7 ಲಕ್ಷ ನಕಲಿ ನೋಟಿನ ಜೊತೆ ಬೆಂಗಳೂರಿನ ವ್ಯಕ್ತಿ ಬಂಧನ
ಬೆಂಗಳೂರು, ಸೆಪ್ಟೆಂಬರ್ 01 : ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ 7.56 ಲಕ್ಷ 2 ಸಾವಿರ ರೂ. ನಕಲಿ ನೋಟು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಿದೆ. ಬಂಧಿತ ವ್ಯಕ್ತಿ ಕರ್ನಾಟಕ ಮೂಲದವನು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ (ಡಿಆರ್‌ಐ) ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿದೆ. ಬೆಂಗಳೂರಿನ ಆರೋಪಿಯ ಮನೆಯಲ್ಲಿಯೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ನಕಲಿ ನೋಟು ಪತ್ತೆಯಾಗಿದೆ.

ಬಂಧಿತ ವ್ಯಕ್ತಿಯಿಂದ 349 ಎರಡು ಸಾವಿರ ರೂ. ನೋಟುಗಳನ್ನು, ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಆರೋಪಿಯ ಮನೆಯಿಂದ 58,000 ರೂ. ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತ ವ್ಯಕ್ತಿಯಿಂದ ಒಟ್ಟು 7.56 ಲಕ್ಷ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದು, ವಿಚಾರಣೆ ಮುಂದುವರೆದಿದೆ.
ಪ್ರಾಥಮಿಕ ತನಿಖೆಯ ವೇಳೆ ಬಂಧಿತ ವ್ಯಕ್ತಿ ಪಶ್ಚಿಮ ಬಂಗಾಳದ ಇಸ್ಲಾಂಪುರದಲ್ಲಿನ ವ್ಯಕ್ತಿಯಿಂದ ಈ ನೋಟುಗಳನ್ನು ಖರೀದಿ ಮಾಡಿದ್ದ ಎಂಬುದು ಬಹಿರಂಗವಾಗಿದೆ. ಇಸ್ಲಾಂಪುರ ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಪ್ರದೇಶವಾಗಿದೆ. ನಕಲಿ ನೋಟುಗಳನ್ನು ಪರಿಶೀಲನೆಗಾಗಿ ನೋಟು ಮುದ್ರಣ ಕೇಂದ್ರಕ್ಕೆ ಕಳುಹಿಸಲಾಗಿದೆ.












Click it and Unblock the Notifications