Karnataka Dam Water Storage: ಕಬಿನಿ, ಹಾರಂಗಿ ಒಳಹರಿವಿಗಿಂತ ಹೊರಹರಿವು ಹೆಚ್ಚಳ! ಇತರ ಡ್ಯಾಂಗಳ ಮಾಹಿತಿ

ಬೆಂಗಳೂರು, ಜೂನ್ 15: ಮುಂಗಾರು ಮಳೆ ಅಬ್ಬರ ಕರ್ನಾಟಕದಲ್ಲಿ ಮುಂದುವರಿದಿದೆ. ಮುಂದಿನ 48 ಗಂಟೆಗಳ ಕಾಲ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಿಪರೀತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಬಿನಿ, ಹಾರಂಗಿ, ಹೇಮಾವತಿ, ಕೃಷ್ಣ ರಾಜ ಸಾಗರ (KRS Dam) ಜಲಾಶಯಗಳು ಹಾಗೂ ನದಿಗಳಲ್ಲಿ ಒಳಹರಿವು ಏರಿಕೆ ಆಗುತ್ತಿದೆ.

ಉತ್ತಮ ಮಳೆಯಿಂದಾಗಿ ಕಬಿನಿ ಹಾಗೂ ಹಾರಂಗಿ ಜಲಾಶಗಳಲ್ಲಿ ಒಳಹರಿವಿಗಿಂತ ಹೊರ ಹರಿವು ಹೆಚ್ಚಾಗಿದೆ. ಅಷ್ಟ ಮಟ್ಟಿನ ನೀರು ಸಂಗ್ರಹವಾಗುತ್ತಿದೆ. ಬಹುತೇಕ ಡ್ಯಾಂಗಳು ಒಟ್ಟು ಸಾಮರ್ಥ್ಯದ ನೀರು ಸಂಗ್ರಹದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿವೆ.

Karnataka Major Dam are Kabini KRS Harangi and Hemavathi Inflow-Outflow Raised on June 15

ಇಂದು ಬೆಳಗ್ಗೆ ಜೂನ್ 15ರವರೆಗೆ (ಕಳೆದ 24 ಗಂಟೆಗಳಲ್ಲಿ) ತಲಕಾವೇರಿಯಲ್ಲಿ ಗರಿಷ್ಠ 218 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಭಾಗಮಂಡಲ 130.6 ಮಿ.ಮೀ, ಶಾಂತಳ್ಳಿ 75 ಮಿ.ಮೀ, ಸಂಪಾಜೆ 65 ಮಿ.ಮೀ, ವಿರಾಜಪೇಟೆ 65ಮಿ.ಮೀ, ಮಡಿಕೇರಿ 47 ಮಿ.ಮೀ, ಅಮ್ಮತ್ತಿ 43 ಮಿ.ಮೀ, ನಾಪೋಕ್ಲು 41.2 ಮಿ.ಮೀ, ಶ್ರೀಮಂಗಲ 40 ಮಿ.ಮೀ, ಸೋಮವಾರಪೇಟೆ 36.2 ಮಿ.ಮೀ, ಹುದಿಕೆರೆ 35.3 ಮಿ.ಮೀ, ಸುಂಟಿಕೊಪ್ಪ 25 ಮಿ.ಮೀ, ಪೊನ್ನಂಪೇಟೆ 22 ಮಿ.ಮೀ, ಕೊಡ್ಲಿಪೇಟೆ 19.2 ಮಿ.ಮೀ, ಬಾಲೆಲೆ 16 ಮಿಮೀ, ಕುಶಾಲನಗರ 10 ಮಿ.ಮೀ. ಮಳೆ ದಾಖಲಾಗಿದೆ. ಕೊಡಗು ಸೇರಿದಂತೆ ಕರಾವಳಿ, ಒಳನಾಡು ಭಾಗದದಲ್ಲಿ ಉತ್ತಮ ಮಲೇ ಆಗಿದ್ದು, ಈ ಕಾರಣದಿಂದ ಭಾನುವಾರ ವಿವಿಧ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಅವುಗಳ ವಿವರ ಮುಂದಿದೆ.


KRS ಅಣೆಕಟ್ಟಿನ ನೀರಿನ ಮಟ್ಟ

* ನೀರಿನ ಒಟ್ಟು ಸಂಗ್ರಹ: 49.452ಟಿಎಂಸಿ
* ಇಂದಿನ ನೀರಿನ ಸಂಗ್ರಹ: 30.845 ಟಿಎಂಸಿ
* ಇಂದಿನ ಒಳಹರಿವು: 3377 ಕ್ಯೂಸೆಕ್
* ಒಟ್ಟು ಹೊರ ಹರಿವು: 906 ಕ್ಯೂಸೆಕ್

ಹೇಮಾವತಿ ಡ್ಯಾಂ ಇಂದಿನ ಮಟ್ಟ

* ನೀರಿನ ಒಟ್ಟು ಸಂಗ್ರಹ: 37.10 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 24.911ಟಿಎಂಸಿ
* ಇಂದಿನ ಒಳಹರಿವು: 1907 ಕ್ಯೂಸೆಕ್
* ಒಟ್ಟು ಹೊರ ಹರಿವು: 350 ಕ್ಯೂಸೆಕ್

ಕಬಿನಿ ಅಣೆಕಟ್ಟಿನ ನೀರಿನ ಮಟ್ಟ

* ನೀರಿನ ಒಟ್ಟು ಸಂಗ್ರಹ: 19.52 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 15.01 ಟಿಎಂಸಿ
* ಇಂದಿನ ಒಳಹರಿವು: 3029 ಕ್ಯೂಸೆಕ್
* ಒಟ್ಟು ಹೊರ ಹರಿವು: 3667 ಕ್ಯೂಸೆಕ್

ಹಾರಂಗಿ ಜಲಾಶಯದ ಒಟ್ಟು ಸಂಗ್ರಹ

* ನೀರಿನ ಒಟ್ಟು ಸಂಗ್ರಹ: 8.5 ಟಿಎಂಸಿ
* ಇಂದಿನ ನೀರಿನ ಸಂಗ್ರಹ: 6.302ಟಿಎಂಸಿ
* ಇಂದಿನ ಒಳಹರಿವು: 3208ಕ್ಯೂಸೆಕ್
* ಒಟ್ಟು ಹೊರ ಹರಿವು: 3750ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+