15 ಪತ್ರಕರ್ತರಿಗೆ 2016ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 03: ಕರ್ನಾಟಕ ಮಾಧ್ಯಮ ಅಕಾಡೆಮಿ 2016ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ. ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿ ಇಂದು (ಫೆಬ್ರವರಿ 03) ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ, ನಾಡಿನ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. 2016 ನೇ ಸಾಲಿಗೆ 15 ಮಂದಿ ಪತ್ರಕರ್ತರಿಗೆ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.[2015ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ]

2016 ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ "ಆಂದೋಲನ ಪ್ರಶಸ್ತಿ", 'ಸಾಮಾಜಿಕ ಸಮಸ್ಯೆ' ಲೇಖನಕ್ಕೆ ನೀಡುವ 'ಅಭಿಮಾನಿ ಪ್ರಶಸ್ತಿ', 'ಮಾನವೀಯ ಸಮಸ್ಯೆ' ಲೇಖನಕ್ಕೆ ನೀಡುವ "ಮೈಸೂರು ದಿಗಂತ" ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ "ಅರಗಿಣಿ" ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ "ಮೂಕನಾಯಕ ಪ್ರಶಸ್ತಿ"ಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಜೊತೆಗೆ ತಲಾ 10 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ನೆರವೇರಿಸಲು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಎಂ. ಸಿದ್ದರಾಜು ಅವರು ತಿಳಿಸಿದರು.

Karnataka Media Academy awards 2016 announced

ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಕಂಡಂತಿದೆ:

1. ಎಚ್.ಆರ್. ಶ್ರೀಶ, ಹಿರಿಯ ಪತ್ರಕರ್ತರು - ಬೆಂಗಳೂರು
2. ಶ್ರೀಮತಿ ಶಾಂತಲಾ ಧರ್ಮರಾಜ್, ಸಂಯುಕ್ತ ಕರ್ನಾಟಕ - ಮೈಸೂರು
3. ಜಿ. ವೀರಣ್ಣ, ವಿಜಯವಾಣಿ - ಬಳ್ಳಾರಿ
4. ಸಿದ್ದಕಿ ಆಲ್ದೂರು, ಹಿರಿಯ ಪತ್ರಕರ್ತರು - ಚಿಕ್ಕಮಗಳೂರು
5. ರೊನಾಲ್ಡ್ ಫರ್ನಾಂಡಿಸ್, ಡೆಕ್ಕನ್ ಹೆರಾಲ್ಡ್ - ಮಂಗಳೂರು
6. ಚೀ.ನಿ. ಪುರುಷೋತ್ತಮ, ಉದಯವಾಣಿ - ತುಮಕೂರು
7. ಎ.ಸಿ. ಪ್ರಭಾಕರ, ಮೈಸೂರು ಮಿತ್ರ - ಚಾಮರಾಜನಗರ
8. ಉಜ್ಜಿನಿ ರುದ್ರಪ್ಪ, ಕನ್ನಡಪ್ರಭ - ಕೊಪ್ಪಳ
9. ಹೇಮಂತಕುಮಾರ್, ಇಂಡಿಯನ್ ಎಕ್ಸ್ ಪ್ರೆಸ್- ಬೆಂಗಳೂರು
10. ರಾಮಸ್ವಾಮಿ, ಈ ಸಂಜೆ - ರಾಮನಗರ
11. ಶಂಕರಪ್ಪ ಹುಸನಪ್ಪ ಚಲವಾದಿ, ಹುಚ್ಚ ಪತ್ರಿಕೆ - ಬಾಗಲಕೋಟೆ
12. ನಾಗರಾಜ ಸುಣಗಾರ, ಉದಯ ಟಿವಿ - ಧಾರವಾಡ
13. ಅನಿಲಕುಮಾರ್ ಹೊಸಮನಿ, ಬಹುಜನನಾಯಕ - ವಿಜಯಪುರ
14. ಮಾಲತೇಶ ಅಂಗೂರ, ಕೌರವ ಪತ್ರಿಕೆ - ಹಾವೇರಿ
15. ಕೆ.ಎಚ್. ಚಂದ್ರು, ಛಾಯಾಚಿತ್ರಗ್ರಾಹಕರು - ಮೈಸೂರು

* ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ-2016 -ಶಿವಮೊಗ್ಗ ಟೈಮ್ಸ್ : ಶಿವಮೊಗ್ಗ

* ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ - 2016 :
ಚಂದ್ರಶೇಖರ ಮೋರೆ- ಉದಯವಾಣಿ
ಶೀರ್ಷಿಕೆ: ಸಂಕಷ್ಟದಲ್ಲಿ ಕೌಜಲಗಿ ನಿಂಗಮ್ಮ ಪಾರಿಜಾತ ಕಂಪೆನಿ

* ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿ-2016
ಸಿ.ಜಿ. ರಾಜೀವ್ -ವಿಜಯ ಕರ್ನಾಟಕ
ಶೀರ್ಷಿಕೆ: ಎಣ್ಣೆ ನಮ್ಮೂರನ್ನೇ ನಾಶ ಮಾಡ್ತಾ ಇದೆ

* ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ ಅರಗಿಣಿ ಪ್ರಶಸ್ತಿ 2016
ಸ್ನೇಹಪ್ರಿಯ ನಾಗರಾಜ್

ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ
ಡಾ.ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ 2016
ಡಾ. ನಟರಾಜ್ ಹುಳಿಯಾರ್


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Media Academy awards 2016 announced. 15 journalists from various media houses, from various regions of the State chosen for the award said Academy president M Siddaraju, former reporter at PTI, Bengaluru. Specials awards for selected profound articles published in couple of news papers were also announced.
Please Wait while comments are loading...