುವ ಕಡೆಗಳಲ್ಲಿ ಬಿಟ್ಟು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಈ ಮಿನಿ ಏರ್‌ಪೋರ್ಟ್ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಿನಿ ಆರ್‌ಪೋರ್ಟ್?

ಆರಂಭಿಕ ಹಂತದಲ್ಲಿ ಚಿಕ್ಕಮಗಳೂರು, ಕೊಡಗಿನಲ್ಲಿ ಏರ್‌ಸ್ಟ್ರಿಪ್‌ಗೆ ಜಾಗ ಗುರುತಿಸಿದ್ದ ರಾಜ್ಯ ಸರ್ಕಾರ, ದಕ್ಷಿಣ ಕನ್ನಡದ ಧರ್ಮಸ್ಥಳ ಭಾಗದಲ್ಲಿ ಜಾಗ ಹಡುಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಕೇಂದ್ರ ಸರ್ಕಾರ ತಿಳಿಸಿದ ಮಾಹಿತಿ ಪ್ರಕಾರ, ಆ ಮೂರು ಜಾಗ ಅಲ್ಲದೇ, 05 ಕಡೆಗಳಲ್ಲಿ ಮಿನಿ ಏರ್‌ಪೋರ್ಟ್‌ಗೆ ಜಾಗ ಹುಡುಕಿಟ್ಟಿದೆ. ಭವಿಷ್ಯದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏರ್‌ಸ್ಟ್ರಿಪ್ ನಿರ್ಮಾಣವಾಗಲಿವೆ.

ಸದ್ಯ ಯಾವುದು ಇನ್ನೂವರೆಗೂ ಅಂತಿಮಗೊಂಡಿಲ್ಲ. ಈ ಮಿನಿ ಏರ್‌ಪೋರ್ಟ್‌ ತುರ್ತು ಸಂದರ್ಭಗಳಲ್ಲಿ, ಪರಿಸರ ಮತ್ತು ನೈಸರ್ಗಿಕ ವಿಕೋಪದಂತಹ ಕಾರ್ಯದಲ್ಲಿ ಪರಿಹಾರ ಕಾರ್ಯಗಳಿಗೆ ತುರ್ತಾಗಿ ಸ್ಪಂದಿಸಲು ನಿರ್ಮಿಸಲಾಗುತ್ತಿದೆ. ಅಲ್ಲದೇ ಕೆಲವು ರಾಜಕೀಯ ಕಾರ್ಯಕ್ರಮ, ಇನ್ನಿತರ ನಿಗದಿತ ಕಾರ್ಯ ಚಟುವಟಿಕೆಗಳಿಗೆ ಮಾತ್ರವೇ ಬಳಕೆ ಆಗಲಿದೆ.

ನಾಗರಿಕ ವಿಮಾನಯಾನಕ್ಕೆ ಅವಕಾಶ ಇಲ್ಲ

ಈ ಕಾರಣದಿಂದ ಈ ಮಿನಿ ಏರ್‌ಪೋರ್ಟ್‌ಗಳಿಂದ ನಾಗರಿಕ ವಿಮಾನಯಾನಕ್ಕೆ ಅವಕಾಶ ಇರುವುದಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕರ್ನಾಟಕದ ಬೀದರ್, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಕಲಬುರಗಿಯಲ್ಲಿ ಈಗಾಗಲೇ ವಿಮಾನ ಹಾರಾಟ ಆರಂಭವಾಗಿದೆ. ವಿಜಯಪುರ ವಿಮಾನ ನಿಲ್ದಾದ ಕಾರ್ಯಾಚರಣೆ ಮತ್ತಷ್ಟು ವಿಳಂಬ ಸಾಧ್ಯತೆ ಇದೆ. ಕಾರವಾರದಲ್ಲಿ ಏರ್‌ಪೋರ್ಟ್ ನಿರ್ಮಾಣ ಪ್ರಗತಿಯಲ್ಲಿದೆ.

ಬಸವರಾಜ ಬೊಮ್ಮಾಯಿ ಕೇಳಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ 2023-24ರಲ್ಲಿ ಮಿನಿ ಏರ್‌ಸ್ಟ್ರಿಪ್ ಯೋಜನೆ ಘೋಷಿಸಿತು. ಅನುದಾನ ನೀಡುವುದಾಗಿ ತಿಳಿಸಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿತ್ತು. ಇದರ ಬಗ್ಗೆ ಸಂಸತ್‌ನಲ್ಲಿ ಇತ್ತೀಚೆಗೆ ಪ್ರಶ್ನೆ ಮಾಡಿದ್ದ ಸಂಸದ ಬೊಮ್ಮಾಯಿ ಅವರು, ಕರ್ನಾಟಕ ವಿಮಾನಗಳು, ಹೆಚ್ಚು ವಿಮಾನ ಹಾರಾಟ, ಏರ್‌ಪೋರ್ಟ್ ಕುರಿತು ರಾಜ್ಯ ಸರ್ಕಾರ ಕೇಂದ್ರ ಬೇಡಿಕೆ ಸಲ್ಲಿಸಿದೆಯೇ?. ಮಿನಿ ಏರ್‌ಪೋರ್ಟ್ (ಮಿನಿ ಏರ್‌ಸ್ಟ್ರಿಪ್) ಬಗ್ಗೆ ಸಮೀಕ್ಷೆ ಕೈಗೊಂಡಿದೆ ಎಂದು ಕೇಳಿದ್ದಾರೆ.

ಇದೇ ರೀತಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸೌಲಭ್ಯಗಳು, ವಿಮಾನಗಳ ಸೇವೆ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಸಂಸದರ ಈ ಚುಕ್ಕಿ ಗುರುತಿಲ್ಲದ ಪ್ರಶ್ನೆಗೆ ಕೇಂದ್ರ ಸಚಿವರು ಉತ್ತರಿಸಿದರು.

ಸದ್ಯ ಈ ಉಡಾನ್ ಯೋಜನೆಯಡಿ ನಿರ್ಮಾಣವಾಗುವ ಸಣ್ಣ ಏರ್‌ಪೋರ್ಟ್‌ಗಳಿಗೆ ಜಾಗ ಫೈನಲ್ ಆಗುತ್ತಿದ್ದಂತೆ ಸಮಗ್ರ ಯೋಜನಾ ವರದಿ (ಡಿಪಿಆರ್) ಯಂತೆ ನಿರ್ಮಾಣ ಆರಂಭವಾಗಲಿದೆ. ಎಲ್ಲ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಮಿನಿ ಏರ್‌ಪೋರ್ಟ್ ನಿರ್ಮಾಣವಾಗಲಿದೆಯೇ ಅಥವಾ ಹಂತ ಹಂತವಾಗಿ ಆರಂಭವಾಗುತ್ತಾ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೆಲವೇ ದಿನಗಳಲ್ಲಿ ಮಾಹಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+