ಲೋಕಾಯುಕ್ತರಿಗೆ ಚೂರಿ ಇರಿದಾತನ ಹಿಂದೆ ಸರಕಾರಿ ಅಧಿಕಾರಿಗಳ ಲಂಚದ ಕಥೆ!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 7: ಕರ್ನಾಟಕದ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಮೇಲೆ ಕಚೇರಿಯಲ್ಲೇ ಚಾಕುವಿನಿಂದ ಇರಿದವನ ಹಿನ್ನಲೆಯನ್ನು ಪೊಲೀಸರು ಕೆದಕಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ ಚೂರಿ ಹಾಕಿದವ ತೇಜರಾಜ್ ಶರ್ಮಾ ಎಂದು ತಿಳಿದು ಬಂದಿದೆ. ಈತ ರಾಜಸ್ಥಾನ ಮೂಲದವನಾಗಿದ್ದು ತುಮಕೂರಿನಲ್ಲಿ ವಾಸವಾಗಿದ್ದ ಎಂದು ಗೊತ್ತಾಗಿದೆ.

ಲೋಕಾಯುಕ್ತರಿಗೆ ಚೂರಿ ಇರಿತ: ಆರೋಪಿ ತೇಜ್ ರಾಜ್ ವಿರುದ್ಧ FIR

ತೇಜರಾಜ್ ಶರ್ಮ ಅಂಗಡಿಯೊಂದನ್ನು ಹೊಂದಿದ್ದು ಸರಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಪೂರೈಸುತ್ತಿದ್ದ. ಈತ ಲಂಚ ಕೇಳಿದ್ದಾರೆ ಎಂಬ ಕಾರಣಕ್ಕೆ ಕೆಲವು ಸರಕಾರಿ ಅಧಿಕಾರಿಗಳ ವಿರುದ್ಧ ಅಸಮಧಾನಗೊಂಡಿದ್ದ.

 ಲೋಕಾಯುಕ್ತರಿಗೆ ಮೂರು ದೂರು

ಲೋಕಾಯುಕ್ತರಿಗೆ ಮೂರು ದೂರು

ಪ್ರಾಥಮಿಕ ವಿಚಾರಣೆಯಲ್ಲಿ ಆತ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದು, ಲೋಕಾಯುಕ್ತರ ಬಳಿ ಕೆಲವು ಸರಕಾರಿ ಅಧಿಕಾರಿಗಳ ವಿರುದ್ಧ ಮೂರು ದೂರು ನೀಡಿದ್ದಾಗಿ ಹೇಳಿದ್ದಾನೆ. ಆದರೆ ಇದರ ವಿಚಾರಣೆ ನಡೆಸಿದ್ದ ಲೋಕಾಯುಕ್ತರು ಮೂರು ದೂರುಗಳನ್ನು ರದ್ದುಪಡಿಸಿದ್ದರು ಎಂದಿದ್ದಾನೆ.

ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?

 ಹತಾಶೆಯಿಂದ ಕೃತ್ಯ

ಹತಾಶೆಯಿಂದ ಕೃತ್ಯ

ಈ ಬಗ್ಗೆ ಆತ ಆಕ್ರೋಶಗೊಂಡಿದ್ದ ಮತ್ತು ಕೊನೆಯದಾಗಿ ಹತಾಶೆಯಿಂದ ಈ ಗಂಭೀರ ಕೃತ್ಯಕ್ಕೆ ಕೈ ಹಾಕಿದ್ದ. ತಾನು ಹತಾಶೆಗೊಂಡಿದ್ದು ಇದಕ್ಕೂ ಮೊದಲು ಈ ಕೃತ್ಯ ಎಸಗಲು ಯೋಚಿಸಿದ್ದೆ ಎಂದು ಶರ್ಮಾ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.

ತನ್ನ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲು ಆತ ಲೋಕಾಯುಕ್ತ ನ್ಯಾಯಮೂರ್ತಿಗಳ ಕಚೇರಿಗೆ ಇಂದು ಬಂದಿದ್ದ.

ಆತನಿಗೆ ಲೋಕಾಯುಕ್ತರ ಭೇಟಿಗೆ ಅವಕಾಶ ನೀಡಲಾಗಿತ್ತು ಮತ್ತು ಈ ಸಂಬಂಧ ಆತನಿಗೆ ಸ್ಲಿಪ್ ಕೂಡ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

 ನುಗ್ಗಿ ದಾಳಿ

ನುಗ್ಗಿ ದಾಳಿ

ಯಾವಾಗ ಕಚೇರಿ ಒಳಕ್ಕೆ ಆತನನ್ನು ಕರೆಯಲಾಯಿತೋ ಆಗ ಆತ ತನ್ನ ಚೂರಿ ತೆಗೆದು ನ್ಯಾ. ಶೆಟ್ಟಿ ಮೇಲೆ ಮೂರು ಬಾರಿ ಇರಿದಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿ ವಾಗ್ವಾದಗಳು ಏನಾದರೂ ನಡೆದಿವೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಚಾಕು ಇರಿಯುವ ವೇಳೆ ಲೋಕಾಯುಕ್ತರ ಗನ್ ಮ್ಯಾನ್ ಕೊಠಡಿಯಿಂದ ಹೊರಗಿದ್ದ.

 ಕೊಠಡಿ ಹೊರಗಿದ್ದ ಗನ್ ಮ್ಯಾನ್

ಕೊಠಡಿ ಹೊರಗಿದ್ದ ಗನ್ ಮ್ಯಾನ್

ನಿಯಮಗಳ ಪ್ರಕಾರ ಲೋಕಾಯುಕ್ತರಿಗೆ ಸಾರ್ವಜನಿಕರು ದೂರು ನೀಡಡುವ ವೇಳೆ ಅಲ್ಲಿ ಯಾರೂ ಉಪಸ್ಥಿತರಿರಬಾರದು. ಹೀಗಾಗಿ ಗನ್ ಮ್ಯಾನ್ ಹೊರಗಿದ್ದರು. ಈ ಘಟನೆ ಸಂಪೂರ್ಣ ಪೂರ್ವ ನಿಯೋಜಿತ ಎಂದು ಪೊಲೀಸರು ಹೇಳಿದ್ದಾರೆ. ಲೋಕಾಯುಕ್ತರನ್ನು ಕೊಲ್ಲುವ ಯೋಜನೆ ರೂಪಿಸಿಯೇ ಆತ ಬಂದಿದ್ದ ಎಂದು ಪೊಲೀಸರು ವಿಶ್ಲೇಷಿಸಿದ್ದಾರೆ.

ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಭದ್ರತಾ ವೈಫಲ್ಯವೇ ಕಾರಣ

 ಮೂರು ಬಾರಿ ಇರಿತ

ಮೂರು ಬಾರಿ ಇರಿತ

ಘಟನೆ ಬಗ್ಗೆ ವಿವರ ನೀಡಿರುವ ಪ್ರತ್ಯಕ್ಷದರ್ಶಿ ಜೇ ಅನ್ನಾ, "ಓರ್ವ ವ್ಯಕ್ತಿ ಲೋಕಾಯುಕ್ತರನ್ನು ಕೊಲ್ಲಲು ಯತ್ನಿಸಿದ. ಆತ ಚೂರಿಯಿಂದ ಮೂರು ಬಾರಿ ನ್ಯಾಯಮೂರ್ತಿಗಳಿಗೆ ಇರಿದ. ನಂತರ ಅವರು ನೆಲಕ್ಕೆ ಬಿದ್ದರು. ಸಿದ್ದರಾಮಯ್ಯ ಸರಕಾರ ನಮಗೆ ಯಾವ ರೀತಿಯ ಭದ್ರತೆ ನೀಡಿದೆ ಎಂಬುದನ್ನು ನೀವು ನೋಡಬಹುದು. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ," ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The motive behind the stabbing of Lokayukta of Karnataka Justice P Vishwanath Shetty has been ascertained following initial investigations by the police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ