Karnataka Dam Water Level: ಭಾರೀ ಮಳೆಗೆ ರಾಜ್ಯದ ಅಣೆಕಟ್ಟುಗಳು ಭರ್ತಿ! ಇಂದಿನ ಒಳ-ಹೊರಹರಿವು ವಿವರ

ಬೆಂಗಳೂರು, ಜುಲೈ 01: ಕರ್ನಾಟಕದಾದ್ಯಂತ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಈಗಾಗಲೇ ಸುರಿದ ಮಳೆಯಿಂದಾಗಿ ರಾಜ್ಯ ಜಲಾಶಯಗಳೆಲ್ಲವು ಉಕ್ಕಿ ಹರಿಯುತ್ತಿವೆ. ನದಿಗಳ ಒಳಹರಿವು ಹೆಚ್ಚಾಗಿದೆ. ಮತ್ತೊಂದೆಡೆ ಮಳೆ ಮುಂದುವರಿದಿದೆ. ಇದರಿಂದ ಕೆ.ಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ಮೆಟ್ಟೂರು, ಆಲಮಟ್ಟಿ ಹೀಗೆ ಅನೇಕ ಜಲಾಶಯಗಳ ಒಳಹರಿವು ಏರಿಕೆ ಆಗಿದೆ. ಹೊರ ಹರಿವು ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಡ್ಯಾಂಗಳ ನೀರಿನ ಮಟ್ಟ ವರದಿಯಿಂದ ತಿಳಿದು ಬರುತ್ತದೆ.

ಹೌದು, ಕರಾವಳಿ, ಪಶ್ಚಿಮ ಘಟ್ಟಗಳ ಜಿಲ್ಲೆಗಳು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕೇರಳ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಕಬಿನಿ ಅರಣ್ಯ ಪ್ರದೇಶ ಹೀಗೆ ನಾನಾ ಕಡೆಗಳಲ್ಲಿ ನಿರಂತರ ಮಳೆ ಆಗುತ್ತಲೇ ಇದೆ. ಇದರಿಂದ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜ ಸಾಗರ, ಅದರ ಉಪನದಿಗಳಿಗೆ ಕಟ್ಟಲಾಗಿರುವ ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಭರ್ತಿಯಾಗಿವೆ.

Karnataka Major Dam Level on July 1st Outflow Heavy Raised in KRS Kabini and Harangi Dam

ನಿತ್ಯ ಸಾವಿರಾರು ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ದಶಕಗಳ ಬಳಿಕ ಜೂನ್‌ ತಿಂಗಳಲ್ಲಿ ಕೆ.ಆರ್‌.ಎಸ್ ಅಣೆಕಟ್ಟು ತುಂಬಿದೆ. ಅಪಾರ ಪ್ರಮಾಣದ ನೀರನ್ನು ಹೊಡ ಬಿಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಪೂಜೆ ಮಾಡಿ, ಬಾಗಿನ ಅರ್ಪಿಸಿದರು. ಕೆಆರ್‌ಎಸ್ ಸೇರಿದಂತೆ ರಾಜ್ಯದ ಇತರ ಜಲಾಶಯಗಳ ಒಳ ಮತ್ತು ಹೊರ ಹರಿವಿನ ಮಟ್ಟ ಇಲ್ಲಿದೆ.

KRS ಡ್ಯಾಂ ಇಂದಿನ ಮಟ್ಟ ಎಷ್ಟಿದೆ?

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 124 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 124 ಟಿಎಂಸಿ

* ಇಂದಿನ ಒಳಹರಿವು: 35499 ಕ್ಯೂಸೆಕ್

* ಡ್ಯಾಂ ಹೊರ ಹರಿವು : 35687 ಕ್ಯೂಸೆಕ್

ಕಬಿನಿ ಡ್ಯಾಂ ನೀರಿನ ವಿವರ

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 19 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 15 ಟಿಎಂಸಿ

* ಇಂದಿನ ಒಳಹರಿವು: 12,060ಕ್ಯೂಸೆಕ್

* ಡ್ಯಾಂ ಹೊರ ಹರಿವು : 12000 ಕ್ಯೂಸೆಕ್

ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 124 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 86 ಟಿಎಂಸಿ

* ಇಂದಿನ ಒಳಹರಿವು: 91,346 ಕ್ಯೂಸೆಕ್

* ಡ್ಯಾಂ ಹೊರ ಹರಿವು : 72,031 ಕ್ಯೂಸೆಕ್

ಹಾರಂಗಿ ಅಣೆಕಟ್ಟಿನ ಒಳ-ಹೊರ ಹರಿವು ಅಪ್ಡೇಟ್ಸ್

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 8.50 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 6.31 ಟಿಎಂಸಿ

* ಇಂದಿನ ಒಳಹರಿವು: 3137 ಕ್ಯೂಸೆಕ್

* ಡ್ಯಾಂ ಹೊರ ಹರಿವು : 1541 ಕ್ಯೂಸೆಕ್

ಹೇಮಾವತಿ ಅಣೆಕಟ್ಟಿನ ನೀರಿನ ಮಟ್ಟ

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 37.10 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 32.71 ಟಿಎಂಸಿ

* ಇಂದಿನ ಒಳಹರಿವು: 17,123 ಕ್ಯೂಸೆಕ್

* ಡ್ಯಾಂ ಹೊರ ಹರಿವು :14,070 ಕ್ಯೂಸೆಕ್

ಲಿಂಗನಮಕ್ಕಿ ಡ್ಯಾಂ ವಿವರ

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 151 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 64.19 ಟಿಎಂಸಿ

* ಇಂದಿನ ಒಳಹರಿವು: 12,593 ಕ್ಯೂಸೆಕ್

* ಡ್ಯಾಂ ಹೊರ ಹರಿವು : 6,432 ಕ್ಯೂಸೆಕ್

ತುಂಗಭದ್ರಾ ಅಣೆಕಟ್ಟಿನ ನೀರಿನ ಸಾಮರ್ಥ್ಯ

* ಡ್ಯಾಂ ಒಟ್ಟು ನೀರಿನ ಸಾಮರ್ಥ್ಯ: 105 ಟಿಎಂಸಿ

* ಇಂದಿನ ನೀರಿನ ಸಂಗ್ರಹ: 74 ಟಿಎಂಸಿ

* ಇಂದಿನ ಒಳಹರಿವು: 33,916 ಕ್ಯೂಸೆಕ್

* ಡ್ಯಾಂ ಹೊರ ಹರಿವು : 2389 ಕ್ಯೂಸೆಕ್

ಕರ್ನಾಟಕ ಹವಾಮಾನ ವರದಿ: ಭಾರೀ ಮಳೆ ಎಚ್ಚರಿಕೆ

ರಾಜ್ಯದಲ್ಲಿ ಜುಲೈ 3ರಿಂದ ಇನ್ನಿಲ್ಲದಂತೆ ಮಳೆ ಅಬ್ಬರಿಸಲಿದೆ. ಕರಾವಳಿಯ ಮೂರು ಜಿಲ್ಲೆಗಳು, ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಮತ್ತೆ ಸಕ್ರಿಯವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸುಮಾರು 8ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದ್ದು, ನಾಲ್ಕು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಈ ವಾರಾಂತ್ಯಕ್ಕೆ ಭರ್ಜರಿ ಮಳೆ ಬರಲಿದೆ. ಇದರಿಂದ ಜಲಾಶಯಗಳು, ನದಿಗಳ ಒಡಲಿಗೆ ಮತ್ತಷ್ಟು ನೀರು ಹರಿದು ಬರಲಿದೆ. ಜಲಾನಯನ ಪ್ರದೇಶಗಳು, ನದಿ ಪಾತ್ರಗಳ ಜನರಲ್ಲಿ ಪ್ರವಾಹ, ಜೀವ ಭಯ ಎಚ್ಚರಿಕೆ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+