ಕರ್ನಾಟಕದಲ್ಲಿ ಆಗಸ್ಟರಷ್ಟೊತ್ತಿಗೆ ಮೂರು ಪಟ್ಟು ಹೆಚ್ಚಲಿದೆ ಕೊರೊನಾ ಸೋಂಕು
ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಆಗಸ್ಟ್ 15ರ ಹೊತ್ತಿಗೆ ಸಕ್ರಿಯ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ 25 ಸಾವಿರ ದಾಟಲಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯ ಶೇ.4ರಷ್ಟು ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರಿಂದ ಕೊರೊನಾ ಸೋಂಕನ್ನು ಕಡಿಮೆ ಮಾಡಬಹುದು.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳೆಷ್ಟು, ಬಲಿಯಾದವರೆಷ್ಟು?
ಕೊರೊನಾ ಸೋಂಕಿತರ ಹೆಚ್ಚಳ ಸಂಖ್ಯೆ ಶೇ.3ರಷ್ಟಿದ್ದರೆ ಆಗಸ್ಟ್ ಅಷ್ಟೊತ್ತಿಗೆ 17 ಸಾವಿರವಾಗಲಿದೆ, ಆದರೆ ಶೇ.4ರಷ್ಟು ಸೋಂಕಿತರು ಹೆಚ್ಚಳವಾಗುತ್ತಿರುವ ಕಾರಣ ಆಗಸ್ಟ್ 15ರಷ್ಟೊತ್ತಿಗೆ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ದಾಟುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಈಗ 9,150 ಕೊರೊನಾ ಸೋಂಕಿತ ಪ್ರಕರಣಗಳಿವೆ. 3,391 ಪ್ರಕರಣಗಳು ಸಕ್ರಿಯವಾಗಿವೆ. 137 ಮಂದಿ ಮೃತಪಟ್ಟಿದ್ದಾರೆ. ಭಾನುವಾರದ ಕೊರೊನಾ ಸೋಂಕಿತರ ಪ್ರಮಾಣವನ್ನು ಗಮನಿಸಿದರೆ ಶೇ.4ರಷ್ಟು ಹೆಚ್ಚಾಗಿದೆ.
ಹೀಗೆಯೇ ಮುಂದುವರೆದರೆ ಒಂದೂವರೆ ತಿಂಗಳಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಲಿದೆ ಎಂದು ವಾರ್ ರೂಂ ಎಚ್ಚರಿಕೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಎಲ್ಲಾ ಸೋಂಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಬೇಕಿದೆ. ಹಾಗೆಯೇ ಬೇರೆ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್ ವಿಧಿಸಬೇಕು.
ಜನರ ಪಾತ್ರವೂ ಕೂಡ ಪ್ರಮುಖವಾಗಿದ್ದು, ಮಾಸ್ಕ್ ಧರಿಸುವುದು, ಪದೇ ಪದೇ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಕೊವಿಡ್ 19 ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.