ಕರ್ನಾಟಕದಿಂದ ಯಾತ್ರೆ ಹೋಗಲು ಆಧಾರ್ ಕಾರ್ಡ್ ಕಡ್ಡಾಯ

ಬೆಂಗಳೂರು, ಸೆಪ್ಟೆಂಬರ್ 01 : ಕರ್ನಾಟಕ ಸರ್ಕಾರ ದೇವರ ದರ್ಶನಕ್ಕೆ ಹೋಗುವವರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಸಬ್ಸಿಡಿ ಹಣ ದುರ್ಬಳಕೆ ತಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ.

ಆಗಸ್ಟ್ 17ರಂದು ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಚಾರ್ ಧಮ್ ಯಾತ್ರಿಗಳಿಗೆ ನೀಡಲಾಗುವ ಸಬ್ಸಿಡಿ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದ್ದು, ಆಧಾರ್ ಕಡ್ಡಾಯ ಎಂದು ಹೇಳಿದೆ.

 Karnataka made aadhaar mandatory for Char Dham yatra

ಬದ್ರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೇತ್ರಿ ತೀರ್ಥ ಯಾತ್ರೆಗೆ ಹೋಗುವವರು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ನೀಡಬೇಕು. ಈ ಯಾತ್ರಾರ್ಥಿಗಳಿಗೆ ಸರ್ಕಾರ 20 ಸಾವಿರ ರೂ. ಸಹಾಯಧವನ್ನು ನೀಡುತ್ತದೆ.

ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು 1000 ಜನರು ಸಬ್ಸಿಡಿ ಪಡೆಯುತ್ತಾರೆ. ಈ ವರ್ಷ ಯಾತ್ರಿಕರ ಸಂಖ್ಯೆ ಹೆಚ್ಚಾಗಲಿದೆ. ಸಬ್ಸಿಡಿ ಹಣದ ದುರುಪಯೋಗ ತಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ ಎಂದು ಮುಜರಾಯಿ ಇಲಾಖೆ ಹೇಳಿದೆ.

ಈ ಯಾತ್ರೆ ತೆರಳುವವರು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟ ಸಂಸ್ಥೆಗಳ ಮೂಲಕವೇ ಯಾತ್ರೆ ಕೈಗೊಳ್ಳಬೇಕು ಎಂಬ ನಿಯಮವಿದೆ.

ಯಾತ್ರೆ ಪೂರ್ಣಗೊಂಡ ಬಳಿಕ ಪ್ರವಾಸಿ ಸಂಸ್ಥೆಗಳಿಂದ ದೃಢೀಕೃತ ಪ್ರಮಾಣ ಪತ್ರ ಮತ್ತು ಯಾತ್ರಾ ಸ್ಥಳಗಳಲ್ಲಿ ಪಡೆದ ಪಿಲಿಗ್ರಿಮಿ ಕಾರ್ಡ್ ಅನ್ನು ಪಡೆದಿರಬೇಕು. ಯಾತ್ರೆ ಮುಗಿದ ಬಳಿಕ ನಾಲ್ಕು ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದರೆ ಸಬ್ಸಿಡಿ ಹಣ ಪಾವತಿಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+