ಕರ್ನಾಟಕದಲ್ಲಿ ಮೆಗಾ ಹೂಡಿಕೆ: ₹1,000 ಕೋಟಿ ಹೂಡಿಕೆ, 1,200 ಮಂದಿಗೆ ಕೆಲಸ ನೀಡಲಿರುವ ವಿಪ್ರೋ

ಬೆಂಗಳೂರು: ಹೈಡ್ರಾಲಿಕ್ ಪಂಪ್ ತಯಾರಿಕೆಯಲ್ಲಿ ಹೆಸರಾಗಿರುವ ವಿಪ್ರೋ-ಕವಾಸಕಿ ಪ್ರಿಸಿಷನ್ ಮಷಿನರಿ ಕಂಪನಿ ಕರ್ನಾಟಕದಲ್ಲಿ ಬೃಹತ್ ಹೂಡಿಕೆಗೆ ಮುಂದಾಗಿದೆ. ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ಸುಮಾರು ₹1,000 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ.

ಈ ಯೋಜನೆಯಿಂದ ಸುಮಾರು 1,200 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾದ ಕಂಪನಿಯ ಸಿಇಒ ಮಿನೋರು ಹತ್ಸುದ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಸಚಿವ ಎಂ.ಬಿ. ಪಾಟೀಲ ಅವರು ಮಾತುಕತೆ ನಡೆಸಿದರು.

Karnataka industrial development Wipro-Kawasaki to Invest 1 000 Crore in Harohalli Create 1 200 Jobs

Karnataka industrial development:30 ಎಕರೆ ಭೂಮಿಗೆ ಬೇಡಿಕೆ

ಈ ಕುರಿತು ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಜಪಾನ್ ಮೂಲದ ಕವಾಸಕಿ ಕಂಪನಿ ವಿಪ್ರೋ ಜೊತೆಗೂಡಿ ಹೊಸ ಘಟಕಕ್ಕಾಗಿ ಸುಮಾರು 30 ಎಕರೆ ಭೂಮಿಯನ್ನು ಕೇಳಿದೆ . ಕಂಪನಿಗೆ ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನೂತನ ಉತ್ಪಾದನಾ ಘಟಕವು ಮುಂದಿನ ಒಂದು ವರ್ಷದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಹೈಡ್ರಾಲಿಕ್ ಪಂಪ್ ಉತ್ಪಾದನೆ

ವಿಪ್ರೋ-ಕವಾಸಕಿ ಕಂಪನಿಯು ಪ್ರಸ್ತುತ ಕುಂಬಳಗೋಡಿನಲ್ಲಿ ಬಾಡಿಗೆ ಆಧಾರದ ಮೇಲೆ ಉತ್ಪಾದನಾ ಘಟಕವನ್ನು ಹೊಂದಿದೆ. ಅಲ್ಲಿ ಪ್ರತಿವರ್ಷ ಸುಮಾರು 80 ಸಾವಿರ ಹೈಡ್ರಾಲಿಕ್ ಪಂಪ್‌ಗಳನ್ನು ತಯಾರಿಸಲಾಗುತ್ತಿದೆ.

ಹಾರೋಹಳ್ಳಿಯಲ್ಲಿ ನಿರ್ಮಾಣವಾಗಲಿರುವ ನೂತನ ಘಟಕವು ಕಂಪನಿಯ ಉತ್ಪಾದನಾ ಚಟುವಟಿಕೆಯ ಮಹತ್ವದ ವಿಸ್ತರಣೆಯಾಗಲಿದೆ. ಹೊಸ ಘಟಕದಲ್ಲಿ ಪ್ರತಿವರ್ಷ 2 ಲಕ್ಷಕ್ಕೂ ಹೆಚ್ಚು ಹೈಡ್ರಾಲಿಕ್ ಪಂಪ್‌ಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಪೂರೈಸುವ ಗುರಿ ಹೊಂದಲಾಗಿದೆ.

Karnataka industrial development: ಅಂತಿಮ ಅನುಮೋದನೆ

ವಿಪ್ರೋ-ಕವಾಸಕಿ ಕಂಪನಿಯ ಹೂಡಿಕೆ ಯೋಜನೆ ಅತ್ಯಂತ ಆಕರ್ಷಕವಾಗಿದ್ದು, ಅಗತ್ಯವಿರುವ ಪೂರ್ವಸಿದ್ಧತಾ ಕಾರ್ಯಗಳನ್ನು ಈಗಿನಿಂದಲೇ ಆರಂಭಿಸುವಂತೆ ಕಂಪನಿಗೆ ಸೂಚಿಸಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಈ ಮಹತ್ವದ ಹೂಡಿಕೆ ಯೋಜನೆಗೆ ಮುಂದಿನ ಸಭೆಯಲ್ಲಿ ಅಂತಿಮ ಅನುಮೋದನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ‌

ಭಾರೀ ಯಂತ್ರೋಪಕರಣಗಳಿಗೆ ಬಳಕೆ

ಕಂಪನಿ ತಯಾರಿಸುವ ಹೈಡ್ರಾಲಿಕ್ ಪಂಪ್‌ಗಳನ್ನು ಜೆಸಿಬಿ ಸೇರಿದಂತೆ ಭೂ ಸಂಬಂಧಿ ಮತ್ತು ನಿರ್ಮಾಣ ಕಾಮಗಾರಿಗಳಲ್ಲಿ ಬಳಸುವ ವಿವಿಧ ಭಾರೀ ಯಂತ್ರೋಪಕರಣಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ಹೊಸ ಘಟಕವು ಕರ್ನಾಟಕದ ಕೈಗಾರಿಕಾ ವಲಯಕ್ಕೆ ಮತ್ತಷ್ಟು ಬಲ ತುಂಬುವ ನಿರೀಕ್ಷೆಯಿದೆ. ಮಾತುಕತೆಯಲ್ಲಿ ಕಂಪನಿಯ ಹಿರಿಯ ಪ್ರಧಾನ ವ್ಯವಸ್ಥಾಪಕ ಆರ್. ರಾಜೇಶ್ , ಸಿಎಫ್‌ಒ ಉದಯ ರಾಘವನ್ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+