Karnataka Dams Water Level: ತುಂಬಿದ ಕೆಆರ್‌ಎಸ್; ಉಳಿದ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ತಿಳಿಯಿರಿ
Karnataka Dam Water Level: ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದಿದೆ. ಈ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಕೆರೆ-ಕಟ್ಟೆ, ನದಿಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿವೆ. ಅಲ್ಲದೆ, ಕೆಲ ಜಲಾಶಯಗಳು ಸಹ ಭರ್ತಿಯಾದರೆ, ಇನ್ನೂ ಕೆಲವು ತುಂಬವ ಹಂತದಲ್ಲಿವೆ. ಹಾಗಾದರೆ ಇಂದು (ಜೂನ್ 29) ಮಂಡ್ಯ, ಮೈಸೂರು, ಬೆಂಗಳೂರು ಜೀನವಾಡಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಸೇರಿ ರಾಜ್ಯದಲ್ಲಿನ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಯಿರಿ.
ಕಳೆದ ಕೆಲ ದಿನಗಳಿಂದ ತಗ್ಗಿದ್ದ ಮುಂಗಾರು ಮಳೆ ಆರ್ಭಟ ಇದೀಗ ಮತ್ತೆ ಚುರು ಪಡೆದಿದ್ದು, ಪರಿಣಾಮ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ ಭಾರೀ ಮಳೆಯಿಂದ ಕೆಲ ಜಲಾಶಯಗಳು ಭರ್ತಿಯಾಗಿವೆ. ಇನ್ನೂ ಕೆಲವು ತುಂಬುವ ಹಂತದಲ್ಲಿವೆ. ಹಾಗಾದರೆ, ಪ್ರಸ್ತುತ ಕೆಆರ್‌ಎಸ್, ತುಂಗಾಭದ್ರಾ, ಭದ್ರಾ, ಕಬಿನಿ, ಹೇಮಾವತಿ, ಮಲಪ್ರಭಾ, ಘಟಪ್ರಭಾ, ಹಾರಂಗಿ, ಆಲಮಟ್ಟಿ, ಲಿಂಗನಮಕ್ಕಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 124 ಅಡಿ
* ಒಳಹರಿವು - 39,689 ಕ್ಯೂಸೆಕ್
* ಹೊರಹರಿವು - 25,548 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,279.44 ಅಡಿ
* ಒಳಹರಿವು - 30,853 ಕ್ಯೂಸೆಕ್
* ಹೊರಹರಿವು - 30,000 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 517.06 ಮೀಟರ್
* ಒಳಹರಿವು - 1,14,327 ಕ್ಯೂಸೆಕ್
* ಹೊರಹರಿವು - 1,10,000 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,620.20 ಅಡಿ
* ಒಳಹರಿವು - 60,023 ಕ್ಯೂಸೆಕ್
* ಹೊರಹರಿವು - 200 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,060.15 ಅಡಿ
* ಒಳಹರಿವು - 7,583 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,784.05 ಅಡಿ
* ಒಳಹರಿವು - 24,752 ಕ್ಯೂಸೆಕ್
* ಹೊರಹರಿವು - 7,198 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 161.4 ಅಡಿ
* ಒಳಹರಿವು - 21,139 ಕ್ಯೂಸೆಕ್
* ಹೊರಹರಿವು - 1,290 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,141.85 ಅಡಿ
* ಒಳಹರಿವು - 18,570 ಕ್ಯೂಸೆಕ್
* ಹೊರಹರಿವು - 449 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,916.01 ಅಡಿ
* ಒಳಹರಿವು - 26,008 ಕ್ಯೂಸೆಕ್
* ಹೊರಹರಿವು - 24,950 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,850.09 ಅಡಿ
* ಒಳಹರಿವು - 4,592 ಕ್ಯೂಸೆಕ್
* ಹೊರಹರಿವು - 6,500 ಕ್ಯೂಸೆಕ್
ಒಟ್ಟಿನಲ್ಲಿ ಹೇಳುವುದಾದರೆ, ಬಹುತೇಕ ಜಲಾಶಯಗಳ ಒಳಹರಿವು ಹೆಚ್ಚಾಗುತ್ತಿದೆ. ಕೆಲ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿದ್ದು, ಬಾಗಿನ ಅರ್ಪಣೆಗೆ ಸಜ್ಜಾಗಿ ನಿಂತಿವೆ. ಅದರಲ್ಲೂ ಈ ಬಾರಿ ಮಂಡ್ಯ, ಮೈಸೂರು, ಬೆಂಗಳೂರು ಜೀವನಾಡಿ ಡ್ಯಾಂ ಆಗಿರುವ ಕೆಆರ್‌ಎಸ್ ಭರ್ತಿಯಾಗಿದ್ದು, ಈ ಭಾಗಗಳ ಜನರ ಮುಖದಲ್ಲಿ ಸಂತಸ ಮನೆ ಮೂಡಿಸಿದೆ.












Click it and Unblock the Notifications