ಕರ್ನಾಟಕ ವಿಧಾನಪರಿಷತ್ ಚುನಾವಣೆ ದಿನಾಂಕ, ವೇಳಾಪಟ್ಟಿ
ಬೆಂಗಳೂರು, ಜೂನ್ 9: ಕರ್ನಾಟಕದ ವಿಧಾನ ಪರಿಷತ್ ಚುನಾವಣೆ 2020 ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಮಂಗಳವಾರ(ಜೂನ್ 7) ದಂದು ಪ್ರಕಟಿಸಿದೆ. ರಾಜ್ಯದ 7 ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 30, 2020ರಂದು ಅವಧಿ ಮುಕ್ತಾಯಗೊಳ್ಳಲಿದ್ದು, ಈ 7 ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಸಲಾಗುತ್ತದೆ.
Recommended Video
ಜೂನ್ 30, 2020ರಂದು ನಸೀರ್ ಅಹ್ಮದ್, ಜಯಮ್ಮ, ಎನ್ ಎಸ್ ಬೋಷೆರಾಜು, ಎಚ್ ಎಂ ರೇವಣ್ಣ, ಟಿ ಎ ಶರವಣ ಮತ್ತು ಡಿ ಯು ಮಲ್ಲಿಕಾರ್ಜುನ್ ಅವರ ವಿಧಾನ ಪರಿಷತ್ ಕಾಲಾವಧಿ ಮುಕ್ತಾಯಗೊಳ್ಳಲಿದೆ.

ಈ 7 ವಿಧಾನ ಪರಿಷತ್ ಸ್ಥಾನಗಳಿಗೆ ಜೂನ್ 29ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬರಲಿದೆ.
ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ವೇಳಾಪಟ್ಟಿ:
* ಜೂನ್ 11, 2020: ಚುನಾವಣಾ ಪ್ರಕ್ರಿಯೆ ಆರಂಭ
* ಜೂನ್ 18 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ.
* ಜೂನ್ 19 ನಾಮಪತ್ರಗಳ ಪರಿಶೀಲನೆ
* ಜೂನ್ 22 ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ
* ಜೂನ್ 19: ಮತದಾನ, ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ
* ಜೂನ್ 19: ಸಂಜೆ 5ರ ನಂತರ ಮತ ಎಣಿಕೆ ಫಲಿತಾಂಶ














Click it and Unblock the Notifications