Get Updates
Get notified of breaking news, exclusive insights, and must-see stories!

ಕರ್ನಾಟಕದ ಹೆಮ್ಮೆ KSRTCಗೆ 9 ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಗರಿ

ಬೆಂಗಳೂರು, ಸೆಪ್ಟಂಬರ್ 28: ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ಭಾರತೋಯ ಸಾರ್ವಜನಿಕ ಸಂಪರ್ಕ ಮಂಡಳಿಯ (PRCI) ವತಿಯಿಂದ ನಡೆದ 15ನೇ ವಿಶ್ವ ಸಂವಹನ ಸಮ್ಮೇಳನ‌ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2025 ರ ಕಾರ್ಯಕ್ರಮದಲ್ಲಿ 9 ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದೆ.

KSRTC ಡಿಜಿಟಲ್ ಮೀಡಿಯಾ ಇನೋವೇಶನ್ ಮತ್ತು ಹೌಸ್ ಜರ್ನಲ್ ಪ್ರಿಂಟ್ (ಪ್ರಾದೇಶಿಕ) ವಿಭಾಗದಲ್ಲಿ ಚಿನ್ನದ ಪದಕ, *ಹೆಲ್ತ್ ಕೇರ್ ಕಮ್ಯುನಿಕೇಶನ್ ಫಿಲ್ಮ್ಸ್ ವಿಭಾಗದಲ್ಲಿ ಬೆಳ್ಳಿ ಪದಕ, ವಿಶಿಷ್ಟ ಮಾನವ ಸಂಪನ್ಮೂಲ (HR) ಕಾರ್ಯಕ್ರಮಕ್ಕಾಗಿ ಕಂಚಿನ ಪದಕ, ಗ್ರಾಹಕ ಸೇವಾ ಶ್ರೇಷ್ಠತೆ,ಬ್ಯಾಂಡಿಂಗ್, ವೆಬ್‌ಸೈಟ್ ಮತ್ತು ಮೈಕ್ರೋಸೈಟ್, ಕಾರ್ಪೊರೇಟ್ ಫಿಲ್ಮ್ಸ್, ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಆಂತರಿಕ ಕಮ್ಯುನಿಕೇಶನ್ ಕ್ಯಾಂಪೇನ್ ವಿಭಾಗಗಳಲ್ಲಿ ಪ್ರಶಸ್ತಿಗಳಿಗೆ ಭಾಜನವಾಗಿದೆ.

Karnataka KSRTC Wins 9 National Awards at PRCI Excellence 2025 Know more

ಈ ಸಾಧನೆಗಳು ನಿಗಮವು ಆಧುನಿಕ ತಂತ್ರಜ್ಞಾನ, ನವೀನ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಕಾರ್ಯಾಚರಣೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದಕ್ಕೆ ಸಾಕ್ಷಿಯಾಗಿದೆ. ಶನಿವಾರ ಗೋವಾದ ದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಯಿತು.

ಗೋವಾ ವಿಧಾನಸಭೆ ವಿಧಾನಸಭಾ‌ಧ್ಯಕ್ಷ ಡಾ. ಗಣೇಶ್ ಗಾಂವ್ಕರ್, ನಟಿ ಮತ್ತು ಗಾಯಕಿ ಕುಮಾರಿ ಎಸ್ಟರ್ ವ್ಯಾಲೆರಿ ನೊರೊನ್ಹಾ, ನಟ ಮತ್ತು ರೂಪದರ್ಶಿ ಮಿಲಿನ್ ತೆಂಡೂಲ್ಕರ್, ಸಮಾಜ ಸೇವಕ ಎಂ ಬಿ ಜಯರಾಮ್, ಪಿ ಆರ್ ಸಿ ಐ ಮುಖ್ಯಸ್ಥರು ಹಾಗೂ ಅಧ್ಯಕ್ಷರು ಪ್ರಶಸ್ತಿ ಪ್ರದಾನ‌ ಮಾಡಿದರು. KSRTC ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ, ಬಸವರಾಜು ಅವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಆಯುಧ ಪೂಜೆಗೆ ಪ್ರತಿ ಬಸ್‌ಗೆ 250 ರೂಪಾಯಿ

ರಾಜ್ಯಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ದೇವರ ಪೂಜೆ ಜೊತೆಗೆ ಆಯುಧ ಪೂಜೆಯಲ್ಲಿ ಶ್ರದ್ಧಾ ಭಕ್ತಿಯಿಂದ ಮಾಲಾಗುತ್ತದೆ. ಆಯುಧ ಪೂಜೆ ವೇಳೆ ಮನೆಯ ವಾಹನ, ಅಂಗಡಿ ಮುಂಗಟ್ಟು ಪೂಜಿಸುವಂತೆ ರಾಜ್ಯದಲ್ಲಿ ಸಾರ್ವಜನಿಕರ ಸೇವೆ ನೀಡುವ ಸಾವಿರಾರು ಬಸ್‌ಗಳ ಪೂಜೆ ಸಹ ಸಾರಿಗೆ ಇಲಾಖೆ, ಸಿಬ್ಬಂದಿ ನಡೆಯುತ್ತದೆ. ಹೀಗೆ ಪೂಜಿಸಲು ಪ್ರತಿ ಬಸ್‌ಗಳಿಗೆ ಇಂತಿಷ್ಟು ಹಣ ನೀಡಲಾಗುತ್ತದೆ.

ಈ ಬಾರಿ ಆಯುಧ ಪೂಜೆಗೆ ರಾಜ್ಯ ಸಾರಿಗೆ ಇಲಾಖೆ ಈ ಹಿಂದೆಯಿಂದ ನೀಡಲಾಗುತ್ತಿದ್ದ 100 ರೂಪಾಯಿ ಬದಲಾಗಿ 2024 ರಿಂದಲೇ ಹೆಚ್ಚಿಸಿದಂತೆ 250 ರೂಪಾಯಿ ನೀಡಲಾಗುತ್ತಿದೆ. ಆದರೆ ಈ‌ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಆಯುಧಪೂಜೆಗೆ ಪ್ರತಿ ಬಸ್ಸಿಗೆ 150 ರೂಪಾಯಿ ಎಂದು ವರದಿ ಮಾಡಿವೆ. ಅಷ್ಟು ಕಡಿಮೆ ಹಣ 2024 ರಿಂದಲೇ ನೀಡದೇ ಹೆಚ್ಚಿಸಿದ 250 ರೂಪಾಯಿ ಒದಗಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ದಸರಾ ಹಬ್ಬದಂತೆ ಪ್ರತಿ ವರ್ಷವು ಆಯುಧಪೂಜೆಗೆ 2008 ರವರೆಗೂ ತಲಾ ಒಂದು ಬಸ್ಸಿಗೆ 10 ರೂಪಾಯಿ ನೀಡಲಾಗುತ್ತಿತ್ತು,‌ ಇದನ್ನು 2009 ರಲ್ಲಿ ಪ್ರತಿ ಬಸ್ಸಿಗೆ ರೂ 30 ಕ್ಕೆ ಏರಿಕೆ ಮಾಡಲಾಯಿತು. ನಂತರ 2016 ರಲ್ಲಿ ಪ್ರತಿ ಬಸ್ಸಿಗೆ 50 ರೂಪಾಯಿಗೆ ಏರಿಕೆ ಮಾಡಲಾಯಿತು. ತದನಂತರ 2017 ರಲ್ಲಿ ಪ್ರತಿ‌ ಬಸ್ಸಿಗೆ 100 ರೂಪಾಯಿಗೆ ಏರಿಕೆ ಮಾಡಿದ್ದ, ಕಳೆದ ವರ್ಷ 2024ರಲ್ಲಿ ಆ ಪೂಜಾ ಹಣವನ್ನು 250 ರೂಪಾಯಿಗೆ ಏರಿಕೆ ಮಾಡಲಾಯಿತು ಎಂದು ಸಾರಿಗೆ ಇಲಾಖೆಯು ಕಾಲ ಕಾಲಕ್ಕೆ ನೋಡಿಕೊಂಡು ಆಯುಧ ಪೂಜೆ ಹಣವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಮುಂದುವರೆದು, 2023 ರವರೆಗೂ ಪ್ರತಿ‌ ಬಸ್ಸಿಗೆ ನೀಡುತ್ತಿದ್ದ ರೂ100 ಅನ್ನು 2024 ರಿಂದ ರೂ.250 ಕ್ಕೆ ಹೆಚ್ಚಿಸಲಾಗಿದೆ. ಘಟಕಗಳಲ್ಲಿನ ಬಸ್ಸುಗಳನ್ನು ಒಟ್ಟಾರೆಯಾಗಿ ಪರಿಗಣಿಸಿ ಪ್ರತಿಯೊಂದು ಘಟಕಕ್ಕೆ ಪ್ರತಿ ಬಸ್ ಗೆ ಅಂದರೆ‌ ಕನಿಷ್ಠ 100 ಬಸ್ಸುಗಳಿರುತ್ತವೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+