Breaking; ವಿಧಾನ ಪರಿಷತ್‌ನ 25 ಸ್ಥಾನಕ್ಕೆ ಚುನಾವಣೆ ಘೋಷಣೆ
ಬೆಂಗಳೂರು, ನವೆಂಬರ್ 09; ಕರ್ನಾಟಕ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಮಂಗಳವಾರ ಚುನಾವಣಾ ಆಯೋಗ 25 ಸ್ಥಾನಗಳ ಚುನಾವಣೆಗೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ಡಿಸೆಂಬರ್ 10ರಂದು ಮತದಾನ ನಡೆಯಲಿದೆ.
ವಿಧಾನ ಪರಿಷತ್ ಚುನಾವಣೆ; ಸಮಿತಿ ರಚನೆ ಮಾಡಿದ ಬಿಜೆಪಿ
ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 23 ಕೊನೆಯ ದಿನ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಬಿಬಿಎಂಪಿಗೆ ಶೀಘ್ರದಲ್ಲಿಯೇ ಚುನಾವಣೆ ಘೋಷಣೆ?: ಬಿಜೆಪಿಯಲ್ಲಿ ಸಂಚಲನ
ಡಿಸೆಂಬರ್ 10ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಡಿಸೆಂಬರ್ 14ರ ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಡಿಸೆಂಬರ್ 16ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚುನಾವಣೆ ನಡೆಯುವ ಜಿಲ್ಲೆಗಳು; ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಸದಸ್ಯರ ಅವಧಿ ಪೂರ್ಣಗೊಂಡಿದೆ. ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಉಪ ಚುನಾವಣೆ ಫಲಿತಾಂಶ: ಅಕ್ಕಿಆಲೂರಿನ ಅಳಿಯನ ಮಾತಿಗೆ ಜನ ಮರುಳಾಗಿಲ್ಲ: ಸಿದ್ದರಾಮಯ್ಯ
ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಸದಸ್ಯರ ಹೆಸರು; ಬೀದರ್ (ವಿಜಯ್ ಸಿಂಗ್), ಕಲಬುರಗಿ (ಬಿ. ಜಿ. ಪಾಟೀಲ್), ಬಿಜಯಪುರ ( ಎಸ್. ಆರ್. ಪಾಟೀಲ್, ಸುನೀಲ್ ಗೌಡ ಪಾಟೀಲ್), ಬೆಳಗಾವಿ (ಮಹಾಂತೇಶ್ ಕವಟಗಿ, ವಿವೇಕ್‌ರಾವ್ ವಸಂತ್‌ರಾವ್ ಪಾಟೀಲ್), ಉತ್ತರ ಕನ್ನಡ (ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಮಣ).
ಧಾರವಾಡ (ಪ್ರದೀಪ್ ಶೆಟ್ಟರ್, ಮಾನೆ ಶ್ರೀನಿವಾಸ್), ರಾಯಚೂರು (ಬಸವರಾಜ ಪಾಟೀಲ್ ಇಟಗಿ), ಬಳ್ಳಾರಿ (ಕೆ. ಸಿ. ಕೊಂಡಯ್ಯ), ಚಿತ್ರದುರ್ಗ (ಜಿ. ರಘು ಆಚಾರ್), ಶಿವಮೊಗ್ಗ (ಆರ್. ಪ್ರಸನ್ನ ಕುಮಾರ್), ದಕ್ಷಿಣ ಕನ್ನಡ (ಕೆ. ಪ್ರತಾಪ್ ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ).
ಚಿಕ್ಕಮಗಳೂರು (ಎಂ. ಕೆ. ಪ್ರಾಣೇಶ್), ಹಾಸನ (ಎಂ. ಎ. ಗೋಪಾಲಸ್ವಾಮಿ), ತುಮಕೂರು (ಬೆಮಲ್ ಕಾಂತರಾಜ್), ಮಂಡ್ಯ (ಎನ್. ಅಪ್ಪಾಜಿ ಗೌಡ), ಬೆಂಗಳೂರು (ಎಂ. ನಾರಾಯಣಸ್ವಾಮಿ), ಬೆಂಗಳೂರು ಗ್ರಾಮಾಂತರ (ಎಸ್. ರವಿ), ಕೋಲಾರ (ಸಿ. ಆರ್. ಮನೋಹರ್), ಕೊಡಗು ( ಸುನೀಲ್ ಸುಬ್ರಮಣಿ ಎಂ. ಪಿ.), ಮೈಸೂರು (ಆರ್. ಧರ್ಮಸೇನಾ, ಸಂದೇಶ್ ನಾಗರಾಜ್).
ಚುನಾವಣೆ ವೇಳಾಪಟ್ಟಿ