ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಟಿಕೆಟ್ ಪಡೆದವರ ಪಟ್ಟಿ
ಬೆಂಗಳೂರು, ಡಿಸೆಂಬರ್. 04: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಪಟ್ಟಿಯನ್ನು ಅಂತಿಮ ಮಾಡಿದೆ. ದೆಹಲಿಗೆ ತೆರಳಿ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅಂತಿಮ ಪಟ್ಟಿಗೆ ಅಂಕಿತ ಪಡೆದುಕೊಂಡು ಬಂದಿದ್ದಾರೆ.
20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಯ್ಕೆಮಾಡಿರುವ ಕಾಂಗ್ರೆಸ್ ಗೆ ಕೋಲಾರ ಕ್ಷೇತ್ರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಸ್ಥಳೀಯ ಹಿರಿಯ ನಾಯಕರ ನಡುವಿನ ಪೈಪೋಟಿಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಗೊಂದಲ ಏರ್ಪಟ್ಟಿದೆ.[ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮುರಿದು ಬಿದ್ದಿದ್ದು ಯಾಕೆ?]

ಬಳ್ಳಾರಿಯಲ್ಲಿ ಕೆ.ಸಿ.ಕೊಂಡಯ್ಯಗೆ ಅಂತಿಮವಾಗಿ ಟಿಕೆಟ್ ನೀಡಲಾಗಿದೆ. ಕೋಲಾರದಲ್ಲಿ ಸಂಸದರಾದ ಮುನಿಯಪ್ಪ ಮತ್ತು ವೀರಪ್ಪ ಮೊಯ್ಲಿಯವರ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಮಂಡ್ಯದಲ್ಲಿ ಕೆ.ಎಲ್.ಶಿವರಾಮೇಗೌಡ, ಕೊಡಗಿನಲ್ಲಿ ಚಂದ್ರಮೌಳಿಯವರನ್ನು ಕಾಂಗ್ರೆಸ್ ಕಣಕ್ಕಿಳಿಸಿರುವುದು ಹುಬ್ಬೇರಿಸುವಂತೆ ಮಾಡಿದೆ.
ಕೈ ಅಭ್ಯರ್ಥಿಗಳ ಪಟ್ಟಿ ನೋಡ್ಕೊಂಡು ಬನ್ನಿಬೆಂಗಳೂರು- ನಾರಾಯಣಸ್ವಾಮಿ
ಬೆಂಗಳೂರು ಗ್ರಾಮಾಂತರ- ರವಿ
ಮೈಸೂರು- ಧರ್ಮಸೇನಾ
ಬೀದರ್- ವಿಜಯ್ ಸಿಂಗ್
ಕಲಬುರಗಿ- ಅಲ್ಲಮಪ್ರಭು ಪಾಟೀಲ್
ಧಾರವಾಡ- ಶ್ರೀನಿವಾಸ ಮಾನೆ
ಧಾರವಾಡ- ನಾಗರಾಜ ಛಬ್ಬಿ
ಚಿತ್ರದುರ್ಗ- ರಘು ಆಚಾರ್
ಮಂಡ್ಯ- ಶಿವರಾಮಗೌಡ
ವಿಜಯಪುರ-ಎಸ್.ಆರ್.ಪಾಟೀಲ್
ಕೊಡಗು- ಚಂದ್ರ ಮೌಳಿ
ಬೆಳಗಾವಿ-ವೀರಕುಮಾರ್ ಪಾಟೀಲ್
ಉತ್ತರ ಕನ್ನಡ- ಶ್ರೀಕಾಂತ್ ಘೋಟ್ನೇಕರ್
ಶಿವಮೊಗ್ಗ- ಪ್ರಸನ್ನಕುಮಾರ್
ಚಿಕ್ಕಮಗಳೂರು- ಗಾಯತ್ರಿ ಶಾಂತೇಗೌಡ
ಹಾಸನ- ಗೋಪಾಲಸ್ವಾಮಿ
ದಕ್ಷಿಣ ಕನ್ನಡ- ಪ್ರತಾಪ್ ಚಂದ್ರ ಶೆಟ್ಟಿ
ತುಮಕೂರು- ಆರ್.ರಾಜೇಂದ್ರ
ರಾಯಚೂರು - ಇಟಗಿ ಬಸವರಾಜು
ಬಳ್ಳಾರಿ - ಕೆ.ಸಿ.ಕೊಂಡಯ್ಯ












Click it and Unblock the Notifications