Karnataka Major Reservoirs: ಕೆಆರ್ಎಸ್ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಸೆಪ್ಟೆಂಬರ್ 29ರ ಅಂಕಿಅಂಶಗಳು
Karnataka Reservoirs Water Level: ರಾಜ್ಯದಲ್ಲಿ ಇಷ್ಟು ದಿನ ತಗ್ಗಿದ್ದ ವರುಣನ ಆರ್ಭಟ ಇದೀಗ ಮತ್ತೆ ಚುರುಕು ಪಡೆದಿದೆ. ಇದರಿಂದ ಜಲಾಶಯಗಳಿಗೆ ಮತ್ತೆ ಜೀವಕಳೆ ಬಂದಂತಾಗುದ್ದು, ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಹಾಗಾದ್ರೆ ಮಂಗಳವಾರ (ಸೆಪ್ಟೆಂಬರ್ 29) ಕೆಆರ್ಎಸ್ ಸೇರಿದಂತೆ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಷ್ಟು ದಿನ ಬಿಸಿಲಿನ ವಾತಾವರಣ ಮುಂದುವರೆದಿತ್ತು. ಆದರೆ ಇದೀಗ ವರುಣನ ಆರ್ಭಟ ಮತ್ತೆ ಆರಂಭವಾಗಿದೆ. ಆದರೂ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಪರಿಣಾಮ ಕೆಲವು ಜಲಾಶಯಗಳನ್ನ ಹೊರತುಪಡಿಸಿದರೆ, ಉಳಿದ ಬಹುತೇಕ ಡ್ಯಾಂಗಳಿಗೆ ಒಳಹರಿವಿನ ಪ್ರಮಾಣ ಕಡಿಮೆಯಾಗುತ್ತಲಿದೆ.

1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 105.04 ಅಡಿ
* ಒಳಹರಿವು - 563 ಕ್ಯೂಸೆಕ್
* ಹೊರಹರಿವು - 2,929 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,269.21 ಅಡಿ
* ಒಳಹರಿವು - 1,039 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ - 1,624.04 ಅಡಿ
* ಒಳಹರಿವು - 896 ಕ್ಯೂಸೆಕ್
* ಹೊರಹರಿವು - 9,064 ಕ್ಯೂಸೆಕ್
4. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,795.45 ಅಡಿ
* ಒಳಹರಿವು - 2,726 ಕ್ಯೂಸೆಕ್
* ಹೊರಹರಿವು - 5,284 ಕ್ಯೂಸೆಕ್
5. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 175.5 ಅಡಿ
* ಒಳಹರಿವು - 578 ಕ್ಯೂಸೆಕ್
* ಹೊರಹರಿವು - 4,409 ಕ್ಯೂಸೆಕ್
6. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,851.21 ಅಡಿ
* ಒಳಹರಿವು - 778 ಕ್ಯೂಸೆಕ್
* ಹೊರಹರಿವು - 100 ಕ್ಯೂಸೆಕ್
7. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,891.75 ಅಡಿ
* ಒಳಹರಿವು - 996 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
8. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 519.60 ಮೀಟರ್
* ಇಂದಿನ ನೀರಿನ ಮಟ್ಟ - 518.65 ಮೀಟರ್
* ಒಳಹರಿವು - 00 ಕ್ಯೂಸೆಕ್
* ಹೊರಹರಿವು - 12,662 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,174.70 ಅಡಿ
* ಒಳಹರಿವು - 184 ಕ್ಯೂಸೆಕ್
* ಹೊರಹರಿವು - 784 ಕ್ಯೂಸೆಕ್
10. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,065.60 ಅಡಿ
* ಒಳಹರಿವು - 00 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್


Click it and Unblock the Notifications
