ಪರಿಷತ್ ಫಲಿತಾಂಶ: ಜೆಡಿಎಸ್‌ಗೆ ನಷ್ಟ, ಅರಳಿದ ಕಮಲ

Written By:
Subscribe to Oneindia Kannada

ಬೆಂಗಳೂರು, ಜೂನ್ 10 : ರಾಜ್ಯದ ವಿಧಾನಪರಿಷತ್ ಗೆ ನಡೆದ ಚುನಾವಣೆ ಫಲಿತಾಂಶ ಫಲಿತಾಂಶ ಪ್ರಕಟವಾಗಿದೆ. ವಿಧಾನಸಭೆಯ ಸದಸ್ಯರು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಬೆಳಗ್ಗೆ ಮತದಾನ ಮಾಡಿದ್ದು ಸಂಜೆ ಫಲಿತಾಂಶ ಪ್ರಕಟವಾಗಿದೆ.

ನಿರೀಕ್ಷೆಯಂತೆ ಕಾಂಗ್ರೆಸ್‌ ನ, ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ ಜಯಗಳಿಸಿದ್ದಾರೆ. ಬಿಜೆಪಿಯ ವಿ.ಸೋಮಣ್ಣ, ಲೆಹರ್ ಸಿಂಗ್ ಅವರಿಗೂ ವಿಜಯಲಕ್ಷ್ಮೀ ಒಲಿದಿದೆ. ಜೆಡಿಎಸ್‌ ನಾರಾಯಣ ಸ್ವಾಮಿ ಗೆಲುವಿನ ನಗೆ ಬೀರಿದ್ದು ಮತ್ತೊಬ್ಬ ಅಭ್ಯರ್ಥಿ ಡಾ.ವೆಂಕಟಪತಿ ಅವರಿಗೆ ಸೋಲಾಗಿದೆ.[ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ ಜಮೀರ್ ಅಹಮದ್]

karnataka

ಬಬಿಜೆಪಿಯ ಎರಡನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ ಜಯವಾಗಿದೆ. ಲೆಹರ್ ಸಿಂಗ್ ಮತ್ತು ಜೆಡಿಎಸ್ ನ ಡಾ. ವೆಂಕಟಪತಿ ನಡುವೆ ಸ್ಪರ್ಧೆ ಇತ್ತು. ಆದರೆ ಜೆಡಿಎಸ್ ನ 5 ಶಾಸಕರು ವಿಪ್ ಉಲ್ಲಂಘನೆ ಮಾಡಿ ಅಡ್ಡ ಮತದಾನ ಮಾಡಿರುವುದರ ಪರಿಣಾಮ ಜೆಡಿಎಸ್ ಗೆ ಸೋಲಾಗಿದೆ.[ಭಿನ್ನಮತೀಯರ ಜೊತೆ ಮಾತುಕತೆ, ಬಾಗಿಲು ಮುಚ್ಚಿದ ಎಚ್ಡಿಕೆ]

ಕಾಂಗ್ರೆಸ್ ಗೆ ಜಯ ನಿರೀಕ್ಷಿತ
ಕಾಂಗ್ರೆಸ್ ನ ನಾಲ್ಕು ಅಭ್ಯರ್ಥಿಗಳಿಗೆ ಜಯ ನಿರೀಕ್ಷಿತವಾಗಿತ್ತು. ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ ಜಯಗಳಿಸಿದ್ದು ಮೇಲ್ಮನೆ ಪ್ರವೇಶ ಮಾಡಿದ್ದಾರೆ.[ವಿಧಾನಪರಿಷತ್ ಸದಸ್ಯರು ಹೇಗೆ ಆಯ್ಕೆಯಾಗುತ್ತಾರೆ?]

ಬಿಜೆಪಿ ಕೈ ಹಿಡಿದ ಪಕ್ಷೇತರರು
ಪಕ್ಷೇತರ ಸದಸ್ಯರು ಬಿಜೆಪಿಯ ಪರವಾಗಿ ನಿಂತ ಕಾರಣ ಬಿಜೆಪಿಯ ಲೆಹರ್ ಸಿಂಗ್ ಅವರಿಗೂ ಗೆಲುವು ಸಿಕ್ಕಿತು. ಕಾಂಗ್ರೆಸ್ ಶಾಸಕರ ದ್ವಿತೀಯ ಪ್ರಾಶಸ್ಯದ ಮತಗಳು ಲೆಹರ್ ಸಿಂಗ್ ಅವರಿಗೆ ದಕ್ಕಿದೆ.

ಜೆಡಿಎಸ್ ಗೆ ಕೈ ಕೊಟ್ಟ ಶಾಸಕರು
ಜೆಡಿಎಸ್ ನ ಐದು ಶಾಸಕರು ಅಡ್ಡ ಮತದಾನ ಮಾಡಿದ್ದು ಪಕ್ಷಕ್ಕೆ ಮುಳುವಾಗಿ ಪರಿಣಮಿಸಿದೆ. ಪಕ್ಷದೊಳಗೆ ಹೊಗೆಯಾಡುತ್ತಿದ್ದ ಭಿನ್ನಾಭಿಪ್ರಾಯ ಮತದಾನದ ಮೂಲಕ ಸ್ಫೋಟಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Legislative Council election result announced on Friday evening 10, 2016. Karnataka assembly members vote to elect 7 members for Legislative Council.
Please Wait while comments are loading...