ಚುನಾವಣೆ ವೇಳೆ ಪರಿಣಾಮ ಬೀರಬಲ್ಲ ಮಠಮಾನ್ಯ, ಸ್ವಾಮೀಜಿಗಳು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 13 : ಚುನಾವಣೆ ಪರಿಣಾಮ ಬೀರಬಲ್ಲ ಮಠಮಾನ್ಯಗಳು, ಸ್ವಾಮೀಜಿಗಳ ಓಲೈಕೆಯಲ್ಲಿ ಆರೆಸ್ಸೆಸ್, ಬಿಜೆಪಿ ಅಲ್ಲದೆ ಕಾಂಗ್ರೆಸ್ ಕೂಡಾ ತೊಡಗಿದೆ. ಖಾವಿಧಾರಿಗಳನ್ನು ಒಲಿಸಿಕೊಂಡು ಮಠದ ಭಕ್ತರ ಓಟುಗಳನ್ನು ಗಿಟ್ಟಿಸಿಕೊಳ್ಳುವುದು ಪಕ್ಷಗಳ ಮುಖ್ಯ ಉದ್ದೇಶ.

ಉತ್ತರ ಪ್ರದೇಶದಲ್ಲಿ ಗೋರಖ್‌ ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಅವರು ದಿಗ್ವಿಜಯ ಸಾಧಿಸಿರುವುದು ಈಗ ಇತಿಹಾಸ. ಕರ್ನಾಟಕದಲ್ಲೂ ಇದೇ ರೀತಿ ಬದಲಾವಣೆಯ ಅಲೆ ತರಲು ಬಿಜೆಪಿ ಯತ್ನಿಸುತ್ತಿದೆ. ಮತ ಬ್ಯಾಂಕಿಗೆ ಅನುಗುಣವಾಗಿ ಎಲ್ಲಾ ಜಾತಿ ವರ್ಗದ ಮಠಾಧೀಶರಿಗೆ ಗಾಳ ಹಾಕಲಾಗುತ್ತಿದೆ. ಮುಖ್ಯವಾಗಿ ಸಿಎಂಸಿದ್ದರಾಮಯ್ಯನವರ ಅಹಿಂದ ಮತ ಬ್ಯಾಂಕ್‌ ಒಡೆಯುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಚುನಾವಣಾ ಪೂರ್ವː ಕಾವಿ-ಖಾದಿಧಾರಿಗಳ ನಡುವೆ ಮೈತ್ರಿ ಏನು? ಎತ್ತ?

ಸದ್ಯಕ್ಕೆ ಶಿರೂರಿನ ಲಕ್ಷ್ಮಿವರ ತೀರ್ಥ ಸ್ವಾಮೀಜಿಗಳು ಹಾಗೂ ಬೀಳಗಿಯ ರಾಮಾರೋಢ ಮಠದ ಸ್ವಾಮೀಜಿಗಳು ಮಾತ್ರ ಚುನಾವಣೆ ಅಖಾಡಕ್ಕೆ ಇಳಿಯಲು ಸಿದ್ಧ ಎಂದು ಘೋಷಿಸಿದ್ದಾರೆ.

Karnataka Influential Seers, Swamijis interested enter Politics

ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ಚುನಾವಣೆ ಅಖಾಡಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ. ಸ್ವಾಮೀಜಿಗಳಿಗೆ ಅರೆಸ್ಸೆಸ್ ಹಾಗೂ ಬಿಜೆಪಿ ಮುಖಂಡರ ಬೆಂಬಲ ಸಿಕ್ಕಿದೆ.

ಸಿಎಂ ಸಿದ್ದರಾಮಯ್ಯ ವರುಣಾ ಬದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ. ಸಿದ್ದರಾಮಯ್ಯ ಅವರ ವಿರುದ್ಧ ಡಾ. ವಿದ್ಯಾಭೂಷಣರನ್ನು ಕಣಕ್ಕಿಳಿಸಲು ಬಿಜೆಪಿ ರಣತಂತ್ರ ಹೆಣೆದಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸುದ್ದಿಯನ್ನು ಅಲ್ಲಗೆಳೆದಿರುವ ವಿದ್ಯಾಭೂಷಣರು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದಿದ್ದಾರೆ.

ಮಿಕ್ಕಂತೆ ಯಾರೆಲ್ಲ ಸ್ವಾಮೀಜಿಗಳು ಆಸಕ್ತರಾಗಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ.

* ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ
* ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
* ಧಾರವಾಡದ ಗುರು ಬಸವ ಮಹಾ ಮನೆಯ ಬಸವಾನಂದ ಸ್ವಾಮೀಜಿ
* ಮಂಡ್ಯ ಜಿಲ್ಲೆಯ ಮೇಲುಕೋಟೆಯ ದೇವಿ ಗ್ರಾಮದ ಮಾರ್ಕಂಡೇಶ್ವರ
* ಮಹಾಂತ ಶಿವಯೋಗಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
* ಬಾಗಲಕೋಟೆಯ ರಾಮರುದ್ರ ಸ್ವಾಮೀಜಿ
* ಹಾವೇರಿಯ ಶರಣ ಬಸವೇಶ್ವರ ಮಠದ ಪ್ರಣವನಂದ ಸ್ವಾಮೀಜಿ

* ಬಾಗಲಕೋಟೆಯ ಬೀಳಗಿಯ ರಾಮರೋಢ ಮಠದ ಸ್ವಾಮೀಜಿಗಳು
* ಶಿರೂರಿನ ಲಕ್ಷ್ಮಿವರ ತೀರ್ಥ ಸ್ವಾಮೀಜಿಗಳು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Influential Seers, Swamijis are directly and indirectly entering political arena during the Karnataka Assembly Elections 2018. Here is the list of seer who are interested and who rejected the offer.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ