Tungabhadra Dam: ಕರ್ನಾಟಕದ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಳ, ಜುಲೈ 30ರ ನೀರಿನ ಮಟ್ಟ, ಅಂಕಿ-ಸಂಖ್ಯೆ

ಬೆಂಗಳೂರು: ಕರ್ನಾಟಕದಾದ್ಯಂತ ಮತ್ತೆ ಮುಂಗಾರು ಮಳೆ ಚುರುಕು ಪಡೆಯಲಿದ್ದು, ಆದರೆ ನಿರೀಕ್ಷಿತ ಭಾರೀ ಮಳೆ ಡೌಟು ಎನ್ನಲಾಗಿದೆ. ಕರಾವಳಿ, ಪಶ್ಚಿಮ ಘಟ್ಟಗಳು ಸೇರಿದಂತೆ ಮಲೆನಾಡಿನ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಳಹರಿವು ಏರಿಕೆ ಆಗಿದೆ. ಕೆಲವು ಜಲಾಶಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರಿನ ಸಂಗ್ರಹವಾಗಿದ್ದು, ನೀರಾವರಿ ರೈತರಿಗೆ ಹೊಸ ಭರವಸೆ ಮೂಡಿಸಿದೆ. ಇಂದು ಜುಲೈ 30ರಂದು ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಪಟ್ಟಿ ಮುಂದಿದೆ.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆ ಹಿನ್ನೆಲೆಯ ಕಾವೇರಿ ಹಾಗೂ ಅದರ ಉಪನದಿಗಳಾದ ಹಾರಂಗಿ, ಹೇಮಾವತಿ ನದಿಗಳಲ್ಲಿ ಉತ್ತಮ ಒಳಹರಿವು ದಾಖಲಾಗಿದೆ. ಹಾರಂಗಿ ಶೇ. 95ರಷ್ಟು ಭರ್ತಿಯಾಗಿದ್ದು, ಹೇಮಾವತಿ ಅಣೆಕಟ್ಟಿನಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ತುಂಬಿಕೊಂಡಿದೆ. ನಿರಂತರ ಹೀಗೆ ಮಳೆ ಆದರೆ ಶಿಂಷಾ, ಆರ್ಕಾವತಿ ನದಿಗಳಿಗೂ ಹೆಚ್ಚಿನ ನೀರಿನ ಹರಿವು ನಿರೀಕ್ಷಿಸಬಹುದಾಗಿದೆ.

Karnataka Major Reservoir Levels

ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ ಆಗುತ್ತಿರುವ ಪರಿಣಾಮ ತುಂಗಾ ಮತ್ತು ಭದ್ರಾ ನದಿ ಒಳಹರಿವು ಹೆಚ್ಚಾಗಿದೆ. ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಯ ನೀರು ತುಂಗಭದ್ರಾ (ಟಿಬಿ) ಜಲಾಶಯ ಸೇರಿಕೊಳ್ಳುತ್ತದೆ. ಮಲೆನಾಡಿಗೆ ಉತ್ತಮ ಮಳೆ ಆಗಿದ್ದರಿಂದ ಹೊಸ ಕ್ರಸ್ಟ್‌ ಗೇಟ್‌ ಅಳವಡಿಕೆಯಾದ ಟಿಬಿ ಅಣೆಕಟ್ಟಿಗೆ ನಿರಂತರವಾಗಿ ಒಳಹರಿವು ಏರಿಕೆ ಆಗುತ್ತಿದೆ. ಇದು ಕಲ್ಯಾಣ ಕರ್ನಾಟಕದ ಕೊಪ್ಪಳ, ರಾಯಚೂರು ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳ ವಿವಿಧ ಜಿಲ್ಲೆಗಳ ರೈತರ ಖುಷಿಗೆ ಕಾರಣವಾಗಿದೆ.

ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳ ಒಳ, ಹೊರ ಹರಿವು ಹಾಗೂ ಇಂದಿನ ನೀರಿನ ಸಂಗ್ರಹ ಮಟ್ಟ ಎಷ್ಟಿದೆ? ಜುಲೈ 30ರ ಅಂಕಿ ಅಂಶಗಳು ಇಲ್ಲಿವೆ.

ಲಿಂಗನಮಕ್ಕಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 151.75 ಟಿಎಂಸಿ
ಇಂದಿನ ನೀರಿನ ಮಟ್ಟ: 45.45 ಟಿಎಂಸಿ
ಒಟ್ಟು ಒಳಹರಿವು: 19047 ಕ್ಯೂಸೆಕ್
ಹೊರ ಹರಿವು: 2863 ಕ್ಯೂಸೆಕ್

ತುಂಗಭದ್ರಾ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 35.09 ಟಿಎಂಸಿ
ಒಟ್ಟು ಒಳಹರಿವು: 14614 ಕ್ಯೂಸೆಕ್
ಹೊರ ಹರಿವು: 3691 ಕ್ಯೂಸೆಕ್

ಕೆ.ಆರ್.ಎಸ್ ಅಣೆಕಟ್ಟು

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 49.46 ಟಿಎಂಸಿ
ಇಂದಿನ ನೀರಿನ ಮಟ್ಟ: 17.13 ಟಿಎಂಸಿ
ಒಟ್ಟು ಒಳಹರಿವು: 2842 ಕ್ಯೂಸೆಕ್
ಹೊರ ಹರಿವು: 1747 ಕ್ಯೂಸೆಕ್

ಕಬಿನಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 14.70 ಟಿಎಂಸಿ
ಒಟ್ಟು ಒಳಹರಿವು: 3805 ಕ್ಯೂಸೆಕ್
ಹೊರ ಹರಿವು: 500 ಕ್ಯೂಸೆಕ್

ಆಲಮಟ್ಟಿ ಜಲಾಶಯ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 118 ಟಿಎಂಸಿ
ಒಟ್ಟು ಒಳಹರಿವು: 68525 ಕ್ಯೂಸೆಕ್
ಹೊರ ಹರಿವು: 81434 ಕ್ಯೂಸೆಕ್

ಸುಪಾ ಅಣೆಕಟ್ಟು ಮಾಹಿತಿ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 145. 33 ಟಿಎಂಸಿ
ಇಂದಿನ ನೀರಿನ ಮಟ್ಟ: 52.43 ಟಿಎಂಸಿ
ಒಟ್ಟು ಒಳಹರಿವು: 19047 ಕ್ಯೂಸೆಕ್
ಹೊರ ಹರಿವು: 2863 ಕ್ಯೂಸೆಕ್

ಹೇಮಾವತಿ ಡ್ಯಾಂ ನೀರಿನ ಸಂಗ್ರಹ

ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ
ಇಂದಿನ ನೀರಿನ ಮಟ್ಟ: 24 ಟಿಎಂಸಿ
ಒಟ್ಟು ಒಳಹರಿವು: 5690 ಕ್ಯೂಸೆಕ್
ಹೊರ ಹರಿವು: 500 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+